Film Actress Marriage Story: ಚಿತ್ರರಂಗದಲ್ಲಿ ಸಾಕಷ್ಟು ನಟಿಯರಿದ್ದಾರೆ, ಆದರೆ ಕೆಲವು ನಟಿಯರು ಒಂದಕ್ಕಿಂತ ಹೆಚ್ಚು ಮದುವೆ ಆಗುತ್ತಾರೆ. ಇಂದು ನಾವು ನಿಮಗೆ ಚಿತ್ರರಂಗದಲ್ಲಿದ್ದು ಒಂದಕ್ಕಿಂತ ಹೆಚ್ಚು ಮದುವೆ ಆಗಿರುವ ನಟಿಯರ ಬಗ್ಗೆ ತಿಳಿಸಿಕೊಡುತ್ತೇವೆ..

ಪವಿತ್ರಾ ಲೋಕೇಶ್ :- ಇವರು ಮೊದಲಿಗೆ ಹೈದರಾಬಾದ್ ಗೆ ಸೇರಿದ ಇಂಜಿನಿಯರ್ ಒಬ್ಬರ ಜೊತೆಗೆ ಮದುವೆಯಾಗಿದ್ದರು. ಅವರಿಂದ ಬೇರೆಯಾದ ಬಳಿಕ 2007ರಲ್ಲಿ ಕನ್ನಡದ ನಟ ಸುಚೇಂದ್ರ ಪ್ರಸಾದ್ ಅವರೊಡನೆ ಮದುವೆಯಾದರು. ಈ ಜೋಡಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಈಗ ಇವರು ತೆಲುಗಿನ ನಟ ನರೇಶ್ ಅವರೊಡನೆ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಅನು ಪ್ರಭಾಕರ್ :– ಇವರು ಮೊದಲಿಗೆ ಕನ್ನಡದ ಹಿರಿಯನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರೊಡನೆ ಮದುವೆಯಾಗಿದ್ದರು. ಆದರೆ ಅವರಿಂದ ದೂರವಾದರು ಬಳಿಕ 2016ರಲ್ಲಿ ಕನ್ನಡದ ನಟ ರಘು ಮುಖರ್ಜಿ ಅವರೊಡನೆ ಮದುವೆಯಾಗಿದ್ದಾರೆ. ಇವರಿಗೆ ನಂದನ ಹೆಸರಿನ ಮುದ್ದಾದ ಮಗಳು ಇದ್ದಾಳೆ.

ಸುಧಾರಾಣಿ :- ಚಂದನವನದ ಹಿರಿಯ ನಟಿ ಆಗಿರುವ ಸುಧಾರಾಣಿ ಅವರು ಮೊದಲಿಗೆ ಅಮೆರಿಕಾ ಮೂಲದ ಡಾಕ್ಟರ್ ಸಂಜಯ್ ಅವರೊಡನೆ ಮದುವೆಯಾಗಿದ್ದರು. 5 ವರ್ಷಗಳ ನಂತರ ಅವರಿಂದ ದೂರವಾಗಿ, ಭಾರತಕ್ಕೆ ವಾಪಸ್ ಬಂದ ನಂತರ ಅವರ ರಿಲೇಟಿವ್ ಆಗಿದ್ದ ಗೋವರ್ಧನ್ ಅವರೊಡನೆ ಮದುವೆಯಾದರು. ಇವರಿಗೆ ನಿಧಿ ಹೆಸರಿನ ಮಗಳಿದ್ದು, ಇವರ ಮಗಳು ಈಗ ಲಾ ಓದುತ್ತಿದ್ದಾರೆ.

ಶ್ರುತಿ :- ನಟಿ ಶ್ರುತಿ ಅವರು ಕನ್ನಡದ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಅವರೊಡನೆ ಮದುವೆಯಾದರು. ಈ ಜೋಡಿಗೆ ಗೌರಿ ಹೆಸರಿನ ಮಗಳು ಇದ್ದಾಳೆ. ಆದರೆ ಇವರಿಬ್ಬರು ವೈಯಕ್ತಿಕ ಕಾರಣಗಳಿಂದ ದೂರವಾದರು. ಬಳಿಕ ಚಂದ್ರಚೂಡ್ ಅವರೊಡನೆ ಮದುವೆಯಾದರು, ಆದರೆ ಈ ಮದುವೆ ಕೂಡ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ.

ರಾಧಿಕಾ ಕುಮಾರಸ್ವಾಮಿ :- ಬಹಳ ಚಿಕ್ಕವರಿದ್ದಾಗ 14ನೇ ವಯಸ್ಸಿನಲ್ಲಿ ರತನ್ ಕುಮಾರ್ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದರು ರಾಧಿಕಾ, ಆದರೆ ಈ ದಾಂಪತ್ಯ ಹೆಚ್ಚು ದಿನಗಳು ಉಳಿಯಲಿಲ್ಲ. 2002ರಲ್ಲಿ ಇವರ ಪತಿ ನಿಧನರಾದರು, ಬಳಿಕ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ರಾಧಿಕಾ ಅವರು 2006ರಲ್ಲಿ ರಾಜಕಾರಣಿ ಹೆಚ್.ಡಿ ಕುಮಾರಸ್ವಾಮಿ ಅವರೊಡನೆ ಮದುವೆಯಾಗಿ ಅವರಿಗೆ ಶಮಿಕಾ ಹೆಸರಿನ ಮಗಳು ಇದ್ದಾಳೆ. ಈ ವಿಚಾರವನ್ನು 2010ರಲ್ಲಿ ಹೇಳಿದ್ದರು ರಾಧಿಕಾ.

ಲಕ್ಷ್ಮಿ :- 70 ಮತ್ತು 80ರ ದಶಕದ ಸ್ಟಾರ್ ನಟಿಯರಲ್ಲಿ ಒಬ್ಬರು ಲಕ್ಷ್ಮಿ ಇವರು. ಇವರು 1969ರಲ್ಲಿ ಇನ್ಷುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರನ್ ಅವರೊಡನೆ ಮದುವೆಯಾದರು. ಆದರೆ 1974ರಲ್ಲಿ ಇವರಿಂದ ವಿಚ್ಛೇದನ ಪಡೆದು, 1976ರಲ್ಲಿ ನಟ ಮೋಹನ್ ಶರ್ಮಾ ಅವರೊಡನೆ ಮದುವೆಯಾದರು. ಈ ಮದುವೆ ಕೂಡ ಹೆಚ್ಚು ಸಮಯ ಉಳಿಯಲಿಲ್ಲ, 1980ರಲ್ಲಿ ಇವರಿಂದ ವಿಚ್ಛೇದನ ಪಡೆದರು. 1987ರಲ್ಲಿ ನಟ ಮತ್ತು ನಿರ್ದೇಶಕ ಶಿವಚಂದ್ರನ್ ಅವರೊಡನೆ ಮದುವೆಯಾಗಿದ್ದಾರೆ. ಇವರು 2000ರಲ್ಲಿ ಹೆಣ್ಣುಮಗು ಒಂದನ್ನು ದತ್ತು ಪಡೆದರು.

ಊರ್ವಶಿ :- ನಟಿ ಊರ್ವಶಿ 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರವನ್ನು ಆಳಿದ ನಟಿ. ಇವರು ನ್ಯಾಷನಲ್ ಅವಾರ್ಡ್ ವಿನ್ನರ್ ಕೂಡ ಹೌದು, 2000ರಲ್ಲಿ ನಟ ಮನೋಜ್ ಕೆ ಜಯನ್ ಅವರೊಡನೆ ಮದುವೆಯಾಗಿ ಈ ಜೋಡಿಗೆ ತೇಜಲಕ್ಷ್ಮೀ ಅವರೊಡನೆ ಮದುವೆಯಾದರು. ಅವರಿಗೆ ಊರ್ವಶಿ ಅವರಿಗೆ ಕುಡಿಯುವ ಚಟ ಎಂದು ಡೈವೋರ್ಸ್ ಪಡೆದರು. ಬಳಿಕ ಊರ್ವಶಿ ಅವರು ಚೆನ್ನೈ ಗೆ ಸೇರಿದ ಶಿವಪ್ರಸಾದ್ ಎನ್ನುವವರ ಜೊತೆಗೆ ಮದುವೆಯಾದರು. ಇವರಿಗೆ 2014ರಲ್ಲಿ ಮಗ ಜನಿಸಿದ್ದಾನೆ.

ಜಯಮಾಲಾ :– ಇವರು ಕನ್ನಡದ ಸ್ಟಾರ್ ನಟಿ, ಮೊದಲಿಗೆ 1985ರಲ್ಲಿ ನಟ ಟೈಗರ್ ಪ್ರಭಾಕರ್ ಅವರೊಡನೆ ಮದುವೆಯಾದರು. ಇವರಿಗೆ ಸೌಂದರ್ಯ ಹೆಸರಿನ ಮಗಳು ಜನಿಸಿದರು. ಆದರೆ ಈ ಮದುವೆ ಹೆಚ್ಚು ಸಮಯ ಉಳಿಯಲಿಲ್ಲ, 1988ರಲ್ಲಿ ಇವರಿಬ್ಬರು ವಿಚ್ಚೇದನ ಪಡೆದರು. ನಂತರ ತಮಗಿಂತ ಚಿಕ್ಕವರಾದ ಸಿನಿಮಾಟೋಗ್ರಾಫರ್ ಹೆಚ್.ಎಂ ರಾಮಚಂದ್ರ ಅವರೊಡನೆ 1990ರಲ್ಲಿ ಮದುವೆಯಾದರು.

ಅಂಬಿಕಾ :- ಸೌತ್ ಇಂಡಿಯಾದ ಸ್ಟಾರ್ ನಟಿ ಅಂಬಿಕಾ ಅವರು ಮೊದಲಿಗೆ ಅಮೆರಿಕಾ ಮೂಲದ ಪ್ರೇಮ್ ಕುಮಾರ್ ಅವರೊಡನೆ ಮದುವೆಯಾದರು. ಇವರಿಗೆ 2 ಗಂಡು ಮಕ್ಕಳು ಕೂಡ ಜನಿಸಿದರು. ಆದರೆ ಈ ದಾಂಪತ್ಯ ಜೀವನ ಹೆಚ್ಚು ದಿವಸ ಉಳಿಯಲಿಲ್ಲ, 1996ರಲ್ಲಿ ಇವರಿಂದ ವಿಚ್ಚೇದನ ಪಡೆದು ಭಾರತಕ್ಕೆ ಬಂದ ಅಂಬಿಕಾ ಅವರು ತಮಿಳುನಟ ರಮಾಕಾಂತ್ ಅವರೊಡನೆ ಮದುವೆಯಾದರು. ಇವರು ಕೂಡ ದೂರವಾದರು.

ಖುಷ್ಬೂ :- ನಟಿ ಖುಷ್ಬೂ ಅವರು ಮೊದಲಿಗೆ ತಮಿಳಿನ ಖ್ಯಾತ ನಟ ಶಿವಾಜಿ ಪ್ರಭು ಅವರೊಡನೆ 4 ವರ್ಷಗಳ ಕಾಲ ಲಿವಿಂಗ್ ರಿಲೇಶನ್ಶಿಪ್ ನಲ್ಲಿದ್ದರು, ಆದರೆ ಇದನ್ನು ಶಿವಾಜಿ ಗಣೇಶನ್ ಅವರು ಒಪ್ಪದ ಕಾರಣ ಈ ಜೋಡಿ ದೂರವಾದರು. ಬಳಿಕ 2000ದಲ್ಲಿ ನಿರ್ದೇಶಕ ಸುಂದರ್ ಸಿ ಅವರೊಡನೆ ಮದುವೆಯಾದರು. ಈಗ ಈ ಜೋಡಿಗೆ ಆವಂತಿಕ, ಆನಂದಿತಾ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಸರಿತಾ :- ಇವರು ಸಹ ಎರಡು ಮದುವೆಯಾಗಿದ್ದಾರೆ. 1975ರಲ್ಲಿ ತೆಲುಗು ನಟ ವೆಂಕಟಸುಬ್ಬಯ್ಯ ಅವರೊಡನೆ ಮದುವೆಯಾಗಿದ್ದರು ನಟಿ ಸರಿತಾ. 1988 ಅವರಿಂದ ವಿಚ್ಛೇದನ ಪಡೆದು, ಅದೇ ವರ್ಷ ಮಲಯಾಳಂ ನಟ ಮುಖೇಶ್ ಅವರೊಡನೆ ಮದುವೆಯಾದರು. ಇವರಿಗೆ 2 ಗಂಡು ಮಕ್ಕಳಿದ್ದಾರೆ. ಈ ಜೋಡಿ ಕೂಡ 2007ರಲ್ಲಿ ವಿಚ್ಛೇದನ ಪಡೆದರು.

ಹೇಮಾ ಪ್ರಭಾತ್ :- ಮೊದಲಿಗೆ ಇವರು ಅಮೆರಿಕಾ ಮೂಲದ ಸ್ವಮೇನ್ದ್ರ ಪಂಚಮುಖಿ ಎನ್ನುವವರನ್ನು ಮದುವೆಯಾಗಿ ಅಲ್ಲೇ ಇದ್ದರು, ಇವರಿಗೆ ಮಗಳು ಇದ್ದಾರೆ. ಆದರೆ ಅವರಿಂದ ವಿಚ್ಛೇದನ ಪಡೆದು ವಾಪಸ್ ಬಂದ ನಂತರ, ಹೇಮಾ ಪ್ರಭಾತ್ ಅವರು 2017ರಲ್ಲಿ ರಂಗೋಲಿ ಸಿನಿಮಾ ನಟ ಪ್ರಭಾತ್ ಜಿ ಶಾಸ್ತ್ರಿ ಅವರೊಡನೆ ಮದುವೆಯಾಗಿದ್ದಾರೆ. ಇವರಿಗೂ ಮಗು ಇದೆ..

ಮಾನ್ಯ ನಾಯ್ಡು :- ಇವರು 2008ರಲ್ಲಿ ಸತ್ಯ ಪಟೇಲ್ ಎನ್ನುವವರ ಜೊತೆಗೆ ಮದುವೆಯಾದರು. ಆದರೆ ವಿಚ್ಛೇದನ ಪಡೆದು, 2013ರಲ್ಲಿ ವಿಕಾಸ್ ಬಾಜಪೇಯ್ ಅವರೊಡನೆ ಮದುವೆಯಾದರು. ಇವರಿಗೆ ಮಗಳು ಜನಿಸಿದ್ದು, ಬಹಳ ಸಂತೋಷವಾಗಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!