ಎಲಾನ್ ಮಸ್ಕ್ ಅವರು 47ನೇ ವಯಸ್ಸಿನಲ್ಲಿ ತಮ್ಮ ಯೋಚನಾ ಶಕ್ತಿಯ ಮೂಲಕ ಅನ್ವೇಷಣೆಯ ಮೂಲಕ ಪ್ರಪಂಚದ ದಿಕ್ಕನ್ನು ಬದಲಿಸಿದರು. ಅವರು ಪ್ರಾರಂಭಿಸಿದ ಸೋಲಾರ್ ಸಿಟಿ, ಟೆಸ್ಲಾ ಮೋಟಾರ್ಸ್, ಸ್ಪೇಸ್ ಎಕ್ಸ್ ಇವು ಮನುಷ್ಯನ ಸಾಂಪ್ರದಾಯಿಕ ಜೀವನ ಪದ್ಧತಿಯನ್ನು ಬದಲಾಯಿಸಿದೆ. ಇಂತಹ ಎಲಾನ್ ಮಸ್ಕ್ ಅವರ ಯೋಚನೆ ಹಾಗೂ ಅದರ ಹಿಂದಿನ ರಹಸ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.
ಕೆಲವೇ ವರ್ಷಗಳಲ್ಲಿ ಮನುಷ್ಯನನ್ನು ಮಂಗಳಗ್ರಹಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಕಾಲೋನಿಗಳನ್ನು ಕಟ್ಟಬೇಕು ಎನ್ನುವುದು ಎಲಾನ್ ಮಸ್ಕ್ ಅವರ ಪ್ಲಾನ್ ಆಗಿದೆ. ಅವರ ಯೋಚನೆಯ ಹಿಂದಿರುವ ಸೀಕ್ರೆಟ್ ಎಂದರೆ ಪ್ರಿನ್ಸಿಪಲ್ ಥಿಂಕಿಂಗ್. ಯಾವುದೇ ದೊಡ್ಡ ಸಮಸ್ಯೆ ಎದುರಾದಾಗ ನಮಗೆ ಗೊತ್ತಿರುವ ವಿಧಾನಗಳ ಮೂಲಕ ಪರಿಹರಿಸಿಕೊಳ್ಳುವ ಬದಲು ಹೊಸ ಮಾರ್ಗವನ್ನು ಅನುಸರಿಸಬೇಕು, ಪ್ರಶ್ನೆಗಳನ್ನು ಮಾಡುವ ಮೂಲಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು. ಸಾಧ್ಯವಾಗದ ವಿಷಯಗಳನ್ನು ಪ್ರಿನ್ಸಿಪಲ್ ಥಿಂಕಿಂಗ್ ಮೂಲಕ ಸಾಧಿಸಬಹುದು. ಡಿಕನ್ಸಟ್ರಕ್ಟ್ ಎಂಡ್ ರಿಕನ್ಸಟ್ರಕ್ಟ್. ಅವರು ರಾಕೆಟ್ ಇಷ್ಟು ದುಬಾರಿ ಏಕಾಯಿತು ಎಂದು ಯೋಚಿಸಿದರು ರಾಕೆಟ್ ತಯಾರಿಸಲು ಬೇಕಾಗುವ ರಾ ಮಟೀರಿಯಲ್ಸ್ ನಿಂದ ನಾನೇ ತಯಾರಿಸಬಹುದು ಎಂದು ಯೋಚಿಸಿ ಸ್ಪೇಸ್ ಎಕ್ಸ್ ಪ್ರಾರಂಭಿಸಿದರು. ಮೊದಲು ನಮ್ಮಲ್ಲಿರುವ ಊಹೆಗಳನ್ನು ಗುರುತಿಸಬೇಕು ನಮ್ಮನ್ನು ಕುಗ್ಗಿಸುವ ಊಹೆಗಳು ಯಾವುದು ಎಂಬುದನ್ನು ನೋಡಬೇಕು. ತುಂಬಾ ಜನಕ್ಕೆ ಹೊಸ ಬಿಜಿನೆಸ್ ಪ್ರಾರಂಭಿಸಬೇಕೆಂದರೆ ಹಣ ಬೇಕು ಈ ರೀತಿಯ ಹಲವು ಊಹೆಗಳಿರುತ್ತವೆ ಇಂತಹ ಊಹೆಗಳನ್ನು ಒಂದು ಪೇಪರಿನ ಮೇಲೆ ಬರೆಯಬೇಕು. ವಿಡಿಯೋ ಕೃಪೆ: KKTV
ಎಲಾನ್ ಮಸ್ಕ್ ತಮ್ಮ 12ನೇ ವಯಸ್ಸಿನಲ್ಲಿ ಕೋಡಿಂಗ್ ಕಲಿತು ತಮ್ಮದೇ ವಿಡಿಯೋ ಗೇಮ್ ಅನ್ನು ಡಿಸೈನ್ ಮಾಡಿ ಮಾರಾಟ ಮಾಡಿದರು. ಎಲಾನ್ ಮಸ್ಕ್ ಅವರು ಒಂದು ವಿಷಯವನ್ನು ಮರ ಎಂದು ಹೋಲಿಸಿದರೆ ಅದರ ಬೇರು ಮತ್ತು ಕಾಂಡದ ಬಗ್ಗೆ ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು ಅಂದರೆ ಅದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಒಂದು ಸಮಸ್ಯೆಯನ್ನು ಎದುರಿಸಬೇಕಾದರೆ ಅದರ ಬಗ್ಗೆ ಇರುವ ಸಾಂಪ್ರದಾಯಿಕ ಮಾತುಗಳನ್ನು ಸ್ವೀಕರಿಸಬಾರದು. ಹೊಸ ವಿಷಯದ ಬಗ್ಗೆ ಕಲಿಯಬೇಕೆಂದರೆ ಮೆದುಳಿನಲ್ಲಿರುವ ಸಾಂಪ್ರದಾಯಿಕ ವಿಚಾರಗಳನ್ನು ತೆಗೆದುಹಾಕಬೇಕು. ಹೊಸ ಅನ್ವೇಷಣೆಗೆ ಬಹಳ ಸಮಯ ಹಾಗೂ ಶಕ್ತಿ ಬೇಕು. ಸಮಸ್ಯೆ ಎದುರಾದಾಗ ಕುಳಿತುಕೊಂಡು ಅದರ ಆಳದ ಬಗ್ಗೆ ಯೋಚಿಸಬೇಕು. ಸಾಧನೆ ಮಾಡುವಾಗ ಹಲವು ಅಡೆ ತಡೆಗಳು ಬರುತ್ತದೆ ಆದರೆ ನಮ್ಮ ದೃಷ್ಟಿ ಬದಲಾಗಬಾರದು.