ಎಷ್ಟೇ ಹಳೆಯ ಬಂಗು, ಮೊಡವೆ ಕಪ್ಪು ಕಲೆ ಇದ್ರೂ ನಿವಾರಿಸಿ ಸೌಂದರ್ಯ ಹೆಚ್ಚಿಸುವ ಸಿಂಪಲ್ ಟಿಪ್ಸ್

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ನಾವು ಮನೆಯಲ್ಲಿ ಇರುವ ಪದಾರ್ಥಗಳನ್ನೂ ಬಳಸಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಕೆಲವರಿಗೆ ಬಂಗು ಮೊಡವೆ ಕಪ್ಪು ಕಲೆಗಳು ಇರುತ್ತದೆ ಇವುಗಳು ಮುಖದ ಕಾಂತಿಯನ್ನು ಕಡಿಮೆ ಮಾಡುತ್ತದೆ ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಸಹ ಹೆಚ್ಚು ಆರೋಗ್ಯಯುತ ಆಹಾರವನ್ನು ಸೇವಿಸಬೇಕು ಅದರಲ್ಲಿ ಸೊಪ್ಪು ತರಕಾರಿ ಹಣ್ಣು ಸೇವಿಸುವ ಮೂಲಕ ಮೂಲಕ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಕೆಲವೊಮ್ಮೆ ಸೂರ್ಯನ ಕಿರಣಗಳು ಸಹ ಮುಖವನ್ನು ಕಪ್ಪಾಗಿ ಮಾಡುತ್ತದೆ ಸುಂದರವಾಗಿ ಕಾಣುವುದು ನಮ್ಮ ಹಕ್ಕು. ಮುಖ ನಮ್ಮ ಸೌಂದರ್ಯದ ಪ್ರತಿರೂಪ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ನಮ್ಮ ನೈಜ ಸೌಂದರ್ಯವನ್ನು ಬಿಂಬಿಸುವ ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಾವು ಈ ಲೇಖನದ ಮೂಲಕ ಮುಖದ ಕಾಂತಿ ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳೊಣ.

ಮೆಲಸ್ಮ ಇದು ಚರ್ಮದ ಒಳಗಡೆ ಕಪ್ಪು ಆಗಲು ಆರಂಭಿಸುತ್ತದೆ ಚರ್ಮ ಒಳಗಡೆ ಆಗುವುದರಿಂದ ಮುಖದ ಸ್ಕಿನ್ ಡೆಮೆಜ್ ಆಗುತ್ತದೆ ಹಾಗಾಗಿ ಒಳ್ಳೆಯ ಆಹಾರವನ್ನು ಸೇವಿಸಬೇಕು ತರಕಾರಿ ಸೊಪ್ಪು ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು ಸೂರ್ಯ ನ ಬಿಸಿಲಿಗೆ ಸ್ಕಿನ್ ಡೆಮೆಜ್ ಆಗುತ್ತದೆ. ಇದರಿಂದ ಮುಖ ಕಪ್ಪಾಗಿ ಕಾಣಿಸುತ್ತದೆ ಜಾಸ್ತಿ ಆದರೆ ಹೈಪರ್ ಪಿಗ್ಮೈಟೇಶನ್ ಎಂದು ಕರೆಯುತ್ತಾರೆ ಮೊಡವೆಗಳಿಂದ ಸಹ ಮುಖದ ಕಾಂತಿ ಕಡಿಮೆ ಆಗುತ್ತದೆ

ಮೊಡವೆಗಳು ಆದಾಗ ಅದನ್ನು ಮುಟ್ಟ ಬಾರದು ಕೆಲವರಿಗೆ ಕಲೆಗಳು ಸ್ವಲ್ಪ ದಿನದ ವರೆಗೆ ಇರುತ್ತದೆ ಕೆಲವರಿಗೆ ಬೇಗನೆ ಕಡಿಮೆ ಆಗುತ್ತದೆ ಕಲೆಗಳು ಕೆಲವರಿಗೆ ಪರ್ಮ್ನೆಟ್ ಆಗಿ ಉಳಿದು ಬಿಡುತ್ತದೆ ಮೊಡವೆ ಅದಾದ ತಾನಾಗಿಯೇ ಹೋಗುವ ತರ ಬಿಡಬೇಕು ಮುಟ್ಟಲು ಹೋಗಬಾರದು ಕೆಲವರಿಗೆ ಬ್ಲಾಕ್ ಹೀಡ್ಸ್ ಹಾಗೂ ವೈಟ್ ಹಿಡ್ಸ್ ಗಳು ಆಗಿರುತ್ತದೆ ಆದಾಗ ಅದನ್ನು ಹೀಚಿ ಕೊಂಡಾಗ ಕಲೆಗಳು ಹಾಗೆಯೇ ಉಳಿದುಕೊಳ್ಳುತ್ತವೆ .

ಅಕ್ಕಿ ಹಿಟ್ಟು ನಮ್ಮ ಮುಖಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಒಂದು ಚಮಚ ಅಕ್ಕಿ ಹಿಟ್ಟಿಗೆ ಅದಕ್ಕೆ ನಿಂಬೆ ಹಣ್ಣನ್ನು ಮುಖಕ್ಕೆ ಸುಟ್ ಆದರೆ ಮಾತ್ರ ನಿಂಬೆ ಹಣ್ಣನ್ನು ಹಾಕಬೇಕು ಲಿಂಬೆ ಹಣ್ಣಿನ ಬದಲು ನೀರನ್ನು ಸಹ ಬಳಸಬಹುದು ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಬೇಕು ಪೇಸ್ಟ್ ತರ ಮಾಡಬೇಕು ಮುಖಕ್ಕೆ ಹಚ್ಚಿದ ನಂತರ ಹತ್ತು ನಿಮಿಷ ಹಾಗೆ ಬಿಡಬೇಕು ಸ್ವಲ್ಪ ಒಣಗಬೇಕು ಮುಖಕ್ಕೆ ನೀರನ್ನು ಹಾಕಿ ಮುಖವನ್ನು ತಿಕ್ಕಿ ತಿಕ್ಕಿ ತೊಳೆಯಬೇಕು ಮೊದಲ ಸಲ ಹಚ್ಚಿದಾಗ ಮುಖದಲ್ಲಿ ಕಲೆಗಳು ಸ್ವಲ್ಪ ಕಡಿಮೆ ಆಗುತ್ತದೆ .ಹಾಗೆಯೇ ಎರಡನೇ ಸ್ಟೆಪ್ ಅಲ್ಲಿ ಒಂದು ಚಮಚ ಅಕ್ಕಿ ಹಿಟ್ಟು ಹಾಗೂ ಗಂಧದ ಪೌಡರ್ ಹಾಕಬೇಕು

ನಂತರ ಅದಕ್ಕೆ ರೋಸ್ ವಾಟರ್ ಅಥವಾ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಮುಖಕ್ಕೆ ಹಚ್ಚಬೇಕು ಹಚ್ಚಿದ ಹತ್ತು ನಿಮಿಷ ಹಾಗೆ ಬಿಡಬೇಕು ಮುಖದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ನಂತರ ಮುಖವನ್ನು ತೊಳೆಯಬೇಕು ನಂತರ ಅಲೋವೆರಾ ಜೆಲ್ ಅನ್ನು ಹಚ್ಚಿಕೊಳ್ಳಬೇಕು ಯಾಕೆ ಅಂದರೆ ಅಕ್ಕಿ ಹಿಟ್ಟು ಸ್ಕಿನ್ ಅನ್ನು ಬಿಗಿ ಮಾಡುತ್ತದೆ ಹಾಗಾಗಿ ಅಲೋವೆರಾ ಜೆಲ್ ಅನ್ನು ಬಳಸಬೇಕು ವಾರದಲ್ಲಿ ಎರಡು ಸಲ ಮುಖಕ್ಕೆ ಅಪ್ಲೈ ಮಾಡಬೇಕು .ಹೀಗೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು .


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *