ಕೆಲವರು ಜ್ವರ ಕಾಣಿಸಿಕೊಂಡಾಗ ತುಂಬಾ ಹೆದರಿಕೊಳ್ಳುತ್ತಾರೆ ಆಸ್ಪತ್ರೆಗಳಿಗೆ ಹೋಗುತ್ತಾರೆ ಕೆಲವೊಮ್ಮೆ ಆಸ್ಪತ್ರೆಗಳಿಗೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಮನೆಯಲ್ಲಿಯೇ ಕೆಲವೊಂದು ಔಷಧಿಗಳನ್ನು ತಯಾರಿಸಿ ಕೊಳ್ಳಬೇಕಾಗುತ್ತದೆ. ಇವತ್ತು ನಾವು ನಿಮಗೆ ಜ್ವರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಹಾಯವಾಗುವಂತಹ ನಾಲ್ಕು ಮನೆ ಮದ್ದುಗಳ ಬಗ್ಗೆ ತಿಳಿಸಿಕೊಡುತ್ತೇವೆ. ಔಷಧಿಗಳನ್ನು ತಯಾರಿಸುವುದಕ್ಕೆ ಯಾವ ವಸ್ತುಗಳು ಬೇಕು ಮತ್ತು ಅವುಗಳನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮೊದಲನೇದು, ಒಂದು ಪಾತ್ರೆಗೆ ಒಂದು ಲೋಟ ಆಗುವಷ್ಟು ನೀರನ್ನು ಹಾಕಿಕೊಳ್ಳಬೇಕು ಅದನ್ನು ಕುದಿಸುವುದಕ್ಕೆ ಇಟ್ಟು ಅದಕ್ಕೆ ಹತ್ತರಿಂದ ಹನ್ನೆರಡು ತುಳಸಿ ಎಲೆಗಳನ್ನು ಹಾಕಬೇಕು. ನಂತರ ಅದಕ್ಕೆ ಅರ್ಧ ಚಮಚದಷ್ಟು ಒಣಶುಂಠಿಯ ಪುಡಿಯನ್ನು ಹಾಕಬೇಕು. ತುಳಸಿ ಯಾವಾಗಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗಾಗಿ ಜ್ವರ ಬಂದಾಗ ತುಳಸಿಯನ್ನು ಉಪಯೋಗಿಸುವುದು ಒಳ್ಳೆಯದು. ಇದನ್ನು ಚೆನ್ನಾಗಿ ಕುದಿಸಿ ನಂತರ ಅದಕ್ಕೆ ಸ್ವಲ್ಪ ಕೆಂಪು ಕಲ್ಲು ಸಕ್ಕರೆ ಸೇರಿಸಬೇಕು

ಕೆಂಪು ಕಲ್ಲುಸಕ್ಕರೆಯ ಕೂಡ ದೇಹಕ್ಕೆ ತುಂಬಾ ಒಳ್ಳೆಯದು ಕಫ ಆದಾಗ ಅದನ್ನು ಕಡಿಮೆ ಮಾಡುವುದಕ್ಕೆ ಕೆಂಪು ಕಲ್ಲುಸಕ್ಕರೆ ತುಂಬಾ ಒಳ್ಳೆಯದು. ಚೆನ್ನಾಗಿ ಕುದಿದ ನಂತರ ಒಲೆಯನ್ನು ಆರಿಸಿ ಅದನ್ನು ಸೋಸಿಕೊಳ್ಳಬೇಕು. ಸ್ವಲ್ಪ ಆರಿದ ನಂತರ ಅದನ್ನು ಕುಡಿಯಬೇಕು ಒಂದು ಲೋಟ ಕಷಾಯವನ್ನು ಮೂರು ಪಾಲು ಮಾಡಿ ಒಂದು ದಿನದಲ್ಲಿ ಮೂರು ಸಾರಿ ಕುಡಿಯಬೇಕು. ಹೀಗೆ ಮಾಡುವುದರಿಂದ ಜ್ವರ ಆದಷ್ಟು ಬೇಗ ಕಡಿಮೆಯಾಗುತ್ತದೆ.

ಎರಡನೇ ಮನೆಮದ್ದನ್ನು ಮಾಡುವುದು ಹೇಗೆ ಎಂದರೆ ಒಂದು ಪಾತ್ರೆಗೆ ಮುಕ್ಕಾಲು ಲೋಟದಷ್ಟು ನೀರನ್ನು ಹಾಕಿಕೊಳ್ಳಬೇಕು ನಂತರ ಅದನ್ನು ಕುದಿಯುವುದಕ್ಕೆ ಇಟ್ಟು ಅದಕ್ಕೆ ಒಂದು ಚಮಚದಷ್ಟು ಕೊತ್ತಂಬರಿ ಕಾಳುಗಳನ್ನು ಹಾಕಬೇಕು. ಅದನ್ನ ಚೆನ್ನಾಗಿ ಕುದಿಸಬೇಕು ದನಿಯಾದಲ್ಲಿ ಕೂಡ ಸಾಕಷ್ಟು ಔಷಧೀಯ ಗುಣಗಳಿವೆ. ಕೊತ್ತಂಬರಿ ನೀರು ಅಥವಾ ಕಷಾಯವನ್ನು ಮಾಡಿ ಕುಡಿಯುವುದರಿಂದಲೂ ಜ್ವರ ಬೇಗ ಕಡಿಮೆಯಾಗುತ್ತದೆ.

ಕೊತ್ತಂಬರಿ ನೀರು ಚೆನ್ನಾಗಿ ಕುದ್ದ ನಂತರ ಒಲೆಯನ್ನೂ ಆರಿಸಿ ಅದನ್ನ ಮತ್ತೆ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಬೇಕು ನಿಮಗೆ ಸಿಹಿ ಬೇಕೆನಿಸಿದರೆ ಅದಕ್ಕೆ ಸ್ವಲ್ಪ ಬೆಲ್ಲ ಅಥವಾ ಕಲ್ಲುಸಕ್ಕರೆಯನ್ನ ಸೇರಿಸಿಕೊಳ್ಳಬಹುದು. ಈ ಕಷಾಯವನ್ನು ದಿನಕ್ಕೆ ಮೂರು ಸಾರಿ ಕುಡಿಯಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಮೂರನೆಯ ಮನೆ ಮದ್ದು, ಒಂದು ಲೋಟ ನೀರಿನಲ್ಲಿ ಹತ್ತರಿಂದ ಹದಿನೈದು ಒಣದ್ರಾಕ್ಷಿಯನ್ನು ನೆನೆಹಾಕಬೇಕು.ಎರಡರಿಂದ ಮೂರು ತಾಸು ನೀರಿನಲ್ಲಿ ನೆನೆ ಹಾಕಿದ ಹತ್ತರಿಂದ ಹದಿನೈದು ಒಣದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ಒಂದು ಬೌಲ್ ನಲ್ಲಿ ಹಾಕಿ ಕೈಯಿಂದ ಕಿವುಚಿಕೊಳ್ಳಬೇಕು. ಒಣದ್ರಾಕ್ಷಿ ಕಫವನ್ನು ನಿವಾರಿಸುವುದಕ್ಕೆ ತುಂಬಾ ಒಳ್ಳೆಯದು ನಿಮಗೆ ಜ್ವರದ ಜೊತೆ ಕಫ ಕಾಣಿಸಿಕೊಂಡರೆ ಒಣದ್ರಾಕ್ಷಿಯನ್ನು ಬಳಸುವುದರಿಂದ ಉಪಯೋಗವಾಗುತ್ತದೆ ಜೊತೆಗೆ ಒಣದ್ರಾಕ್ಷಿಯನ್ನು ಬಳಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕೂಡ ವೃದ್ಧಿಯಾಗುತ್ತದೆ

ದೇಹದಲ್ಲಿ ರಕ್ತ ಅಧಿಕವಾದಾಗ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ದ್ರಾಕ್ಷಿಯನ್ನು ಚೆನ್ನಾಗಿ ಕಿವುಚಿದ ನಂತರ ಅದನ್ನು ನೆನೆಸಿಟ್ಟ ನೀರಿಗೆ ಮತ್ತೆ ಹಾಕಬೇಕು. ನಂತರ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಬೇಕು. ಒಂದು ಲೋಟ ತಯಾರಿಸಿರುವ ದ್ರಾಕ್ಷಿ ನೀರನ್ನು ಅರ್ಧ ಅರ್ಧದಂತೆ ದಿನಕ್ಕೆ ಎರಡು ಸಾರಿ ಕುಡಿಯಬಹುದು. ಈ ರೀತಿ ಮಾಡಿ ಕುಡಿಯುವುದರಿಂದ ಜ್ವರ ಆದಷ್ಟು ಬೇಗ ಕಡಿಮೆಯಾಗುತ್ತದೆ.

ಜ್ವರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಾಲ್ಕನೇ ಮನೆಮದ್ದು, ಇದಕ್ಕೆ ಬೇಕಾಗಿರುವುದು ತುಳಸಿ ಮತ್ತು ಕಾಳು ಮೆಣಸು. ಮೂರು ತುಳಸಿ ಕುಡಿ ಹಾಗೂ ಆರು ಕಾಳುಮೆಣಸನ್ನು ತೆಗೆದುಕೊಂಡು ತುಳಸಿ ಕುಡಿ ಸಿಗದಿದ್ದರೆ ಐದರಿಂದ ಆರು ತುಳಸಿ ಎಲೆಗಳನ್ನು ತೆಗೆದುಕೊಳ್ಳಬಹುದು. ತೆಗೆದುಕೊಂಡಿರುವಂತಹ ತುಳಸಿ ಮತ್ತು ಕಾಳುಮೆಣಸನ್ನು ಒಟ್ಟಿಗೆ ಚೆನ್ನಾಗಿ ಜಜ್ಜಬೇಕು ನಂತರ ಅದನ್ನು ಚೆನ್ನಾಗಿ ಅಗಿದು ನುಂಗಬೇಕು.

ನಿಧಾನವಾಗಿ ಅಗಿದು ಅದರ ರಸವನ್ನು ನುಂಗುತ್ತಾ ಬಂದರೆ ಜ್ವರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾ ಸಹಾಯವಾಗುತ್ತದೆ. ಇದನ್ನು ದಿನಕ್ಕೆ ಎರಡು ಸಾರಿ ಮಾಡಿದರೆ ಆದಷ್ಟು ಬೇಗ ಜ್ವರ ಕಡಿಮೆಯಾಗುತ್ತದೆ. ಈ ರೀತಿಯಾಗಿ ತುಂಬಾ ಸುಲಭವಾಗಿ ಜ್ವರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿಯೇ ಸರಳ ಔಷಧಿಗಳನ್ನು ತಯಾರಿಸಿಕೊಳ್ಳಬಹುದು. ಮೇಲೆ ತಿಳಿಸಿರುವ ಮನೆಮದ್ದು ಗಳಲ್ಲಿ ಯಾವುದಾದರೂ ಒಂದು ಮನೆಮದ್ದನ್ನು ಮಾಡಿಕೊಂಡರು ಜ್ವರ ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!