ಸಾಮಾನ್ಯವಾಗಿ ಬಿಳಿ ಎಕ್ಕೆ ಗಿಡ ಎಲ್ಲರಿಗು ಚಿರಪರಿಚಿತವಾಗಿರುವಂತ ಗಿಡವಾಗಿದ್ದು ಇದು ಹಲವು ವಿಶೇಷತೆಯ ಗುಣಗಳನ್ನು ಹೊಂದಿದೆ, ಬಿಳಿ ಎಕ್ಕೆ ಅಂದ್ರೆ ಸಾಕು ಗ್ರಾಮೀಣ ಭಾಗದ ಜನರಿಗೆ ಬೇಗನೆ ಗೊತ್ತಾಗುತ್ತದೆ, ಈ ಗಿಡವನ್ನು ಮನೆಯ ವಾಸ್ತು ದೋಷಕ್ಕೆ ಹಾಗೂ ಇನ್ನು ಹಲವು ಉಪಯೋಗಗಳಿಗೆ ಬಳಸುತ್ತಾರೆ. ಮನೆಯ ಮುಂದೆ ಈ ಬಿಳಿ ಎಕ್ಕೆ ಗಿಡ ಇದ್ರೆ ಯಾವೆಲ್ಲ ಪ್ರಯೋಜನವನ್ನು ಪಡೆಯಬಹುದಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ, ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.
ಜ್ಯೋತಿಷ್ಯ ಪಂಡಿತರು ಹೇಳುವ ಪ್ರಕಾರ ಮನೆಯ ಮುಂದೆ ಬಿಳಿ ಎಕ್ಕೆ ಗಿಡ ಇದ್ರೆ ಮನೆಯ ಮೇಲಿನ ಕೆಟ್ಟ ಶಕ್ತಿಯನ್ನು ನಿವಾರಿಸುವ ಜೊತೆಗೆ ಮನೆಯ ವಾಸ್ತು ದೋಷಕ್ಕೆ ಕಡಿವಾಣ ಹಾಕುವುದು, ಯಾವುದೇ ಮಾಟ ಮಂತ್ರ ವಾಮಾಚಾರ ನಡೆಯದಂತೆ ನಿಯಂತ್ರಿಸುತ್ತದೆ ಅನ್ನೋದನ್ನ ಹೇಳಲಾಗುತ್ತದೆ ಅಷ್ಟೇ ಅಲ್ಲದೆ ಮನುಷ್ಯನ ದೈಹಿಕ ಸಮಸ್ಯೆಗಳಿಗೆ ಕೂಡ ಬಿಳಿ ಎಕ್ಕೆ ಉಪಯೋಗಕಾರಿಯಾಗಿದೆ.
ಮನೆಯ ವಾಸ್ತು ದೋಷ ನಿವಾರಣೆಗೆ ಬಿಳಿ ಎಕ್ಕೆ: ಬಿಳಿ ಎಕ್ಕೆಯ ಹೂವನ್ನು ಮನೆಯ ಈ ಜಾಗದಲ್ಲಿ ಹೀಗೆ ಬಳಸಬೇಕು ಹೌದು ಎಕ್ಕೆಯ ಹೂವನ್ನು ಮನೆಯ ಬಾಗಿಲಿಗೆ ಅಥವಾ ದೇವರ ಮನೆ ಬಾಗಿಲಿಗೆ ತೋರಣ ಕಟ್ಟಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಮನೆಯ ಮುಂದೆ ಬಿಳಿ ಎಕ್ಕೆ ಗಿಡ ಇದ್ರೆ ನಿಮ್ಮ ಮನೆಯ ಮೇಲೆ ಯಾವುದೇ ಮಾಟ ಮಂತ್ರಗಳು ತಗಲುವುದಿಲ್ಲ.
ಇನ್ನು ಮನೆಯ ಮುಂದೆ ಬಿಳಿ ಎಕ್ಕೆ ಇದ್ರೆ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನ ನೋಡುವುದಾದರೆ, ಯಾವುದೇ ರೀತಿಯ ವಿಷಜಂತುಗಳು ಕಚ್ಚಿದರೆ ವಿಷ ನಿವಾರಣೆಗೆ ಎಕ್ಕದ ಬೇರನ್ನು ಅರಿಶಿಣದಲ್ಲಿ ತೇಯ್ದು ನೀರಿನಲ್ಲಿ ಸೇವಿಸಿದರೆ ವಿಷದ ಅಂಶ ನಿರ್ಮೂಲನೆಗೊಳ್ಳುವುದು. ಇನ್ನು ಇದು ಸಾಮಾನ್ಯವಾಗಿ ಕೆಲವರಿಗೆ ಗೊತ್ತಿರುತ್ತದೆ ಅನಿಸುತ್ತದೆ ಕಾಲುಗಳಲ್ಲಿ ಮುಳ್ಳು ಚುಚ್ಚಿದ್ದರೆ ಮುಳ್ಳು ಒಳಭಾಗದಲ್ಲಿದ್ದು ವಿಪರೀತ ನೋವನ್ನು ಕೊಡುತ್ತಿದ್ದರೆ, ಇದರ ಹಾಲನ್ನು ಆ ಜಾಗಕ್ಕೆ ಹಾಕಿದರೆ ನೆಟ್ಟಿರುವಂತ ಮುಳ್ಳು ಮೇಲಕ್ಕೆ ಬಂದು ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ ಮಂಡಿ ನೋವು ಬೆನ್ನು ನೋವು ಸಮಸ್ಯೆಗಳಿಗೆ ಎಕ್ಕಡ ಎಲೆಯನ್ನು ಬೆಂಕಿಯಲ್ಲಿ ಸೋಕಿಸಿ ಇದನ್ನು ನೋವಿರುವ ಜಾಗಕ್ಕೆ ಶಾಖ ಕೊಟ್ಟರೆ ನೋವು ಕಡಿಮೆಯಾಗುತ್ತದೆ.