Ekadashi vrat july 2023: ಆಷಾಢ ಮಾಸದಲ್ಲಿ ಬರುವ ಪ್ರಥಮ ಏಕಾದಶಿಯು (Ekadashi) ತುಂಬಾ ವೈಶಿಷ್ಟ್ಯತೆಯನ್ನು ಒಳಗೊಂಡಿದೆ ಹಾಗೆಯೇ ಹಿಂದೂಧರ್ಮದ ಪ್ರತಿಯೊಂದು ಮನೆಯಲ್ಲಿ ಏಕಾದಶಿಯಂದು ಉಪವಾಸವನ್ನು ನಿಯಮ ನಿಷ್ಠೆಯಿಂದ ಕೈಗೊಳ್ಳುತ್ತಾರೆ ಹಾಗೆಯೇ ಏಕಾದಶಿ ಉಪವಾಸವು ತುಂಬಾ ಮಹತ್ವ ಪೂರ್ಣವಾಗಿದ್ದು ಆಷಾಢ ಏಕಾದಶಿಯಂದು ಉಪವಾಸ ಮಾಡುವುದು ಅತ್ಯಂತ ಪುಣ್ಯಕರವಾಗಿದೆ ಹಿಂದಿನ ಪಾಪ ಕರ್ಮಗಳು ನಿವಾರಣೆ ಹಿಂದಿ ಮೋಕ್ಷ ಪ್ರಾಪ್ತಿ ಆಗುತ್ತದೆ ಎನ್ನುವ ನಂಬಿಕೆ ಇರುತ್ತದೆ ಹಾಗೆಯೇ ಈ ಆಷಾಢ ಏಕಾದಶಿಯ ದಿನದಂದು ಚಾತುರ್ಮಾಸ ಆರಂಭ ಆಗುತ್ತದೆ.

ಹಾಗೆಯೇ ಈ ಮಾಸದಲ್ಲಿ ಯಾವುದೇ ಶುಭ ಸಮಾರಂಭಗಳಲ್ಲಿ ಮಾಡುವುದು ಇಲ್ಲ ಮತ್ತು ದೇವರ ಆರಾಧನೆಯನ್ನು ಮಾಡುವ ಸಮಯ ಇದಾಗಿದೆ. ಉಪವಾಸ ಮಾಡುವರು ಒಳ್ಳೆಯ ಆಹಾರವನ್ನು ಸೇವಿಸಬೇಕು ಹಾಗೂ ಮಾಂಸ ಮೀನು ಮೊಟ್ಟೆ ಹಾಗೂ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು ಹಣ್ಣು ಹಂಪಲುಗಳನ್ನು ಸೇವಿಸಬಹುದಾಗಿದೆ ಪೂಜೆ ಮಾಡುವಾಗ ಭಗವಾನ ವಿಷ್ಣುವಿಗೆ ತುಳಸಿ ಎಂದರೆ ತುಂಬಾ ಪ್ರಿಯ ಹಾಗಾಗಿ ತುಳಸಿಯ ಅರ್ಚನೆಯನ್ನು ಮಾಡುವ ಮೂಲಕ ಭಗವಾನ್ ವಿಷ್ಣುವಿಗೆ ಹತ್ತಿರವಾಗಬಹುದಾಗಿದೆ ಈ ಸಮಯದಲ್ಲಿ ಬಡವರಿಗೆ ಧನ ಧರ್ಮದ ಕಾರ್ಯವನ್ನು ಮಾಡಬೇಕು ಇದರಿಂದ ಪುಣ್ಯ ಪ್ರಾಪ್ತಿ ಆಗುತ್ತದೆ ನಾವು ಈ ಲೇಖನದ ಮೂಲಕ ಆಷಾಢ ಮಾಸದ ಮೊದಲ ಏಕಾದಶಿಯ ಬಗ್ಗೆ ತಿಳಿದುಕೊಳ್ಳೋಣ.

ಆಷಾಢ ಮಾಸದ ಏಕಾದಶಿಯನ್ನು ಪ್ರಥಮ ಏಕಾದಶಿ (prathama ekadashi) ಹಾಗೂ ಶಯನಿ ಏಕಾದಶಿ ಎಂದು ಕರೆಯುತ್ತಾರೆ ಈ ದಿನದಂದು ವಿಷ್ಣು ದೇವರು ಕ್ಷ್ರೀರ ಸಾಗರದಲ್ಲಿ ಶೇಷ ನಾಗರ ಮೇಲೆ ಯೋಗ ನಿದ್ರೆಗೆ ಜಾರಿದ್ದರು ಹಾಗೆಯೇ ಆಷಾಢ ಏಕಾದಶಿಯಂದು ಉಪವಾಸ ಮಾಡುವುದು ಅತ್ಯಂತ ಪುಣ್ಯಕರವಾಗಿದೆ ಪ್ರಾಮಾಣಿಕವಾಗಿ ಉಪವಾಸ ಮಾಡಿ ಭಕ್ತಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ವಿಷ್ಣುವಿನ ದೈವಿಕ ಅನುಗ್ರಹ ಸಿಗುತ್ತದೆ ಹಿಂದೆ ಮೂರಾಸುರ ಎನ್ನುವ ರಾಕ್ಷಸ ಇದ್ದನು ಈ ರಾಕ್ಷಸ ಕಠಿಣ ತಪಸ್ಸಿನಿಂದ ಹೆಚ್ಚಿನ ಬಲವನ್ನು ಪ್ರಾಪ್ತಿ ಮಾಡಿಕೊಂಡಿದ್ದನು ಆದರೆ ರಾಕ್ಷಸನ ಉಪಟಳ ಜಾಸ್ತಿ ಆಗಿತ್ತು.

ಸ್ವರ್ಗ ಲೋಕದ ಮೇಲೆ ದಂಡೆತ್ತಿ ಹೋಗಿದ್ದನು ಹಾಗೆಯೇ ದೇವಾನು ದೇವತೆಗಳು ಸೋಲಿಸಿ ಸ್ವರ್ಗದಿಂದಲೇ ಓಡಿಸಿ ಬಿಟ್ಟಿದ್ದನು ರಾಕ್ಷಸನ ಉಪಟಳ ತಾಳಲಾರದೆ ದೇವಾನು ದೇವತೆಗಳೂ ಮೂರಸುರ ಎದುರಿಸಲು ಭಗವಂತ ಶ್ರೀ ಹರಿ ಯನ್ನು ಪ್ರಾರ್ಥನೆ ಮಾಡಿಕೊಂಡರು ದೇವಾನು ದೇವತೆಗಳ ಕೋರಿಕೆಯ ಮೇರೆಗೆ ಮೂರಾಸುರನ ಮೇಲೆ ಯುದ್ದ ಮಾಡುತ್ತಾರೆ ಅವರಿಬ್ಬರ ನಡುವಿನ ಯುದ್ದ ಸಾವಿರ ವರ್ಷಗಳ ಕಾಲ ನಡೆಯುತ್ತದೆ

Ekadashi vrat july

ಒಂದು ದಿನ ವಿಷ್ಣುವಿಗೆ ತುಂಬಾ ಆಯಾಸ ಆಗುತ್ತದೆ ಆ ಸಮಯದಲ್ಲಿ ಭಗವಾನ್ ವಿಷ್ಣು ದೇವರು ಭದರಿಕಾಶ್ರಮದ ಗುಹೆಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಹೋಗುತ್ತಾರೆ ಅಲ್ಲಿ ವಿಷ್ಣು ಯೋಗಾ ನಿದ್ರೆಗೆ ಜಾರುತ್ತಾರೆ ನಿದ್ರೆಯಲ್ಲಿ ಇರುವ ವಿಷ್ಣುವನ್ನು ಕೊಲ್ಲಲು ಪ್ರಯತ್ನಿಸುತ್ತಾನೆ ಆಗ ವಿಷ್ಣುವಿನ ದಿವ್ಯ ತೇಜಸ್ಸಿನಿಂದ ಅಸ್ತ ಶಸ್ತ್ರಗಳಿಂದ ಸಜ್ಜಿತಳಾದ ಒಬ್ಬ ಕನ್ಯೆಯು ಅವತರಿಸಿ ಮುರಾಸುರಾರನ್ನು ಸಂಹರಿಸುತ್ತಾರೆ ಮರುದಿನ ವಿಷ್ಣು ದೇವರ ಎಚ್ಚರ ಗೊಳ್ಳುತ್ತಾರೆ ತಿಂಗಳ 11 ದಿನದಂದು ಉಗಮಿಸಿದ ಆ ದೇವಿಗೆ ವಿಷ್ಣು ಏಕಾದಶಿ ದೇವಿ ಎಂದು ಕರೆಯುತ್ತಾರೆ

ದೇವಿಯ ಸತ್ಕಾರ್ಯ ದಿಂದ ಸಂಪ್ರಿತರಾದ ವಿಷ್ಣು ದೇವರು ಬೇಕಾದ ವರವನ್ನು ಕೇಳುವಂತೆ ದೇವಿಯಲ್ಲಿ ತಿಳಿಸುತ್ತಾರೆ ಆಗ ದೇವಿ ಯಾರು ಏಕಾದಶಿ ದಿನ ಉಪವಾಸದಲ್ಲಿ ಇದ್ದು ನಿಯಮ ಬದ್ದವಾಗಿ ತಮ್ಮನ್ನು ಪೂಜಿಸುವರು ಅವರ ತೊಂದರೆಯನ್ನು ನಿವಾರಿಸಿ ಮೋಕ್ಷ ಕರುಣಿಸಿ ಎಂದು ಭಗವಾನ್ ವಿಷ್ಣುವನ್ನು ಕೇಳುತ್ತಾರೆ ಆಗ ವಿಷ್ಣು ತತಾಸ್ತು ಎಂದು ಹೇಳುತ್ತಾರೆ ಅಲ್ಲಿಂದ ಇಂದಿನ ವರೆಗೂ ಏಕಾದಶಿ ವ್ರತ ಆಚರಣೆ ಮಾಡಲಾಗುತ್ತದೆ. ಭದರಿನಾಥದಲ್ಲಿ ಏಕಾದಶಿ ಗುಹೆಯನ್ನು ಇಂದಿಗೂ ಸಹ ಕಾಣಲಾಗುತ್ತದೆ ಇದೊಂದು ಪವಿತ್ರವಾದ ಯಾತ್ರಾ ಕ್ಷೇತ್ರವಾಗಿದೆ ಹೀಗೆ ಆಷಾಢ ಮಾಸದಲ್ಲಿ ಬರುವ ಏಕಾದಶಿಯ ಬಹಳ ಪ್ರಾಮುಖ್ಯತೆಯನ್ನು ಒಳಗೊಂಡಿದ್ದು ಐತಿಹಾಸಿಕ ಪುರಾವೆಗಳನ್ನು ಒಳಗೊಂಡಿದ್ದು ಹಿಂದೂ ಧಾರ್ಮಿಕ ಆಚರಣೆಯಲ್ಲಿ ಕೈಗೊಳ್ಳುವ ಒಂದು ವೃತವಾಗಿದೆ. (ಇದನ್ನೂ ಓದಿ) Libra Horoscope: ತುಲಾ ರಾಶಿಯವರಿಗೆ ಯಾವತ್ತೂ ಇಲ್ಲದ ಖುಷಿ ಈ ತಿಂಗಳಲ್ಲಿ ಕಾದಿದೆ ಯಾಕೆಂದರೆ

Leave a Reply

Your email address will not be published. Required fields are marked *