Ultimate magazine theme for WordPress.

ಬೆಲ್ಲ ಹಾಗೂ ಕಡ್ಲೆ ತಿನ್ನುವುದರಿಂದ ಆಗುವ ಪ್ರಯೋಜನವಿದು

0 1

ಚಳಿಗಾಲ ಬಂತೆಂದರೆ ಕೆಲವರಿಗೆ ಆನಂದ, ಇನ್ನೂ ಕೆಲವರಿಗೆ ಅಯ್ಯೋ ಈ ಚಳಿಗಾಲ ಯಾವಾಗ ಮುಗಿಯತ್ತೆ ಅಂತ ಅನ್ಸತ್ತೆ. ಚಳಿಗಾಲದಲ್ಲಿ ವೈರಸ್ ಮತ್ತು ಶೀತದ ಸಮಸ್ಯೆ ಮಕ್ಕಳಲ್ಲಿ ಮತ್ತು ವಯಸ್ಸಾದವರಲ್ಲಿ ತುಂಬಾ ಇರತ್ತೆ. ಈ ಸಮಯದಲ್ಲಿ ದೇಹವನ್ನು ಬೆಚ್ಚಗೆ ಇರಿಸಲು ಮತ್ತು ದೇಹದ ಪ್ರತಿ ರೋಧಕ ಶಕ್ತಿಯನ್ನು ಹೆಚ್ಚಾಗುವಂತೆ ಮಾಡಿಕೊಳ್ಳಲು ನಾವು ತಿಳಿದುಕೊಳ್ಳಬೇಕು. ಈ ಸಮಯದಲ್ಲಿ ನಾವು ಪದೇ ಪದೇ ವೈದ್ಯರನ್ನು ಭೇಟಿ ಆಗಿ ಔಷಧಿ ತೆಗೆದುಕೊಳ್ಳುವುದರ ಬದಲು ಮನೆಯಲ್ಲಿಯೇ ಸುಲಬವಾಗಿ ಈ ವಿಧಾನವನ್ನು ಅನುಸರಿಸಿ ನೋಡಿ.

ಬೆಲ್ಲ ಮತ್ತು ಕಡಲೆ ಎರಡನ್ನೂ ಸೇರಿಸಿ ಚಳಿಗಾಲದಲ್ಲಿ ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ. ಬೆಲ್ಲ ಮತ್ತು ಕಡಲೆಯನ್ನು ಸೇರಿಸಿ ತಿನ್ನುವುದರಿಂದ ಅದು ನಮ್ಮ ದೇಹವನ್ನು ಸೇರಿ ಔಷಧವಾಗಿ ಪರಿಣಮಿಸುತ್ತದೆ. ಈ ಎರಡು ಪದಾರ್ಥಗಳನ್ನು ಒಗ್ಗೂಡಿಸುವ ಮೂಲಕ ನಾವು ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು.

ಬೆಲ್ಲ ಮತ್ತು ಕಡಲೆಯನ್ನು ತಿನ್ನುವುದರಿಂದ ಕಬ್ಬಿಣ ಅಂಶ ಹೇರಳವಾಗಿ ದೊರೆಯುತ್ತದೆ. ಇದರಿಂದಾಗಿ ರಕ್ತ ಹೀನತೆಯನ್ನು ತಪ್ಪಿಸಬಹುದು. ಅದೇ ಸಮಯದಲ್ಲಿ ಹುರಿದ ಕಡಲೆಯ ಜೊತೆಗೆ ಕಬ್ಬಿಣ ಅಂಶದ ಜೊತೆಗೆ ಪ್ರೊಟೀನ್ ಸಹ ಸರಿಯಾಗಿ ದೊರಕುತ್ತದೆ. ಈ ರೀತಿ ಬೆಲ್ಲ ಮತ್ತು ಕಡಲೆ ಸೇವಿಸುವುದರಿಂದ ರಕ್ತ ಹೀನತೆಗೆ ಮತ್ತು ಕಬ್ಬಿಣ ಅಂಶ ಇರುವ ಸಮಸ್ಯೆಯನ್ನು ನಿವಾರಿಸಲು ಸಾಧ್ಯ ಆಗುತ್ತದೆ.

ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ ಹಾಗೆ ಅಸ್ವತತೆಯನ್ನು ತೆಗೆದು ಹಾಕಲು ಬೆಲ್ಲ ಉತ್ತಮ ಆಹಾರ ಎಂದು ಪರಿಗಣಿಸಲಾಗಿದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬೆಲ್ಲ ಮತ್ತು ಕಡಲೆಯನ್ನು ಸೇರಿಸಿ ತಿನ್ನಬೇಕು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದರಿಂದ ರಕ್ತ ಹೀನತೆ ಉಂಟಾಗುತ್ತದೆ. ಈ ರೋಗವು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದು ನಮ್ಮ ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯಿಂದಾಗಿ ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯವೂ ಸಾಮಾನ್ಯವಾಗಿ ಕಂಡು ಬರುತ್ತದೆ. ಅಂತಹ ಸಮಯದಲ್ಲಿ ಮಹಿಳೆಯರಿಗೆ ಆಹಾರದಲ್ಲಿ ಕಬ್ಬಿಣದ ಅಂಶ ಇರುವ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಕಬ್ಬಿಣ ಅಂಶ ಇರುವ ಆಹಾರವನ್ನು ಸೇವಿಸಿದರೆ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.ಕಡಲೆ ಮತ್ತು ಬೆಲ್ಲ ನಮ್ಮದೇಹವನ್ನು ರಕ್ತ ಹೀನತೆಯಿಂದ ಕಾಪಾಡುವುದು ಅಲ್ಲದೆ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ. ದೇಹದಲ್ಲಿ ಉಂಟಾದ ಆಯಾಸ ಮತ್ತು ದೌರ್ಬಲ್ಯವನ್ನು ಸಹ ಕಡಿಮೆ ಮಾಡುತ್ತದೆ. ನಿಯಮಿತವಾಗಿ ಮತ್ತು ನಿಯಂತ್ರಿತ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಗಳು ಸಿಗುತ್ತವೆ.

Leave A Reply

Your email address will not be published.