ಕರ್ನಾಟಕ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಆಹಾರ ಬಂದಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹಾಗಿದ್ದರೆ ಇದರ ಕುರಿತಂತೆ ಸಂಪೂರ್ಣ ವಿವರಗಳನ್ನು ಇಂದಿನ ಲೇಖನಿಯಲ್ಲಿ ತಿಳಿಯೋಣ ಬನ್ನಿ. ಹುದ್ದೆಯ ಹೆಸರು ವಲಯ ಅರಣ್ಯಾಧಿಕಾರಿಯಾಗಿದ್ದು 10 ಹುದ್ದೆಗಳು ಖಾಲಿ ಇವೆ. ಬಿಎಸ್ಸಿ ಅರಣ್ಯ ಶಾಸ್ತ್ರ ಪದವಿ ಮಾಡಿದವರಿಗೆ ಐದು ಹುದ್ದೆಗಳು ಹಾಗೂ ಬಿ ಎಸ್ ಸಿ ವಿಜ್ಞಾನ ಪದವಿಯನ್ನು ಪಡೆದವರಿಗೆ ಐದು ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

ಇದೇ ತಿಂಗಳ 20 ರಿಂದ ಅರ್ಜಿ ಸಲ್ಲಿಕೆಯ ದಿನಾಂಕ ಪ್ರಾರಂಭವಾಗಿದ್ದು ನವೆಂಬರ್ 19ರ ಸಂಜೆ 5:30ರ ತನಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುತ್ತದೆ. ಇನ್ನು ಅರ್ಜಿ ಶುಲ್ಕವನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 23 ಕೊನೆಯ ದಿನಾಂಕ ಆಗಿರುತ್ತದೆ. ಇನ್ನು ಶುಲ್ಕದ ಬಗ್ಗೆ ಮಾತನಾಡುವುದಾದರೆ ಸಾಮಾನ್ಯವಾಗಿ ವರ್ಗ ಹಾಗೂ ಒಬಿಸಿ ಅವರಿಗೆ 220 ಗಳು ಆಗಿರುತ್ತದೆ ಹಾಗೂ ಎಸ್ಸಿ ಎಸ್ಟಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 120 ರೂಪಾಯಿಗಳು ಶುಲ್ಕವಾಗಿರುತ್ತದೆ.

ಇನ್ನು ಸಂಬಳ 40,900 ಇಂದ ಪ್ರಾರಂಭವಾಗಿ 78200 ವರೆಗೆ ಇರುತ್ತದೆ. ವಿದ್ಯಾರ್ಹತೆಯ ಬಗ್ಗೆ ಗಮನಹರಿಸುವುದಾದರೆ ಸರ್ಕಾರದಿಂದ ಅಂಗೀಕೃತವಾಗಿರುವ ವಿಶ್ವವಿದ್ಯಾನಿಲಯದಿಂದ ಕೃಷಿ ಅರಣ್ಯಶಾಸ್ತ್ರ ಪಶು ವೈದ್ಯಕೀಯ ತೋಟಗಾರಿಕೆ ಮೀನುಗಾರಿಕೆ ವನ್ಯಜೀವಿ ಪರಿಸರ ವಿಜ್ಞಾನ ರಾಸಾಯನ ಶಾಸ್ತ್ರ ಭೂವಿಜ್ಞಾನ ಗಣಿತಶಾಸ್ತ್ರ ಭೌತಶಾಸ್ತ್ರ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ಸಂಖ್ಯಾಶಾಸ್ತ್ರ ಕಂಪ್ಯೂಟರ್ ಅಪ್ಲಿಕೇಶನ್ ಇವುಗಳಲ್ಲಿ ಯಾವುದಾದರೂ ಪದವಿಯನ್ನು ಪಡೆದುಕೊಂಡಿರಬೇಕು.

ಇಲ್ಲವೇ ಸರ್ಕಾರದಿಂದ ಅಂಗೀಕೃತ ಗೊಂಡಿರುವ ವಿಶ್ವವಿದ್ಯಾನಿಲಯದಿಂದ ಕೃಷಿ ಕೆಮಿಕಲ್ಸ್ ಸಿವಿಲ್ ಎಲೆಕ್ಟ್ರಾನಿಕಲ್ ಎಲೆಕ್ಟ್ರಿಕ್ಸ್ ಮೆಕ್ಯಾನಿಕಲ್ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರ್ ಪದವಿಯನ್ನು ಮುಗಿಸಿರಬೇಕು.

ವಯಸ್ಸಿನ ಅರ್ಹತೆಯನ್ನು ನೋಡುವುದಾದರೆ 18 ರಿಂದ 28 ವಯಸ್ಸಿನ ನಡುವೆ ಇರಬೇಕು. ಅದು ಸಾಮಾನ್ಯ ವರ್ಗದವರಿಗಾದರೆ ಎಸ್ಸಿ ಎಸ್ಟಿ ಪ್ರವರ್ಗ 1 ಅವರಿಗೆ ವಯಸ್ಸಿನ ಸಡಿಲಿಕೆ ಇದ್ದು 33 ಮೀರಿರಬಾರದು ಹಾಗೂ ವಿಶಿಷ್ಟ ಪಂಗಡದವರು 31 ಮೀರಿರಬಾರದು. ಅಭ್ಯರ್ಥಿಗಳನ್ನು ಪರೀಕ್ಷೆ – ಸಾಮಾನ್ಯ ಜ್ಞಾನ ಮತ್ತು ಐಚ್ಚಿಕ ವಿಷಯ ಎನ್ನುವ ಎರಡು ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. 150 ಅಂಕಗಳ ಈ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆ ಆದವರನ್ನು ಶಾರ್ಟ್ ಲಿಸ್ಟ್ ಮಾಡಿದ ನಂತರ ದೈಹಿಕ ಪರೀಕ್ಷೆಯನ್ನು ನಡೆಸಿ ಕೊನೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಒಂದು ವೇಳೆ ನೀವು ಕೂಡ ಈ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿದ್ದರೆ ತಪ್ಪದೇ ಅರ್ಜಿಸಲ್ಲಿಸಿ.

Leave a Reply

Your email address will not be published. Required fields are marked *