ಇವತ್ತಿನ ದಿನ ಬೊಜ್ಜು ಎನ್ನುವಂತದದು ಎಲ್ಲರಿಗೂ ಒಂದು ಮಾರಕ ಪಿಡುಗಾಗಿ ಕಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರಿಗೂ ಮೈಯನ್ನು ಕರಗಿಸುವುದೇ ಒಂದು ಕೆಲಸವಾಗಿದೆ. ಹಿಂದಿನ ಕಾಲದಲ್ಲಿ ವಯಸ್ಸಾಗಿರುವಂತಹ ಕೋಟ್ಯಾಧಿಪತಿಗೆ ಮಾತ್ರ ಬೊಜ್ಜು ಬರುತ್ತಿತ್ತು ಉಳಿದವರೆಲ್ಲರೂ ಗಟ್ಟಿಮುಟ್ಟಾದ ಸದೃಢ ದೇಹವನ್ನು ಹೊಂದಿದ್ದರು. ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ಬೊಜ್ಜನ್ನು ಕರಗಿಸುವುದಕ್ಕೆ ಅನೇಕ ಜನರು ವೈದ್ಯರನ್ನು ಸಂಪರ್ಕಿಸುತ್ತಾರೆ ಜಿಮ್ ಗಳಿಗೆ ಹೋಗುತ್ತಾರೆ ಇನ್ನು ಏನೇನೊ ಪ್ರಯತ್ನ ಮಾಡುತ್ತಾರೆ.
ಕೆಲವರು ಬೊಜ್ಜು ಬರುವುದಕ್ಕೆ ಕೆಲವು ಕಾರಣಗಳನ್ನು ತಿಳಿಸಿದ್ದಾರೆ ಅವುಗಳು ಜಾಸ್ತಿ ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಜಂಕ್ ಫುಡ್ ಗಳನ್ನು ತಿಎನ್ನುವುದು ಕಾರಣ ಎಂದು ಕೆಲವರು ಹೇಳುತ್ತಾರೆ ಇನ್ನು ಕೆಲವರು ಹೇಳುವುದು ವ್ಯಾಯಾಮವಿಲ್ಲದೆ ದೇಹದ ತೂಕ ಹೆಚ್ಚುತ್ತದೆ ಎಂದು ಹೇಳುತ್ತಾರೆ ಇನ್ನು ಕೆಲವರು ಅತಿಯಾಗಿ ನಿದ್ದೆ ಮಾಡುವುದು ಬೊಜ್ಜು ಹೆಚ್ಚಾಗುವುದಕ್ಕೆ ಕಾರಣ ಎಂದು ಹೇಳುತ್ತಾರೆ.
ಬೊಜ್ಜು ಹೆಚ್ಚಾಗುವುದಕ್ಕೆ ಈ ಮೇಲೆ ತಿಳಿಸಿರುವ ಹೇಳಿಕೆಗಳು ಕಾರಣವಾಗುತ್ತವೆ ಅವುಗಳ ಜೊತೆಗೆ ಬೊಜ್ಜು ಹೆಚ್ಚಾಗುವುದಕ್ಕೆ ನಿಜವಾದ ಕಾರಣವನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆಯುರ್ವೇದದ ಪ್ರಕಾರ ತೂಕ ಹೆಚ್ಚಾಗುವುದಕ್ಕೆ ಮೂಲಕಾರಣ ಅಗ್ನಿಮಾಂದ್ಯ. ಅಗ್ನಿಮಾಂದ್ಯ ದೇಹದ ತೂಕವನ್ನು ಹೆಚ್ಚಿಸುವುದಕ್ಕೆ ಯಾವ ರೀತಿಯಾಗಿ ಕಾರಣ ಎಂದರೆ ದೇವರು ನಮ್ಮ ದೇಹವನ್ನು ಯಾವ ರೀತಿಯಾಗಿ ಸೃಷ್ಟಿಸಿದ್ದಾನೆ ಎಂದರೆ ನಾವು ಆಹಾರವನ್ನು ತಿಂದ ನಂತರ ಅದು ಹೊಟ್ಟೆಯ ಒಳಗಡೆ ಹೋಗಿ ಅಗ್ನಿ ದೀಪ್ತಿ ಆಗಬೇಕು ಅಗ್ನಿ ದೀಪ್ತಿ ಆದಮೇಲೆ ಜೀರ್ಣ ಆಗಬೇಕು ಜೀರ್ಣ ಆದಮೇಲೆ ಅದು ಎರಡು ಭಾಗವಾಗಿ ವಿಭಾಗವಾಗಬೇಕು. ಅದು ಒಂದು ಸಾರ ಭಾಗ ಇನ್ನೊಂದು ಕಿಟ್ಟ ಭಾಗ ಸಾರ ಭಾಗ ಉಪಯೋಗವಾಗುವಂಥದ್ದು ಅದು ರಕ್ತಕ್ಕೆ ಸೇರಿ ಉತ್ತರೋತ್ತರ ಧಾತುಗಳನ್ನು ಸೃಷ್ಟಿಸಿ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
ಕಿಟ್ಟ ಭಾಗ ಇದರಿಂದ ಯಾವುದೇ ಉಪಯೋಗ ಇರುವುದಿಲ್ಲ ಅದು ಮಲದ ರೂಪದಲ್ಲಿ ದೇಹದಿಂದ ವಿಸರ್ಜನೆಯಾಗುತ್ತದೆ ಈ ರೀತಿಯಾಗಿ ದೇವರು ನಮ್ಮ ದೇಹವನ್ನು ಸೃಷ್ಟಿ ಮಾಡಿರುತ್ತಾರೆ. ಒಂದು ವೇಳೆ ನಮ್ಮ ದೇಹದಲ್ಲಿ ನ್ಯೂನ್ಯತೆ ಆಗಿ ಅಗ್ನಿ ಮಾಂದಿಯಾಗಿ ಜಠರಾಗ್ನಿಯ ಕೊರತೆ ಆಗಿ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣ ಆಗದಿದ್ದಾಗ ಸಾರ ಭಾಗ ಮತ್ತು ಕಿಟ್ಟ ಭಾಗ ಎರಡು ಕೂಡ ಉಂಟಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸಾರ ಭಾಗವು ಅಲ್ಲದ ಕಿಟ್ಟ ಭಾಗವು ಅಲ್ಲದ ಅಂಶವನ್ನು ಆಮ ಎಂದು ಕರೆಯುತ್ತಾರೆ. ಅದು ಉಂಟಾದಾಗ ದೇಹ ಗೊಂದಲಕ್ಕೆ ಒಳಗಾಗುತ್ತದೆ ಅರ್ಧ ಬರ್ದ ಬೆಂದಿರುವಂತಹ ಭಾಗವನ್ನು ಅಥವಾ ಆಮವನ್ನು ಏನು ಮಾಡಬೇಕು ಎಂಬುದು ದೇಹಕ್ಕೆ ತಿಳಿಯುವುದಿಲ್ಲ ಆಗ ಆ ಅಂಶವನ್ನು ಸಾರ ಭಾಗಕ್ಕೂ ಸೇರಿಸದೆ ಕಿಟ್ಟ ಭಾಗಕ್ಕೂ ಸೇರಿಸದೆ ದೇಹದಲ್ಲಿ ಸಂಗ್ರಹಿಸುತ್ತಾ ಹೋಗುತ್ತದೆ.
ಮೊದಲು ಅದು ಲಿವರ್ ನಲ್ಲಿ ಸಂಗ್ರಹಿಸುತ್ತದೆ ಅದು ಪೂರ್ತಿಯಾದ ನಂತರ ಇನ್ನುಳಿದ ಭಾಗಗಳಲ್ಲಿ ಸಂಗ್ರಹಿಸುತ್ತಾ ಹೋಗುತ್ತದೆ. ಅದರ ಸಂಗ್ರಹ ಹೆಚ್ಚಾದಂತೆ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ ಆಗ ದೇಹದ ತೂಕ ಹೆಚ್ಚಾಗುತ್ತದೆ. ಹೀಗಾದಾಗ ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳಬಹುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ನಾವು ಇದಕ್ಕೆ ಮನೆಯಲ್ಲಿಯೇ ಸುಲಭವಾಗಿ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ ಊಟಕ್ಕಿಂತ ಮೊದಲು ಹಸಿಶುಂಠಿಯ ಸಣ್ಣ ಭಾಗವನ್ನು ತೆಗೆದುಕೊಂಡು ಅದರಲ್ಲಿ ಸೈಂಧವ ಲವಣವನ್ನು ಅಥವಾ ಕಲ್ಲುಪ್ಪನ್ನು ಹಾಕಿ ಚಪ್ಪರಿಸಿ ತಿನ್ನಬೇಕು
ಹೀಗೆ ಮಾಡುವುದರಿಂದ ದೇಹದಲ್ಲಿ ಆಮ ಉತ್ಪತ್ತಿಯಾಗುವುದಿಲ್ಲ. ದೇಹದ ತೂಕವೂ ಕೂಡ ಹೆಚ್ಚಾಗುವುದಿಲ್ಲ ನೀವು ಕಷ್ಟಪಟ್ಟು ವ್ಯಾಯಾಮವನ್ನು ಮಾಡುವುದಕ್ಕಿಂತ ಈ ನಿಯಮವನ್ನು ಅನುಸರಿಸುವುದರಿಂದ ಸುಲಭವಾಗಿ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಬಹುದು ಆರೋಗ್ಯದಿಂದ ಇರಬಹುದು ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.