Foot fungus problem: ಕಾಲಿನಲ್ಲಿ ಫಂಗಸ್ ಉಂಟಾಗಲು ಕಾರಣ ಏನೆಂದರೆ ನೀರಿನಲ್ಲಿ ಹೆಚ್ಚು ಸಮಯ ತಮ್ಮ ಕಾಲುಗಳನ್ನು ಅದ್ದಿಕೊಂಡು ನಿಂತುಕೊಳ್ಳುವುದು ಹಾಗೆಯೆ ಗಲೀಜು ನೀರಿನಲ್ಲಿ ತೊಳೆಯುವುದು. ಅಷ್ಟೇ ಅಲ್ಲದೆ ನಮ್ಮ ಕಾಲು ಮತ್ತು ಕಾಲುಗಳ ಉಗುರಿನ ನಡುವೆ ಸರಿಯಾದ ರೀತಿಯಲ್ಲಿ ರಕ್ತ ಸಂಚಾರ ಆಗದೆ ಇರುವ ಕಾರಣದಿಂದ ಈ ತರಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬೇಕಾದರೆ ನಾವು ಮಾಡಬೇಕಾದಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ನೋಡೋಣ.
ಮೊದಲನೆಯದಾಗಿ ಒಂದು ಚಿಕ್ಕ ಶುಂಠಿ ಹಾಗೂ ಒಂದು ಗಡ್ಡೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಂಡು ಒಂದು ಟಬ್ ನೀರನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಈ ಪೇಸ್ಟನ್ನು ಹಾಕಿ ಅದರ ಜೊತೆ ಸ್ವಲ್ಪ ವಿನೆಗರ್ ಮಿಕ್ಸ್ ಮಾಡಿ ನಂತರ ನಿಮ್ಮ ಕಾಲನ್ನು ಆ ನೀರಿನಲ್ಲಿ ಹದಿನೈದು ನಿಮಿಷಗಳವರೆಗೆ ನೆನೆಸಿಡಿ ಈ ರೀತಿ ದಿನಕ್ಕೆ ಎರಡು ಬಾರಿಯಂತೆ ಮೂರರಿಂದ ನಾಲ್ಕು ದಿನಗಳವರೆಗೂ ಮಾಡಬೇಕು.
ಎರಡನೆಯ ಔಷಧ ಟೀ ಟ್ರೀ ಆಯಿಲ್ ಆಂಟಿವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನ ಹೊಂದಿರುತ್ತದೆ ಇದನ್ನು ಸಾಮಾನ್ಯವಾಗಿ ಅನೇಕ ಶಿಲೀಂದ್ರಗಳ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ನಿಮ್ಮ ಕಾಲನ್ನು ಮೊದಲು ಸ್ವಚ್ಛವಾಗಿ ತೊಳೆದು ಕಾಲಿನ ಪಾದ ಉಗುರು ಮತ್ತು ಬೆರಳುಗಳ ನಡುವೆ ಇದನ್ನ ಲೇಪನ ಮಾಡಿ ಮಸಾಜ್ ಮಾಡಿಕೊಳ್ಳಬೇಕು. ಈ ರೀತಿ ದಿನಕ್ಕೆ ಎರಡು ಬಾರಿಯಂತೆ ಮೂರರಿಂದ ನಾಲ್ಕು ದಿನಗಳವರೆಗೆ ಮಾಡಿಕೊಳ್ಳಬೇಕು ನಿವಾರಣೆಯಾಗುತ್ತದೆ.
ಮೂರನೆಯದಾಗಿ ಬೇವಿನ ಎಣ್ಣೆ ಈ ಎಣ್ಣೆಯು ಆಂಟಿ ಫಂಗಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ ಇದನ್ನು ಕೂಡ ಈ ರೀತಿಯಲ್ಲೇ ಉಪಯೋಗಿಸಬೇಕು ಅಂದರೆ ನಿಮ್ಮ ಕಾಲುಗಳನ್ನ ಸ್ವಚ್ಛವಾಗಿ ತೊಳೆದು ಅದನ್ನು ಅಪ್ಲೈ ಮಾಡಬೇಕು ಈ ಟಿಪ್ಸ್ ಗಳನ್ನು ಮೂರರಿಂದ ನಾಲ್ಕು ದಿನಗಳವರೆಗೆ ಸರಿಯಾಗಿ ಮಾಡಿದ್ದಲ್ಲಿ ನಿಮ್ಮ ಕಾಲುಗಳು ಸಂಪೂರ್ಣವಾಗಿ ಗುಣವಾಗುತ್ತವೆ.