ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ?

0 92

ಬೆಳ್ಳುಳ್ಳಿ ಇದನ್ನು ತರಕಾರಿಗಳಲ್ಲಿ ಒಂದು ಎಂದು ಹೇಳಬಹುದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಹಾಗೆಯೇ ನೆಗಡಿ ಮತ್ತು ಕೆಮ್ಮು ಆದಾಗ ಇದನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಹಸಿ ಬೆಳ್ಳುಳ್ಳಿಯನ್ನು ತಿಂದರೆ ಬಹಳ ಒಳ್ಳೆಯದು. ಆದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಒಗ್ಗರಣೆಗೆ ಹಾಕಿ ಬಳಸುವವರೇ ಹೆಚ್ಚು. ಆದ್ದರಿಂದ ನಾವು ಇಲ್ಲಿ ಹುರಿದ ಬೆಳ್ಳುಳ್ಳಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕಡಿಮೆ ಕ್ಯಾಲೋರಿ ಇರುವ ಬೆಳ್ಳುಳ್ಳಿಯಲ್ಲಿ ಪ್ರೊಟೀನ್ ಗಳು, ವಿಟಮಿನ್ ಸಿ, ಎ ಮತ್ತು ಬಿ ಇರುತ್ತದೆ. ಹಾಗೆಯೇ ಇದರಲ್ಲಿ ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಜಿಂಕ್ ಅಂಶ ಇರುತ್ತದೆ. ಹಾಗೆಯೇ ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ. ಹಾಗೆಯೇ ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾಗೆಯೇ ರಾತ್ರಿ ಮಲಗುವ ಮೊದಲು ಹುರಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಹಾಗೆಯೇ ವಿಷಕಾರಿ ವಸ್ತುಗಳು ಮೂತ್ರದ ಮೂಲಕ ಹೊರ ಹೋಗುತ್ತದೆ. ಹಾಗೆಯೇ ಇದರಿಂದಾಗಿ ತೂಕ ಕೂಡ ಕಡಿಮೆ ಆಗುತ್ತದೆ. ಎಲುಬುಗಳು ಗಟ್ಟಿಯಾಗುತ್ತವೆ.

ದೇಹಕ್ಕೆ ಬಹಳ ಸುಸ್ತಾಗಿದ್ದರೆ ರಾತ್ರಿ ಹೊತ್ತು ಸೇವನೆ ಮಾಡುವುದರಿಂದ ವಿಶ್ರಾಂತಿ ದೊರಕುತ್ತದೆ. ಉಸಿರಾಟದ ಸಮಸ್ಯೆ ಇರುವವರು ಇದನ್ನು ಸೇವನೆ ಮಾಡಬೇಕು. ಹಾಗೆಯೇ ದೇಹದ ರಕ್ತ ಪರಿಚಲನೆ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಇದು ರಕ್ತವನ್ನು ತೆಳುವಾಗಿಸುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದಲ್ಲದೆ ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸವನ್ನು ಸಹ ಬೆಳ್ಳುಳ್ಳಿ ಮಾಡುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು.

ಹಸಿ ಬೆಳ್ಳುಳ್ಳಿ ಮೊಗ್ಗುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಹಸಿವಿನ ಕೊರತೆಯ ಸಮಸ್ಯೆ ಸುಧಾರಿಸುತ್ತದೆ. ಇದು ಹೃದಯದ ರಕ್ತನಾಳಗಳನ್ನು ತೆರೆಯುತ್ತದೆ ಮತ್ತು ಹೃದಯದ ಬ್ಲಾಕ್​ ಅನ್ನು ತಡೆಯುತ್ತದೆ. ಪ್ರತಿದಿನ ಎರಡು ಮೊಗ್ಗು ಹಸಿ ಬೆಳ್ಳುಳ್ಳಿಯನ್ನು ಬಿಸಿ ನೀರಿನೊಂದಿಗೆ ಅಗೆದು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶೀತಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರ. ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾ, ಕೆಮ್ಮು ಮುಂತಾದ ಉಸಿರಾಟದ ಕಾಯಿಲೆಗಳು ತ್ವರಿತವಾಗಿ ಗುಣವಾಗಲು ಬಿಸಿ ನೀರಿನೊಂದಿಗೆ ಪ್ರತಿದಿನ ಬಿಸಿ ನೀರಿನೊಂದಿಗೆ ಬೆಳ್ಳುಳ್ಳಿ ಸೇವಿಸುವುದು ಉತ್ತಮ.

Leave A Reply

Your email address will not be published.