Free Bus Pass for Women Karnataka Govt: ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಿರೀಟವನ್ನು ಅಲಂಕರಿಸಿದಂತಹ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮೊದಲೇ ಜನರಿಗೆ 5 ಭರವಸೆಗಳನ್ನು ನೀಡಿತ್ತು ಅದರಂತೆ ಒಂದೊಂದಾಗಿ ಆ ಯೋಜನೆಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಹೊಸ ಹೊಸ ಶರತ್ತುಗಳನ್ನು ಅನ್ವಯಕ್ಕೆ ಮಾಡಿಕೊಂಡು ಒಂದೊಂದಾಗಿ ಯೋಜನೆಗಳನ್ನ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಇದರಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಉಚಿತ ಬಸ್ಸು ಸಂಚಾರ ಒದಗಿಸುವ ಕುರಿತು ಈ ಕೆಳಗೆ ಮಾಹಿತಿಯನ್ನು ಒದಗಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವುದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಮುಖ್ಯಮಂತ್ರಿಗಳು ಇದರ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದು ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ ಈ ಯೋಜನೆಗೂ ಸಹ ಕೆಲವೊಂದು ಶರತ್ತು ಮತ್ತು ನಿಬಂಧನೆಗಳು ಅನ್ವಯವಾಗುತ್ತವೆ ಎಂದು ಸಿದ್ದರಾಮಯ್ಯ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ ಈ ಮೊದಲು ರಾಜ್ಯದ ಎಲ್ಲಾ ಮಹಿಳೆಯರಿಗೂ ಈ ಸೌಲಭ್ಯ ದೊರೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು ಆದರೆ ಇದೀಗ ಶರತ್ತುಗಳನ್ನು ಅನ್ವಯ ಮಾಡಲಾಗಿದೆ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಈ ಕುರಿತಾದ ಆದೇಶ ಪತ್ರವನ್ನು ಟ್ವೀಟ್ ಮಾಡಿದ್ದು ಮೇ 20ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸುತ್ತಾರೆ. ಆದೇಶ ಪತ್ರಿಕೆಯಲ್ಲಿ ರಾಜ್ಯದ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸಮೃದ್ಧಿ ಒದಗಿಸಲು ತಾತ್ಕಾಲಿಕ ಅನುಮೋದನೆಯನ್ನ ನೀಡಿ ಆದೇಶಿಸಿದ್ದೇನೆ ಎಂದು ಲೇಖಿಸಲಾಗಿದೆ.
ನೂತನ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆ ಯೋಜನೆಗಳಿಗೆ ಮೊದಲ ತಾತ್ಕಾಲಿಕ ಅನುಮೋದನೆಯನ್ನು ನೀಡಿದ್ದು ಐದು ಹೊಸ ಯೋಜನೆಗಳ ಗ್ಯಾರಂಟಿಗಳಲ್ಲಿ ಸರ್ಕಾರದಿಂದ ತಾತ್ಕಾಲಿಕ ಆದೇಶ ಹೊರಗಡೆ ಬಿದ್ದಿದೆ ಇನ್ನು ಇದಕ್ಕೆ ಇರುವ ಶರತ್ತು ಮತ್ತು ನಿಯಮಗಳನ್ನು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದರ ಮೂಲಕ ಜನರಿಗೆ ತಿಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು: ಯೋಜನೆಗೆ ಅಗತ್ಯವಿರುವ ಕೆಲವು ಪ್ರಮುಖ ದಾಖಲೆಗಳು ಈ ಕೆಳಗಿನಂತಿವೆ: ಮಹಿಳೆಯರ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ: ಯೋಜನೆಯ ಲಾಭ ಪಡೆಯಲು, ಎಲ್ಲಿಯೂ ಯಾವುದೇ ಅರ್ಜಿ ಅಗತ್ಯವಿಲ್ಲ. ಕರ್ನಾಟಕ ಸರ್ಕಾರದ ರನ್ ಬಸ್‌ಗಳು ಮಾತ್ರ ಮಹಿಳೆಯರಿಗೆ ಉಚಿತ ಬಸ್ ಸೇವೆಯ ಪ್ರಯೋಜನಕ್ಕೆ ಅರ್ಹವಾಗಿವೆ. ಉಚಿತ ವೆಚ್ಚದ ಬಸ್ ಸೇವೆಯನ್ನು ಕರ್ನಾಟಕ ರಾಜ್ಯದ ಗಡಿಯೊಳಗೆ ಮಾತ್ರ ನೀಡಲಾಗುವುದು. ಕರ್ನಾಟಕ ಸರ್ಕಾರವು ಸಂಪೂರ್ಣ ಯೋಜನೆಯ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಇದನ್ನೂ ಓದಿ: Actor Srinivas Murthy: ಹಣ ಮನೆ ಸೈಟ್ ಎಲ್ಲದನ್ನು ಕಳೆದುಕೊಂಡು ಬಾಡಿಗೆ ಮನೆಯಲ್ಲಿರುವ ಖ್ಯಾತ ನಟ, ನಿಜಕ್ಕೂ ಇವರ ಬಾಳಲ್ಲಿ ನಡೆದದ್ದೇನು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ