free House: ಇದೊಂದು ಇಂಟರೆಸ್ಟಿಂಗ್ ಕಥೆಯಾಗಿದೆ. ಪ್ರಭು ಕುಮಾರ್ ಎನ್ನುವ ವ್ಯಕ್ತಿ ಆತನ ಮಡದಿ ಹಾಗೂ ಎರಡು ಮಕ್ಕಳು ತುಂಬಾ ಸುಖವಾಗಿ ಜೀವನ ನಡೆಸುತ್ತಿದ್ದರು. ಪ್ರಭು ಕುಮಾರ್ ದಿನಸಿ ವ್ಯಾಪಾರದ ಜೊತೆಗೆ ತೋಟವನ್ನು ನೋಡಿಕೊಳ್ಳುತ್ತಾ ಅದರಲ್ಲಿ ಬಂದಂತಹ ಆದಾಯದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದರು.

ಬಹಳ ಅನ್ಯೋನ್ಯವಾಗಿ ಖುಷಿಯಿಂದ ಜೀವನ ಮಾಡುತ್ತಿದ್ದರು. ಇವರ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ 2019ರಲ್ಲಿ ನಡೆದಂತಹ ಭೂಕುಸಿತದಲ್ಲಿ ಮನೆ ಯಜಮಾನ ಪ್ರಭು ಕುಮಾರ್ ಹೊರೆತುಪಡಿಸಿ ಮಡದಿ ಮತ್ತು ಮಕ್ಕಳು ಬಲಿಯಾದರೂ. ಇದರ ಬಳಿಕ ನೋವಿನಲ್ಲಿದ್ದ ಪ್ರಭು ಕುಮಾರ್ ಗೆ ಸಾಂತ್ವನ ನೀಡಿ ಮತ್ತೊಂದು ಮದುವೆಯಾಗಲು ಒತ್ತಾಯಿಸಿದರು. ಅದರಂತೆ ಮದುವೆ ಕೂಡ ಆದನು ಆದರೂ ಮೊದಲನೇ ಹೆಂಡತಿಯ ಮೇಲೆ ಇರುವ ಪ್ರೀತಿ ಯಾವತ್ತಿಗೂ ಕಮ್ಮಿ ಆಗಿಲ್ಲ.

free House making for poor peoples

ಅವರ ಸಾವಿನ ಸ್ಮರಣೆಯ ದಿನದಂದು ಅವರ ಹೆಂಡತಿಗೆ ಇಚ್ಛೆ ಇದ್ದ ರೀತಿಯೇ ಅವರ ಗ್ರಾಮದ ಬೋಜು ಮತ್ತು ಬೋಳಚ್ಚಿ ಕುಟುಂಬಗಳಿಗೆ ಪ್ರಭು ಕುಮಾರ್ ಮನೆ ನಿರ್ಮಿಸಿ ಕೊಟ್ಟಿದ್ದಾರೆ.ಬೋಜು ಹಾಗೂ ಬೋಳಚ್ಚಿ ಅವರ ಮಕ್ಕಳಾದ ಶರಣು ಹಾಗೂ ಶಾಂತಿ ಎನ್ನುವರು ಹಳೆಯದಾದ ಹುಲ್ಲಿನ ಗುಡಿಸಿಲಲ್ಲಿ ಜೀವನ ಮಾಡುತ್ತಿದ್ದರು. ಮಳೆಗಾಲ ಬಂದ ತಕ್ಷಣ ಅವರಿಗೆ ತುಂಬಾ ಕಷ್ಟವಾಗುತ್ತಿತ್ತು. ಮನೆಯ ಒಳಗೆ ನೀರು ಸೇರುವುದು ,ಅಷ್ಟೇ ಅಲ್ಲದೆ ನೆಲವು ಕೂಡ ರಾಡಿಯಾಗಿರುತ್ತಿತ್ತು . ಅದರಿಂದ ಅವರಿಗೆ ಶೀತ ಕೆಮ್ಮು ಜ್ವರ ಸೋಂಕು ತಗಲುತ್ತಿತ್ತು‌.

ಇದನ್ನು ನೋಡಿ ಪ್ರಭು ಕುಮಾರ್ ಗೆ ಬೇಸರವಾಗುತ್ತಿತ್ತು .ಅಷ್ಟೇ ಅಲ್ಲದೆ ಅನಸುಯಾ ಅವರಿಗೂ ಕೂಡ ಇವರಿಗೆ ಮನೆ ಕಟ್ಟಿ ಕೊಡಬೇಕು ಎನ್ನುವ ಆಸೆ ಇತ್ತು. ಅದರಂತೆ ಪ್ರಭು ಕುಮಾರ್ ಅವರಿಗೆ ಮನೆ ಕಟ್ಟಿಕೊಟ್ಟು ತನ್ನ ಮಡದಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೆಂಡತಿಯ ಆಸೆ ಪಟ್ಟಂತೆ ಮನೆ ಕಟ್ಟಿಸಿ ಕೊಟ್ಟನು.

ಅವರು ಈ ಕಾರ್ಯಕ್ಕೆ ಎರಡನೇ ಮಡದಿ ಮತ್ತು ಮಕ್ಕಳು ಕೂಡ ಪ್ರೋತ್ಸಾಹಿಸಿದ್ದು ತುಂಬಾ ಖುಷಿಯ ವಿಚಾರವಾಗಿದೆ. ಬೋಜು ಹಾಗೂ ಬೋಳಚ್ಚಿ ಸಂತೋಷಪಟ್ಟು ಪ್ರಭು ಕುಮಾರ್ ಕುಟುಂಬಕ್ಕೆ ಒಳ್ಳೆಯದಾಗಲಿ ಹಾಗೂ ಮೊದಲನೇ ಮಡದಿಗೆ ಶಾಂತಿ ಸಿಗಲಿ ಎಂದು ಮನಸಾರೆ ಹರಸಿದರು. Farm Rode: ನಿಮ್ಮ ಹೊಲ ಅಥವಾ ಗದ್ದೆಗಳಿಗೆ ಹೋಗಲು ದಾರಿ ಇಲ್ವಾ? ಒಂದು ಅರ್ಜಿ ಕೊಡಿ ಸಾಕು ಸರ್ಕಾರವೇ ನಿಮಗೆ ರಸ್ತೆ ಮಾಡಿಕೊಡುತ್ತೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!