ಪ್ರಪಂಚದಲ್ಲಿ ಅತಿ ಹೆಚ್ಚು ಶಕ್ತಿ ಹೊಂದಿರುವ ಪ್ರಾಣಿ ಯಾವುದು, ಯಾವ ಫಿಶ್ ತಿಂದರೆ ವಾಸ್ತವ ಮರೆತು 36 ಗಂಟೆಗಳ ಕಾಲ ಭ್ರಮೆಯಲ್ಲಿ ಇರುತ್ತೇವೆ, ದೊಡ್ಡ ದೊಡ್ಡ ಫ್ಯಾಕ್ಟರಿಗಳ ಮೇಲೆ ತಿರುಗುವ ಮಷೀನ್ ಗಳನ್ನು ಹಾಕಿರುತ್ತಾರೆ ಅದಕ್ಕೆ ಕಾರಣವೇನು, ಹಾಸ್ಯಗಾರ ಚಾರ್ಲಿ ಚಾಪ್ಲಿನ್ ಅವರನ್ನು ಅಮೇರಿಕ ತನ್ನ ದೇಶದಿಂದ ಬಹಿಷ್ಕಾರ ಹಾಕಿತ್ತು ಇದಕ್ಕೆ ಕಾರಣವೇನು ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್ಲರಿಗೂ ಸೀನು ಬರುತ್ತದೆ ದಿನಕ್ಕೆ ನಾಲ್ಕರಿಂದ ಹತ್ತು ಸರಿ ಬರಬಹುದು ಆದರೆ ಡೊನ್ನ ಗಿಫಿಟ್ಸ್ ಎಂಬ ಮಹಿಳೆ ಮಾತ್ರ ಎರಡು ವರ್ಷಗಳಿಂದ ನಿರಂತರವಾಗಿ ಸೀನುತ್ತಲೆ ಇದ್ದರು ಇದರಿಂದ ಅವರ ಹೆಸರು ಗಿನ್ನಿಸ್ ರೆಕಾರ್ಡ್ ಗೆ ಸೇರಿದೆ. ಒಂದು ಪ್ರಶ್ನೆ ಕಾಡುತ್ತದೆ ರಾತ್ರಿ ಸಮಯದಲ್ಲಿ ಸೀನು ಬರುವುದಿಲ್ಲ. ಅವರು ರಾತ್ರಿ ಸೀನುವುದು ಕಡಿಮೆ ಹಗಲು ಸೀನುತ್ತಿದ್ದರು. ಪ್ರಪಂಚದಲ್ಲಿ ಅತಿ ಹೆಚ್ಚು ಶಕ್ತಿ ಹೊಂದಿರುವ ಪ್ರಾಣಿ ಯಾವುದೆಂದು ನೋಡಿದರೆ ಆನೆ, ಸಿಂಹ ನೆನಪಿಗೆ ಬರುತ್ತದೆ ಆದರೆ ಅತಿ ಹೆಚ್ಚು ಶಕ್ತಿ ಹೊಂದಿರುವ ಪ್ರಾಣಿ ಡಂಗ್ ಬೀಟಲ್ ಸಗಣಿ ಹುಳು ಇದು ತನ್ನ ದೇಹದ ತೂಕಕ್ಕಿಂತ ಸಾವಿರಪಟ್ಟು ಹೆಚ್ಚು ತೂಕವನ್ನು ಎಳೆಯುತ್ತದೆ. ಈ ಹುಳುಗಳು 0.5 ಇಂದ 3 ಸೆಂಟಿಮೀಟರ್ ಸೈಜ್ ಹೊಂದಿರುತ್ತದೆ. ಈ ಹುಳುಗಳ ಜೀವಿತಾವಧಿ ಕೇವಲ ಮೂರು ತಿಂಗಳಿಂದ ಆರು ತಿಂಗಳು. ಗಂಡು ಸಗಣಿ ಹುಳುಗಳಿಗೆ ತಲೆಯ ಮೇಲೆ ಕೊಂಬು ಇರುತ್ತದೆ ಅದರಿಂದ ಬೇರೆ ಹುಳುಗಳೊಂದಿಗೆ ಫೈಟ್ ಮಾಡುತ್ತದೆ.
ಸಾರ್ಕಸ್ ಸಾಲ್ವಾ ಎಂಬ ಮೀನನ್ನು ತಿನ್ನುವುದರಿಂದ ಮೆದುಳು ಕೆಟ್ಟುಹೋಗುತ್ತದೆ ಹಗಲು ಹೊತ್ತಿನಲ್ಲಿ ನಕ್ಷತ್ರಗಳು ಕಾಣಿಸುತ್ತದೆ ಮತ್ತು ಮೀನನ್ನು ತಿಂದ ಎರಡು ಗಂಟೆ ನಂತರ ಭಯಂಕರ ಭ್ರಮೆ ಉಂಟಾಗುತ್ತದೆ ಸುಮಾರು 36 ಗಂಟೆಗಳ ಕಾಲ ಭ್ರಮೆಯಲ್ಲೇ ತೇಲುತ್ತಿರುತ್ತಾರೆ. ಈ ಮೀನನ್ನು ಬೇರೆ ಮೀನುಗಳು ತಿಂದರೆ ಸತ್ತುಹೋಗುತ್ತವೆ ಇದಕ್ಕೆಲ್ಲ ಕಾರಣ ಮೀನಿನಲ್ಲಿರುವ ಒಂದು ಪದಾರ್ಥ. ಮಾಸ್ಕೋದಲ್ಲಿ ಇತ್ತೀಚೆಗೆ ವಾತಾವರಣ ಕೆಟ್ಟುಹೋಗಿ ಹಸುಗಳಿಗೆ ಸರಿಯಾದ ಆಹಾರ ಸಿಗುತ್ತಿರಲಿಲ್ಲ ಇದರಿಂದ ಹಾಲಿನ ಉತ್ಪಾದನೆ ಕಡಿಮೆಯಾಯಿತು. ಈ ಸಮಸ್ಯೆಗೆ ಅಲ್ಲಿಯ ಜನರು ಹಸುಗಳಿಗೆ ಒಂದು ಗ್ಲಾಸ್ ಅಳವಡಿಸಿದರು ಅದರಲ್ಲಿ ಹಚ್ಚ ಹಸುರಿನ ಹೊಲಗಳನ್ನು ತೋರಿಸಿದರು ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಯಿತು.
ಒಬ್ಬ ವ್ಯಕ್ತಿ ಇಂಟರ್ವ್ಯೂ ಗೆ ಹೋಗುತ್ತಾನೆ ಅವನಿಗೆ ಮೂರು ಜನ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ ಅವರು ಆ ವ್ಯಕ್ತಿಯ ಡಿಗ್ರಿ ಸರ್ಟಿಫಿಕೇಟ್ ಬಗ್ಗೆ ವಿಚಾರಿಸುತ್ತಾರೆ ನಂತರ ಒಬ್ಬ ಇಂಟರ್ವ್ಯೂವರ್ ಕೇಳುತ್ತಾರೆ ಟೇಬಲ್ ಮೇಲೆ ಒಂದು ಗ್ಲಾಸ್ ಇದೆ ಅದನ್ನು ನಿನ್ನ ಕೈಯನ್ನು ಬಳಸದೆ ಮೇಲಕ್ಕೆತ್ತಬೇಕು ಎಂದು ಆಗ ಆ ವ್ಯಕ್ತಿ ನನ್ನ ಮುಂದೆ ಗ್ಲಾಸ್ ಇಲ್ಲ ನನಗೆ ಯಾವುದೇ ಗ್ಲಾಸ್ ಕಾಣಿಸುತ್ತಿಲ್ಲ ಎಂದು ಹೇಳುತ್ತಾನೆ. ಆಗ ಇಂಟರ್ವ್ಯೂವರ್ ಗೆ ಕೋಪ ಬರುತ್ತದೆ ನಮಗೆ ಕಾಣಿಸುವ ಗ್ಲಾಸ್ ಇವನಿಗೇಕೆ ಕಾಣಿಸುತ್ತಿಲ್ಲ ಎಂದು ಅವರೇ ಆ ಗ್ಲಾಸ್ ಅನ್ನು ಎತ್ತಿ ತೋರಿಸುತ್ತಾರೆ ಆಗ ಉಳಿದವರು ನಗುತ್ತಾರೆ ಆಗ ಆ ವ್ಯಕ್ತಿ ನಾನು ನನ್ನ ಕೈಯನ್ನು ಬಳಸದೆ ಗ್ಲಾಸ್ ಅನ್ನು ಎತ್ತಿದ್ದೇನೆ ಥ್ಯಾಂಕ್ಯೂ ಸರ್ ಎಂದು ಹೇಳುತ್ತಾನೆ.
ಅನೇಕ ಫ್ಯಾಕ್ಟರಿಗಳ ಮೇಲೆ ತಿರುಗುವ ಮಷೀನ್ ಗಳನ್ನು ಇಟ್ಟಿರುತ್ತಾರೆ. ಇವುಗಳನ್ನು ವಿಂಡ್ ಟರ್ಬೋ ವೆಂಟಿಲೇಟರ್ ಎಂದು ಕರೆಯುತ್ತಾರೆ. ಫ್ಯಾಕ್ಟರಿಗಳಲ್ಲಿ ಮಷೀನ್ ಗಳು ಹೆಚ್ಚು ಕೆಲಸ ಮಾಡುವುದರಿಂದ ಶಾಖ ಉತ್ಪತ್ತಿಯಾಗುತ್ತದೆ ಇದರಿಂದ ಕೆಲಸಗಾರರಿಗೆ ಬಿಸಿ ಎನಿಸುತ್ತದೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮಷೀನ್ ಗಳು ಬಿಸಿಗಾಳಿಯನ್ನು ಹೊರಗೆ ಕಳುಹಿಸುತ್ತದೆ ಇದರಿಂದ ಕೆಲಸ ಮಾಡುವವರಿಗೆ ಆರಾಮ ಎನಿಸುತ್ತದೆ. 1991ರಲ್ಲಿ ಇಥಿಯೋಪಿಯಾದಲ್ಲಿ ದೇಶ ವಿಭಜನೆಯಿಂದ ದೊಡ್ಡ ಸಂಖ್ಯೆಯಲ್ಲಿರುವ ಯಹೂದಿಗಳನ್ನು ಇಸ್ರೇಲ್ ದೇಶ ಅಲ್ಲಿಂದ ಕಳುಹಿಸಲು ನಿರ್ಧಾರ ಮಾಡುತ್ತದೆ ಇದಕ್ಕೆ ಆಪರೇಷನ್ ಸೋಲೋಮನ್ ಎಂದು ಹೆಸರು ಇಡುತ್ತದೆ.
ಇಸ್ರೇಲ್ ಮಿಲಿಟರಿ ಹೆಚ್ಚಿನ ಸಂಖ್ಯೆಯ ಯಹೂದಿಗಳನ್ನು ಏರ್ ಲಿಫ್ಟ್ ಮಾಡುತ್ತಾರೆ, ಕುಳಿತುಕೊಳ್ಳಲು ಅನುಕೂಲವಾಗುವಂತೆ ಸೀಟುಗಳನ್ನು ತೆಗೆದುಹಾಕುತ್ತಾರೆ, ಸಾಮಾನ್ಯಕ್ಕಿಂತ ಹೆಚ್ಚು ಜನರನ್ನು ವಿಮಾನದಲ್ಲಿ ಕಳುಹಿಸುತ್ತಾರೆ. ವಿಮಾನದಲ್ಲಿ ಅತಿ ಹೆಚ್ಚು ಜನರು ಪ್ರಯಾಣಿಸಿದ ರೆಕಾರ್ಡ್ ಗೆ ಸೇರುತ್ತದೆ.
ಚಾರ್ಲಿ ಚಾಪ್ಲಿನ್ ಬಗ್ಗೆ ಎಲ್ಲರಿಗೂ ಗೊತ್ತಿದೆ ಒಂದೂ ಮಾತನಾಡದೆ ಎಲ್ಲರನ್ನು ನಗಿಸುತ್ತಾರೆ. ಅವರ ಪ್ರತಿಯೊಂದು ಸಿನಿಮಾ ಒಂದು ಮೆಸೇಜ್ ಅನ್ನು ಹೊಂದಿರುತ್ತದೆ. ಇಂತಹ ಚಾರ್ಲಿ ಚಾಪ್ಲಿನ್ ಅವರನ್ನು ಇಡೀ ಪ್ರಪಂಚ ಪ್ರೋತ್ಸಾಹಿಸುತ್ತದೆ ಆದರೆ ಅಮೇರಿಕ ತನ್ನ ದೇಶದಿಂದ ಚಾರ್ಲಿ ಚಾಪ್ಲಿನ್ ಅವರನ್ನು ಬಹಿಷ್ಕಾರ ಮಾಡುತ್ತದೆ ಇದಕ್ಕೆ ಕಾರಣ ಚಾರ್ಲಿ ಚಾಪ್ಲಿನ್ ಅವರು ಪ್ರಸ್ತುತ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದರು ಅಂದರೆ ಅವರ ಸಿನಿಮಾಗಳಲ್ಲಿ ನಿರಂಕುಶಪ್ರಭುತ್ವ, ವಾರ್, ವೆಪನ್ಸ್ ಗಳ ಬಗ್ಗೆ ತೋರಿಸುತ್ತಿದ್ದರು ಇದನ್ನು ನೋಡಿದ ಅಮೇರಿಕಾ ಗೌರ್ಮೆಂಟ್ ಚಾರ್ಲಿ ಚಾಪ್ಲಿನ್ ಅವರು ಸಿನಿಮಾದಲ್ಲಿ ಅಮೆರಿಕಾದ ವಿರುದ್ಧ ತೋರಿಸುತ್ತಾರೆ ಎಂದು ಎಫ್ ಬಿಐಗೆ ದೂರನ್ನು ನೀಡುತ್ತಾರೆ
ನಂತರ ಅಮೇರಿಕದಿಂದ ಬಹಿಷ್ಕಾರ ಮಾಡುತ್ತಾರೆ ಚಾರ್ಲಿ ಚಾಪ್ಲಿನ್ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸ್ವಿಜರ್ಲ್ಯಾಂಡ್ ನಲ್ಲಿ ಸೆಟ್ಲಾಗಿ ತಮ್ಮ ಸಿನಿಮಾಗಳನ್ನು ಮುಂದುವರಿಸುತ್ತಾರೆ. 20 ವರ್ಷಗಳ ನಂತರ ಚಾರ್ಲಿ ಚಾಪ್ಲಿನ್ ಅವರ ಪ್ರತಿಭೆಯನ್ನು ಗುರುತಿಸಿ ಅಮೇರಿಕಾ ವಾಪಸ್ ತನ್ನ ದೇಶಕ್ಕೆ ಕರೆಯಿಸಿಕೊಂಡು ಹಾನರೇಬಲ್ ಆಸ್ಕರ್ ಅವಾರ್ಡ್ ಅನ್ನು ಕೊಡುತ್ತಾರೆ ಆಗ ಅಲ್ಲಿನ ಜನರು ಹನ್ನೆರಡು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ಹೊಡೆಯುತ್ತಾರೆ.