fish recipe eating tips for kannada: ಮಾಂಸಾಹಾರ ಪ್ರಿಯರಿಗೆ ಚಿಕನ್ ಹಾಗೂ ಮೀನು ಎಂದರೆ ತುಂಬಾ ಇಷ್ಟ. ಚಿಕನ್ ಹಾಗೂ ಮೀನನ್ನು ಬಳಸಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಿಕೊಂಡು ತಿನ್ನುತ್ತಾರೆ. ಚಿಕನ್ ಗಿಂತಲೂ ಹೆಚ್ಚು ಮೀನು ಎಂದರೆ ಪ್ರೀತಿ. ಮೀನಿನ ಸಾರು, ಬಿರಿಯಾನಿ, ಇನ್ನೂ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಆದರೆ ಮೀನಿನ ಮುಳ್ಳು ಗಂಟಲಿನಲ್ಲಿ ಸಿಕ್ಕಿಕೊಂಡರೆ ಏನು ಮಾಡಬೇಕು? ಹೇಗೆ ತೆಗೆಯಬೇಕು ಎಂಬುದನ್ನು ಈ ಮಾಹಿತಿಯ ಮೂಲಕ ತಿಳಿಯೋಣ.
ಮಂಗಳೂರು ಹಾಗೂ ಸಮುದ್ರ ತೀರದ ಪ್ರದೇಶಗಳಲ್ಲಂತೂ ಮೀನು ಇಲ್ಲದೆ ಊಟವೇ ಇಲ್ಲ. ಅಡುಗೆಯಲ್ಲಿ ಒಂದು ಪದಾರ್ಥವಾದರೂ ಮೀನಿನದ್ದಾಗಿರಬೇಕು. ಆದರೆ ಒಂದು ಸಮಸ್ಯೆ ಎಂದರೆ ಮೀನಿನ ಮುಳ್ಳು. ತುಂಬಾ ಜಾಗ್ರತೆವಹಿಸಿದರೂ ಮೀನಿನ ಮುಳ್ಳು ಗಂಟಲಿಗೆ ಸಿಕ್ಕಿಕೊಂಡು ಬಿಡುತ್ತದೆ. ಹಾಗೆ ಗಂಟಲಲ್ಲಿ ಮೀನು ಸಿಕ್ಕಿಕೊಂಡಾಗ ಏನು ಮಾಡಬೇಕೆಂದರೆ, ಮೊದಲು ಯಾರ ಗಂಟಲಿನಲ್ಲಿ ಮುಳ್ಳು ಸಿಕ್ಕಿಕೊಂಡಿದೆಯೋ ಆ ವ್ಯಕ್ತಿಯನ್ನು ಬಗ್ಗಲು ಹೇಳಬೇಕು. ಬಾಯಿ ತೆರೆದುಕೊಂಡಿರಬೇಕು. ಮತ್ತೊಬ್ಬ ಯಾರಾದರೂ ಬಗ್ಗಿದ ವ್ಯಕ್ತಿಯ ಬೆನ್ನಿನ ಮೇಲೆ ನಿಧಾನವಾಗಿ ಗುದ್ದಬೇಕು. ಇದರಿಂದ ಮುಳ್ಳು ಹೊರ ಬರುತ್ತದೆ. ಎರಡನೆಯದಾಗಿ ಗಂಟಲಿನಲ್ಲಿ ಮುಳ್ಳು ಸಿಕ್ಕಿಕೊಂಡಾಗ ಅಗೆಯದೆಯೆ ಒಂದು ಕಪ್ ನಷ್ಟು ಅನ್ನವನ್ನು ನುಂಗಬೇಕು. ಹೀಗೆ ಅನ್ನ ನುಂಗಿ ಆದ ಮೇಲೆ ಒಂದು ಗ್ಲಾಸ್ ನೀರು ಕುಡಿಯಬೇಕು. ಇದರಿಂದ ಗಂಟಲಿನಲ್ಲಿ ಸಿಕ್ಕಿಕೊಂಡ ಮುಳ್ಳು ಹೋಗುತ್ತದೆ.
ಮೂರನೆಯದಾಗಿ ಗಂಟಲಿನಲ್ಲಿ ಮುಳ್ಳು ಸಿಕ್ಕಿದಾಗ ಬಾಳೆ ಹಣ್ಣಿನ ಅರ್ಧ ಭಾಗವನ್ನು ಹಾಗೆಯ ನುಂಗಿ ತಕ್ಷಣಕ್ಕೆ ನೀರು ಕುಡಿಯಬೇಕು. ಇದರಿಂದ ಮುಳ್ಳು ಹೋಗುತ್ತದೆ. ನಾಲ್ಕನೆಯದಾಗಿ ಕಡಲೆ ಬೀಜ ಎಂದರೆ ಶೇಂಗಾವನ್ನು ಎರಡು ಚಮಚದಷ್ಟು ಅಗೆದು ನುಂಗಬೇಕು ಇದರಿಂದಲೂ ಮುಳ್ಳು ಹೋಗುತ್ತದೆ. ಐದನೇಯದಾಗಿ ಬ್ರೇಡ್ ಪೀಸ್ ತೆಗೆದುಕೊಂಡು ಅದರ ಎರಡು ಕಡೆಗಳಲ್ಲಿ ಪೀ ನಟ್ ಬಟರ್ ಸವರಬೇಕು. ನಂತರ ಬಾಯಲ್ಲಿ ಬ್ರೇಡ್ ಮೃದುವಾಗುವವರೆಗೂ ಹಾಗೆ ಇಟ್ಟುಕೊಂಡು, ಮೆದುವಾದ ಮೇಲೆ ಅಗೆಯದೆ ನುಂಗಬೇಕು. ಹೀಗೆ ನುಂಗಿದ ತಕ್ಷಣವೇ ನೀರು ಕುಡಿಯಬೇಕು. ಇದರಿಂದಾಗಿ ಮುಳ್ಳು ಬ್ರೇಡ್ ಗೆ ಅಂಟಿಕೊಂಡು ಹೊಟ್ಟೆ ಸೇರುತ್ತದೆ.
ಇವೆಲ್ಲವೂ ಮಾಡಿದರೂ ಮುಳ್ಳು ಹೋಗದೆ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ಮತ್ತಷ್ಟು ಬೇರೆ ಪ್ರಯೋಗ ಮಾಡಲು ಹೊರಟರೆ ಗಂಟಲ ಒಳಭಾಗದಲ್ಲಿ ಗಾಯಗಳಾಗಿ, ಇನ್ ಪೆಕ್ಷನ್ ಆಗಬಹುದು. ಮೀನು ತಿನ್ನುವಾಗ ಜಾಗ್ರತೆ ಇರಲಿ.