ಈ ಹಣ್ಣು ನಮ್ಮ ದೇಶದ ಹಣ್ಣು ಅಲ್ಲ. ಅದಕ್ಕಾಗಿ ಕೆಲವರಿಗೆ ಈ ಹಣ್ಣಿನ ಬಗೆಗೆ ತಿಳಿದಿಲ್ಲ. ಈ ಹಣ್ಣು ಜೀವಕ್ಕೆ ಅತಿ ಮುಖ್ಯವಾದ ಪೋಷಕಾಂಶಗಳನ್ನು ಒದಗಿಸಿ ನಮ್ಮ ದೇಹದ ಆರೋಗ್ಯ ಕಾಪಾಡುತ್ತದೆ. ಹಾಗಾದರೆ ಈ ಹಣ್ಣಿನ ಹೆಸರೇನು ಕೇಳಿದರೆ ಈ ಹಣ್ಣಿನ ಹೆಸರು ಕಿವಿ ಹಣ್ಣು. ಈ ಕಿವಿ ಹಣ್ಣನ್ನು ದಿನಕ್ಕೊಂದರಂತೆ ತಿಂದರೆ ಏನಾಗುತ್ತದೆ ತಿಳಿದುಕೊಳ್ಳಬೇಕಾ ಹಾಗಾದರೆ ನಿಮಗೆ ಬೇಕಾದ ಮಾಹಿತಿ ಇಲ್ಲಿದೆ. ಅಧ್ಯಯನದ ಪ್ರಕಾರ ಈ ಹಣ್ಣಿನಲ್ಲಿ ಅತಿ ಹೆಚ್ಚು ಕ್ಯಾಲೋರಿ ಹಾಗೂ ಪ್ರೋಟೀನ್ ಇದೆ ಎಂದು ತಿಳಿದು ಬಂದಿದೆ. ಕೃಷಿ ಇಲಾಖೆಯ ಪ್ರಕಾರ 100 ಗ್ರಾಂ ಹಣ್ಣಿನಲ್ಲಿ
61 ಗ್ರಾಂ ಕ್ಯಾಲರಿ, 14.66ಗ್ರಾಂ ಕಾರ್ಬೋಹೈಡ್ರೇಟ್, 1.14 ಗ್ರಾಂ ಪ್ರೋಟೀನ್, 0.52ಗ್ರಾಂ ಪ್ಯಾಟ್ ಅಂಶಗಳಿವೆಯಂತೆ. ಈ ಹಣ್ಣಿನಲ್ಲಿ ರೋಗ ಪ್ರತಿರೋಧಕವು ಕಿತ್ತಳೆ ಹಾಗೂ ನಿಂಬೆಹಣ್ಣಿಗಿಂತ ಜಾಸ್ತಿ ವಿಟಮಿನ್ ಸಿ ಅಂಶವಿದೆ. ಹಾಗಾಗಿ ಕಿವಿ ಹಣ್ಣು ಒಂದು ಉತ್ತಮ ಆಂಟಿಒಕ್ಸಿಡೆಂಟ್ ಗುಣ ಇದಕ್ಕಿದೆ ಹಾಗೂ ಪ್ರೀರೆಡಿಕಲ್ಸ್ ತೆಗೆದುಹಾಕಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
ಕಿವಿ ಹಣ್ಣು ನಿದ್ದೆಯ ಸಮಸ್ಯೆಯನ್ನು ನಿವಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಕಿವಿ ಹಣ್ಣು ತಿನ್ನುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಕಿವಿ ಹಣ್ಣಿನಲ್ಲಿರುವ ಆಂಟಿಒಕ್ಸಿಡೆಂಟ್ ಹಾಗೂ ಸರೋಟನಿನ್ ಅಂಶ ನಿದ್ದೆಯ ಸಮಸ್ಯೆಗೆ ರಾಮಬಾಣವಾಗಿದೆ. ಈ ಹಣ್ಣಿನಿಂದ ಹೆಚ್ಚಿನ ಡೈಯೆಟರಿ ಅಂಶ ಸಿಗೋದರಿಂದ ಮಧುಮೇಹಿಗಳಿಗೆ ಉತ್ತಮ. ಪೈಬರ್ ಅಂಶ ಹೆಚ್ಚಿರುವುದರಿಂದ ಕೊಲೆಸ್ಟರಾಲ್ ಪ್ರಮಾಣ ಕಡಿಮೆ ಮಾಡಿ ದೇಹದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಿಸುತ್ತದೆ. ಉತ್ತಮ ಜೀರ್ಣಕ್ರಿಯೆ. ತಿಂದದ್ದು ನಿಧಾನವಾಗಿ ಕರಗಿ ಹೊಟ್ಟೆ ಉಬ್ಬುವ ಜೀರ್ಣಕ್ರಿಯೆ ಸಮಸ್ಯೆ ಅನುಭವಿಸುವವರಿಗೆ ಈ ಕಿವಿ ಹಣ್ಣು ಉತ್ತಮವಾಗಿದೆ. ಯಾಕೆಂದರೆ ಇದರಲ್ಲಿ ಡೈಯೆಟರಿ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಗೂ ಸಹಾಯ ಮಾಡಿ ಹಸಿವನ್ನು ಹೆಚ್ಚಿಸುತ್ತದೆ. ವಿಟಮಿನ್ ಇ ಇರುವ ಹಣ್ಣಿನಲ್ಲಿ ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ ಆದರೆ ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಅಂಶ ಇದ್ದರೂ ಕೊಬ್ಬಿನ ಅಂಶ ಕಡಿಮೆ ಇದೆ. ಇದರಿಂದ ತ್ವಚೆ ಹಾಗೂ ಹೃದಯಕ್ಕೆ ಒಳ್ಳೆಯದು. ಬಾಳೆ ಹಣ್ಣಿನಲ್ಲಿರುವಷ್ಟೇ ಪೊಟ್ಯಾಸಿಯಮ್ ಕಿವಿ ಹಣ್ಣಿನಲ್ಲಿಯೂ ಇದೆ. ಇದರಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ. ಈಗಿನ ಜಂಕ್ ಪುಡ್ ಗಳಿಂದ ಉಂಟಾಗುವ ಅಸಿಡಿಟಿಯನ್ನು ತೆಗೆದು ಹಾಕುವುದರ ಜೊತೆ ಮುಖದಲ್ಲಿ ಸುಕ್ಕುಗಟ್ಟುವುದು ಹಾಗೂ ಕಲೆ ಹಾಗೂ ನೆರಿಗೆಗಳನ್ನು ತಡೆಯುತ್ತದೆ.
ಕೋಳಿ ಮೊಟ್ಟೆಯ ಗಾತ್ರವಿರುವ ಈ ಹಣ್ಣು ನೋಡಲು ಎಷ್ಟು ವಿಚಿತ್ರವೊ ರುಚಿಯು ಹಾಗೆಯೆ ವಿಭಿನ್ನವಾಗಿದೆ. ಕಿವಿ ಹಣ್ಣಿನಿಂದ ಸಿಗುವ ಆರೋಗ್ಯ ಲಾಭಗಳು ಯಾವವು ಎಂದರೆ ಮೊದಲನೆಯದಾಗಿ ಡೆಂಗ್ಯೂ ಜ್ವರಕ್ಕೆ ಕಿವಿ ಹಣ್ಣು ರಾಮಬಾಣ. ದೇಹದ ಬಿಳಿ ರಕ್ತ ಕಣದ ಉತ್ಪತ್ತಿ ಹೆಚ್ಚಿಸುವ ಗುಣವಿರುವುದರಿಂದ ಡೆಂಗ್ಯೂ ಜ್ವರ ಇರುವವರು ದಿನಕ್ಕೊಂದು ಹಣ್ಣನ್ನು ತಿಂದರೆ ಒಳ್ಳೆಯದು. ಕ್ಯಾನ್ಸರ್ ಅನ್ನು ಕಿವಿ ಹಣ್ಣು ತಡೆಯುತ್ತದೆ. ಕ್ಯಾನ್ಸರ್ ಅಂಶವನ್ನು ವಿರೋಧಿಸುವ ಅಂಶ ಈ ಕಿವಿ ಹಣ್ಣಿನಲ್ಲಿ ಇರುವುದರಿಂದ ಚರ್ಮ, ಪಿತ್ತಕೋಶ, ಪ್ರೊಸ್ಟ್ಯಾಟ್ ಹಾಗೂ ಸ್ತನ ಕ್ಯಾನ್ಸರ್ ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ನಾರಿನ ಅಂಶ ಇರುವುದರಿಂದ ಮಲಬದ್ಧತೆ ಹಾಗೂ ಅಜೀರ್ಣ ಸಮಸ್ಯೆ ನಿವಾರಿಸುತ್ತದೆ. ವಯಸ್ಸಾದ ನಂತರ ಬರುವ ಮರೆವಿನ ಸಮಸ್ಯೆಗೆ ಇದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಜೀವಸತ್ವಗಳು ಮೆದುಳಿನ ನರವನ್ನು ಬಲಪಡಿಸಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಅಲ್ಸಿಮರ್ಸ್, ವಯಸ್ಕರ ನಿದಿರೆ ಸಮಸ್ಯೆ, ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡುತ್ತದೆ. ಶುಗರ್ ಪ್ರಮಾಣ ಕಡಿಮೆ ಮಾಡುತ್ತದೆ. ಹೃದಯ ರೋಗಕ್ಕೆ ಒಳ್ಳೆಯದು. ಹೃದಯಾಗಘಾತವನ್ನು ಇದು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಸೌಂದರ್ಯ ವರ್ಧಕ. ಕಿವಿ ಹಣ್ಣಿನಿಂದ ತಯಾರಾಗುವ ವೈನ್ ಗೆ ಭಾರಿ ಬೇಡಿಕೆ ಇದೆ. ಇವೆಲ್ಲವೂ ಕಿವಿ ಹಣ್ಣಿನ ಉಪಯೋಗಗಳಾಗಿವೆ.