ಮನೆಯ ಈ ಸ್ಥಳದಲ್ಲಿ ಕುಳಿತು ಊಟ ಮಾಡಿದರೆ ಮನೆಗೆ ಧಾರಿದ್ರ್ಯಾ ಕಾಡುತ್ತೆ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಆಧುನಿಕ ಜೀವನಶೈಲಿಯಲ್ಲಿ, ನಾವು ತಿನ್ನುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದಿನ ಜನರು ಸುಖಾಸನದಲ್ಲಿ ನೆಲದ ಮೇಲೆ ಕುಳಿತು ಆಹಾರವನ್ನು ತಿನ್ನುತ್ತಿದ್ದರು. ಆಹಾರವನ್ನು ತಿನ್ನುವಾಗ ಅವರು ಯಾರೊಂದಿಗೆ ಮಾತನಾಡಲಿಲ್ಲ. ಜ್ಯೋತಿಷ್ಯ ದೃಷ್ಟಿ ಕೋನದಿಂದ, ನಮ್ಮ ಆಹಾರ ಪದ್ಧತಿ ನಮ್ಮ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ಹಾಸಿಗೆಯ ಮೇಲೆ ಕುಳಿತು ಎಂದಿಗೂ ಕೂಡ ಊಟ ಅಥವಾ ಆಹಾರ ಸೇವಿಸಬೇಡಿ, ಇದರಿಂದ ಅನ್ನಕ್ಕೆ ಅವಮಾನ ಎಸಗಿದಂತಾಗುತ್ತದೆ ಮತ್ತು ಇದು ರಾಹುವಿನ ಅಸಮಾಧಾನಕ್ಕೆ ಕಾರಣವಾಗುತ್ತದೆ. ತಿನ್ನುವಾಗ ಟಿವಿ ನೋಡುವುದು, ಪುಸ್ತಕಗಳನ್ನು ಓದುವುದು ಒಳ್ಳೆಯದಲ್ಲ, ಈ ಕಾರಣದಿಂದಾಗಿ ಆಹಾರ ಕಣಗಳು ನಮ್ಮ ಉಸಿರಾಟದ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ.

ಆಹಾರವನ್ನು ತಿನ್ನುವ ಮೊದಲು ಕೈ ಕಾಲುಗಳನ್ನು ತೊಳೆಯಬೇಕು, ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ನಮ್ಮ ಹೊಟ್ಟೆಗೆ ತಲುಪುವುದನ್ನು ತಪ್ಪಿಸುತ್ತದೆ. ಆಹಾರವನ್ನು ಬೇಗ ಬೇಗ ಅಗಿಯಬೇಡಿ, ಊಟವಾದ ಕೂಡಲೇ ನೀರು ಕಡಿಯಬೇಡಿ. ಊಟವಾದ 40 ನಿಮಿಷಗಳ ನೀವು ನೀರನ್ನು ಕುಡಿಯಬಹುದು.

ಯಾವಾಗಲೂ ಸುಖಾಸನದಲ್ಲಿ ಕುಳಿತು ಊಟ ಮಾಡಬೇಕು. ಊಟವಾದ ಬಳಿಕ ಕೆಲವರು ತಮ್ಮ ತಟ್ಟೆಯಲ್ಲಿಯೇ ಕೈ ತೊಳೆಯುತ್ತಾರೆ, ಇದು ಅನ್ನಪೂರ್ಣೆಯ ಅಪಮಾನ ಎಂಬುದನ್ನು ಮರೆಯದಿರಿ. ಇದರಿಂದ ಚಂದ್ರ ಹಾಗೂ ಶುಕ್ರ ಕೂಡ ಅಪ್ರಸನ್ನರಾಗುತ್ತಾರೆ, ಇಂತಹ ಮನೆಯಿಂದ ಏಳಿಗೆ ಹೊರಟು ಹೋಗುತ್ತದೆ. ತಟ್ಟೆಯಲ್ಲಿ ಎಂಜಲು ಬಿಟ್ಟು ಏಳುವುದು ಅನ್ನಪೂರ್ಣೆಯ ಅವಮಾನ. ಇದರಿಂದ ಅನ್ನಪೂರ್ಣೆಯ ಶಾಪ ತಟ್ಟುತ್ತದೆ. ಊಟ ಮಾಡುವಾಗ ನಮ್ಮ ಮುಖ ಯಾವಾಗಲೂ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇರಬೇಕು.

ಯಾವಾಗ ನೋಡಿದರು ನಿಮಗೆ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದಲ್ಲಿ ಅಥಾವ ಮನೆಯ ಸದಸ್ಯರ ಆರೋಗ್ಯವು ಯಾವಾಗಲೂ ಕೆಡುತ್ತಿದ್ದಲ್ಲಿ, ಪಶ್ಚಿಮಕ್ಕೆ ಮುಖ ಮಾಡಿ ಆಹಾರವನ್ನು ಸೇವಿಸಬೇಕು. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸುತ್ತದೆ. ಉತ್ತಮ ಆರೋಗ್ಯ, ರೋಗ ತಡೆಗಟ್ಟುವಿಕೆಗಾಗಿ ವಾಸ್ತುವಿನಲ್ಲಿ ಪಶ್ಚಿಮ ದಿಕ್ಕಿಗೆ ವಿಶೇಷ ಪ್ರಾಮುಖ್ಯತೆ ಇದೆ. ವಸ್ತು ಪ್ರಕಾರ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚನ್ನಾಗಿ ಇಲ್ಲದಿದ್ದರೆ ಅಥವಾ ಹಣದ ಉಳಿತಾಯವನ್ನೆ ಮಾಡಲಾಗದಿದ್ದರೆ, ಉತ್ತರಕ್ಕೆ ಮುಖ ಮಾಡಿ ಆಹಾರ ಸೇವಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ ಮನೆಯ ಮುಖ್ಯಸ್ಥನಾದವನು ಯಾವಾಗಲೂ ಉತ್ತರಕ್ಕೆ ಎದುರಾಗಿ ಕುಳಿತು ಊಟವನ್ನು ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *