ಕೃಷಿ ಹೊಂಡ ರೈತರಿಗೆ ನೀರು ಸಂರಕ್ಷಣೆ ಮಾಡಲು ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ನೀರು ಪೋಲಾಗುವುದನ್ನು ತಪ್ಪಿಸುತ್ತದೆ. ಹಳೆ ಕಾಲದಲ್ಲಿ ಮಣ್ಣಿನ ಕಟ್ಟೆ, ಸಣ್ಣ ಕಟ್ಟೆ ಈ ರೀತಿ ಮಾಡಿ ನೀರು ಉಳಿತಾಯ ಮಾಡಲು ನೋಡುತ್ತಿದ್ದರು.
ಆದರೂ, ಮಣ್ಣು ನೀರನ್ನು ಹೀರಿಕೊಂಡು ನೀರು ಬತ್ತಿ ಹೋಗುತ್ತಿತ್ತು. 2014ರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಕೃಷ್ಣ ಬೈರೇಗೌಡ ಅವರು ಬಂದು ಕೃಷಿ ಭಾಗ್ಯ ಯೋಜನೆ ಅಂತ ಆರಂಭ ಮಾಡಿದರು. ಅದರಲ್ಲಿ, ಕೃಷಿ ಹೊಂಡ ನಿರ್ಮಾಣ ಕಾರ್ಯ ಆರಂಭ ಮಾಡಿದರು.
10 ಮೀಟರ್, 12 ಮೀಟರ್, 18 ಮೀಟರ್ ಮತ್ತು 21 ಮೀಟರ್ ಜಾಗಕ್ಕೆ ತಕ್ಕಂತೆ ಹೊಂಡ ನಿರ್ಮಾಣ ಮಾಡುವ ಕೆಲಸ ಇರುತ್ತದೆ. ಮೀಟರ್ ಹೆಚ್ಚಾಗಿ ತೆಗೆದುಕೊಂಡರೆ ನೀರು ಹೆಚ್ಚಾಗಿ ಸ್ಟೋರ್ ಮಾಡಬಹುದು. ಜಮೀನಿಗೆ ಬಿದ್ದ ನೀರು ಬಂದು ಸೇರುತ್ತದೆ ಹಾಗು ಬೋರ್ ವೆಲ್ ನೀರನ್ನು ಶೇಖರಣೆ ಮಾಡಬಹುದು.
2014ರಲ್ಲಿ ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಕೆ ಮಾಡಿದಾಗ 300 ಜನರ ನಡುವೆ ಲಾಟ್ರಿ ಹಾಕಿ ಅಯ್ಕೆ ಪ್ರಕ್ರಿಯೆ ಮಾಡಲಾಯಿತು. ಈ ತರ ಸಿಕ್ಕ ಜಾಗದಲ್ಲಿ ಲಕ್ಷ್ಮೆ ಗೌಡ ಎನ್ನುವ ರೈತರು ಒಬ್ಬರು 10 ಮೀಟರ್ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ.
ಯಾವ ರೀತಿ ಬಳಕೆ ಮಾಡುತ್ತೀವಿ ಎನ್ನುವುದರ ಮೇಲೆ ಕೃಷಿ ಹೊಂಡ ಬಾಳಿಕೆ ಬರುತ್ತದೆ. ಇವರು ಯಾವ ಪ್ರಾಣಿ ಹೊಂಡಕ್ಕೆ ಬೀಳಬಾರದು ಎಂದು ಜಾಗದ ಸುತ್ತ ತಂತಿ ಬೇಲಿ ಹಾಕಿಸಿದ್ದಾರೆ.
ಪೂರ ಕೃಷಿ ಹೊಂಡಕ್ಕೆ ₹4,000 ಪೇಪರ್’ಗೆ ₹30,000ಕ್ಕೆ ಜನರೇಟರ್ ಜನರಲ್’ಗೆ ₹15,000, 30 ಲೆಂಥ್ ಪೈಪ್ ಕೊಟ್ಟಿರುತ್ತಾರೆ ಇದಕ್ಕೆಲ್ಲಾ ₹ 4,000. ಸಗಣಿ ನೀರು ಕಲಸಿ ಲೋಡ್ ಮಾಡ್ತಾ ಇದ್ದರೂ ಇವರು. ಒಂದು ಸಣ್ಣ ಡ್ರಮ್ ಇಟ್ಟು ಅದಕ್ಕೆ ನೀರು ಕನೆಕ್ಟ್ ಮಾಡಿ ಅದರಿಂದ ಲೋಡಿಂಗ್ ಮಾಡುವರು.
ಇರುವ ಭೂಮಿಯನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಅದರಲ್ಲಿ, ಸೀಸನಲ್ ( seasonal ) ಬೆಳೆಗಳನ್ನು ಬೆಳೆಯಬಹುದು ಜೊತೆಗೆ ಮನೆಗೆ ಅಗತ್ಯ ಇರುವ ದಿನ ಉಪಯೋಗಿ ಬೆಳೆಗಳನ್ನು ಸಹ ಬೆಳೆಯಬಹುದು ಎಂದು ಹೇಳಿದ್ದಾರೆ.
10 ಮೀಟರ್ ಹೊಂಡದ ನೀರು ತುಂಬಿದರೆ 15 ದಿನ ಆರಾಮಾಗಿ ಬೆಳೆಗಳನ್ನು ಕಾಪಾಡಿಕೊಳ್ಳಬಹುದು ಎಂದು ರೈತರು ತಿಳಿಸಿದ್ದಾರೆ. ನೀರನ್ನು ಅದವಾಗಿ ಬೆಳೆಗಳಿಗೆ ಕಟ್ಟಿದರೆ ಹೊಂಡದ ನೀರು ತಿಂಗಳು ಗಟ್ಟಲೆ ಉಪಯೋಗಕ್ಕೆ ಬರುತ್ತದೆ ಎಂದು ಕೂಡ ಹೇಳಿದ್ದಾರೆ.
ನೀರನ್ನು ತಳಕ್ಕೆ ಹೋಗಿ ತೆಗೆದುಕೊಂಡು ಬರಲು ಸಾಧ್ಯವಿಲ್ಲ ಅದಕ್ಕೆ ನೀರನ್ನು ಒಂದು ಡ್ರಮ್ ಒಳಗೆ ತುಂಬಲು ಎಲ್ಲಾ ಪೈಪ್ ಕನೆಕ್ಟ್ ಮಾಡಿ ಬುದ್ದಿ ಉಪಯೋಗಿಸಿ ಲೋಡಿಂಗ್ ಅನ್ನು ಡ್ರಮ್’ಗೆ ಮಾಡಿದ್ದಾರೆ.
ಇಲಾಖೆಯ ಜನರು ಬಂದು ಎಲ್ಲಾ ಇನ್ಸ್ಪೆಕ್ಷನ್ ( inspection ) ಮಾಡಿಕೊಂಡು ಹೋಗುವರು. ಕೃಷಿ ಹೊಂಡಕ್ಕೆ ಬಿದ್ದರೆ ಮೇಲೆ ಮತ್ತೆ ಬರಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಟ್ಯೂಬ್ ಹಾಕಲಾಗಿದೆ ಅದರಿಂದ, ಅದರ ಸಹಾಯದಿಂದ ಮೇಲೆ ಬರಬಹುದು ಎಂದು ಲಕ್ಷ್ಮೆ ಗೌಡ ಅವರು ತಿಳಿಸಿದ್ದಾರೆ.
ವಿಳಾಸ :- ಲಕ್ಷ್ಮೆ ಗೌಡ
ಕುಂಟನಹಳ್ಳಿ, ದೊಡ್ಡಬಳ್ಳಾಪುರ ತಾಲೂಕು, ಬೆಂಗಳೂರು ಗ್ರಾಮಾಂತರ.
ದೂರವಾಣಿ ಸಂಖ್ಯೆ :- 9844543335