ಸಿಹಿ ಎಂದ ತಕ್ಷಣ ನಮಗೆ ನೆನಪಾಗುವುದು ಬೆಲ್ಲ ಮತ್ತು ಸಕ್ಕರೆ. ಸುಮಾರು ಎಲ್ಲ ಬಗೆಯ ತಿಂಡಿಗಳಿಗೂ ನಾವು ಸಕ್ಕರೆಯನ್ನು ಬಳಸುತ್ತೇವೆ. ಬೆಲ್ಲವನ್ನು ಕೆಲವು ತಿಂಡಿಗಳಿಗೆ ಮಾತ್ರ ಬಳಸುವುದು ರೂಢಿ. ದಿನನಿತ್ಯದ ಅಡುಗೆಗೆ ಸಾಂಬಾರಿಗೆ ಬೆಲ್ಲವನ್ನೆ ಬಳಸುವುದು ರೂಢಿ. ಹಾಗಾದರೆ ಬೆಲ್ಲದಿಂದ ಏನೇನು ಲಾಭ ಸಿಗುತ್ತದೆ? ಮತ್ತು ಬೆಲ್ಲದ ಆರಿಗ್ಯಕರ ಅಂಶಗಳು ಎನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಕ್ಕರೆಯು ಸಿಹಿಗೆ ಹೆಸರುವಾಸಿ ಆಗಿದ್ದರೂ ಸಹ ಸಕ್ಕರೆಯನ್ನು ಬಿಳಿ ವಿಷ ಎಂದು ಕರೆಯುತ್ತಾರೆ. ಸಕ್ಕರೆಯನ್ನು ಮಿತವಾಗಿ ಬಳಸುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಇನ್ನೂ ಬೆಲ್ಲದಿಂದ ಮಲಬದ್ಧತೆ ಕಡಿಮೆ ಮಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತದೆ. ಬೆಲ್ಲ ಮೂತ್ರಪಿಂಡವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ. ರಕ್ತವನ್ನು ಶುದ್ಧಿಕರಣ ಮಾಡಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಬೆಲ್ಲವೂ ಪದೆ ಪದೆ ಜ್ವರ ಬರುವುದನ್ನು ಕಡಿಮೆಯಾಗುವಂತೆ ಮಾಡುತ್ತದೆ. ಬೆಲ್ಲವನ್ನು ಮಿತವಾಗಿ ಸೇವಿಸುವುದರಿಂದ, ದೇಹದಲ್ಲಿನ ಬೇಡವಾದ ವಸ್ತುಗಳನ್ನು ಹೊರಹಾಕಿ ದೇಹವನ್ನು ಸ್ವಚ್ಛ ಮಾಡುತ್ತದೆ.
ಬೆಲ್ಲವೂ ಹೆಣ್ಣುಮಕ್ಕಳ ತಿಂಗಳ ನೋವುಗಳನ್ನು ಕಡಿಮೆ ಮಾಡುತ್ತದೆ. ಬೆಲ್ಲವು ಕರುಳಿನ ಆರೋಗ್ಯವನ್ನು ಕಾಪಾಡಿ ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಅನಿಮಿಯಾ ಕಡಿಮೆ ಮಾಡುತ್ತದೆ. ಸಂಧಿ ನೋವಿಗೆ ಬೆಲ್ಲವು ಉತ್ತಮ ಪರಿಹಾರ. ಹೊಟ್ಟೆಯನ್ನು ತಂಪಾಗಿರಿಸುತ್ತದೆ. ರಕ್ತದೊತ್ತಡಕ್ಕೆ ಬೆಲ್ಲ ತುಂಬಾ ಉತ್ತಮ. ಬೆಲ್ಲ ಶ್ವಾಸಕೋಶದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಸಕ್ಕರೆಯು ದೇಹಕ್ಕೆ ಬೇಕಾದ ಕಾರ್ಬೊಹೈಡ್ರೇಟ್ ಒದಗಿಸಿದರೂ, ಬೆಲ್ಲವು ದಿನವಿಡಿ ದೇಹವು ಶಕ್ತಿಯುತವಾಗಿರುವಂತೆ ಮಾಡುತ್ತದೆ. ಬೆಲ್ಲವು ಸುಸ್ತು ಹಾಗೂ ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಕಾಯಿಲೆ ಬರುವ ಸಂಭವವೂ ಕಡಿಮೆ ಆಗುತ್ತದೆ.
ಸಕ್ಕರೆಯು ನಾಲಿಗೆಗೆ ತುಂಬಾ ರುಚಿಯಾಗುತ್ತದೆ. ಆದರೆ ದೇಹಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಆದಷ್ಟು ತಿಂಡಿಗಳಲ್ಲಿ ಬೆಲ್ಲ ಬಳಸುವ ರೂಢಿ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.