ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಿಹಿ ತಿಂಡಿಗಳಲ್ಲಿಯೂ ಸಕ್ಕರೆ ಬಳಕೆ ಹೆಚ್ಚಾಗಿದೇ ಅದರಲ್ಲೂ ಕಾಫಿ ಟೀ ಗಳಲ್ಲೂ ಸಹ ಸಕ್ಕರೆಯ ಬಳಕೆ ಹೆಚ್ಚಾಗಿದೆ. ಆದರೆ ಸಕ್ಕರೆಯ ಮೂಲವಾಗಿ ನಮ್ಮ ಆರೋಗ್ಯಕ್ಕೆ ಸಿಗುವ ಲಾಭ ನಮಗೆ ಏನೂ ಇಲ್ಲ. ಸಕ್ಕರೆಯನ್ನು ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ, ಸಕ್ಕರೆಯನ್ನ ಬಿಳಿಯ ದೆವ್ವ ಅಂತ ಹೇಳ್ತಾರೆ. ಹಾಗಾಗಿ ನಮ್ಮ ಆರೋಗ್ಯದ ದೃಷ್ಟಿಯಿಂದ ಸಕ್ಕರೆಗಿಂತಲೂ ಬೆಲ್ಲ ಉತ್ತಮ ಹಾಗೂ ಒಳ್ಳೆಯದು ಎನ್ನಬಹುದು. ದಿನ ನಿತ್ಯಕ್ಕಿಂತಲೂ ಯಾವುದೋ ಹಬ್ಬ ಹರಿದಿನಗಳಲ್ಲಿ ಬೆಲ್ಲವನ್ನು ಬಳಕೆ ಮಾಡ್ತೀವಿ ಆದರೆ ದಿನದಿಂದ ದಿನಕ್ಕೆ ಇದರ ಬಳಕೆ ಕಡಿಮೆ ಆಗುತ್ತಲೇ ಬರುತ್ತಿದೆ. ಏನಿದು ಬರೀ ಬೆಲ್ಲ ಅಂತ ಇದನ್ನ ಅಲ್ಲಗಳೆಯುವಂತಿಲ್ಲ. ಬೆಲ್ಲದಿಂದಲೂ ಕೂಡಾ ನಮ್ಮ ದೇಹಕ್ಕೆ ಹಲವಾರು ಅರೋಗ್ಯಕಾರಿ ಅಂಶಗಳು ಇವೆ. ಇವತ್ತಿನ ಈ ಲೇಖನದಲ್ಲಿ ಬೆಲ್ಲದ ಅರೋಗ್ಯಕಾರಿ ಲಾಭಗಳು ಏನು ಇದನ್ನ ಹೇಗೆ ತೆಗೆದುಕೊಳ್ಳುವುದು ಅನ್ನೋದನ್ನ ನೋಡೋಣ.
ಯಾರೇ ಆದರೂ ಮುಖ್ಯವಾಗಿ ಬೆಲ್ಲವನ್ನು ತಿನ್ನಬೇಕು ಅಂದರೆ ಹೆಚ್ಚಿಗೆ ಹಣವನ್ನೇನೂ ಖರ್ಚು ಮಾಡಬೇಕು ಅಂತ ಇಲ್ಲ. ಮಾರುಕಟ್ಟೆಯಲ್ಲಿ ಇತರೆ ವಸ್ತುಗಳ ದರಕ್ಕೆ ಹೋಲಿಸಿದರೆ ಬೆಲ್ಲ ಅತೀ ಕಡಿಮೆ ದರದಲ್ಲಿ ಸಿಗುತ್ತೆ. ಬೆಲ್ಲದಲ್ಲಿ ಎರಡು ವಿಧ ಇರತ್ತೆ. ಒಂದು ಹಳದಿ ಬಣ್ಣದ ಲ್ಲಿ ಬೆಳ್ಳಗೆ ಇರತ್ತೆ. ಸಾಧ್ಯ ಆದಷ್ಟು ಈ ರೀತಿಯ ಬೆಲ್ಲವನ್ನು ಬಳಕೆ ಮಾಡುವುದನ್ನ ನಿಲ್ಲಿಸಬೇಕು. ಅದರ ಬದಲಿಗೆ ಸ್ವಲ್ಪ ಕಪ್ಪಗೆ ಅಂದರೆ, ಚಾಕಲೇಟ್ ಬಣ್ಣದ ಬೆಲ್ಲವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ಕೆಲವರಿಗೆ ಈ ಬೆಲ್ಲ ಇಷ್ಟ ಆಗದೆ ಹೋಗತ್ತೆ. ಆದರೆ ಇದರಿಂದ ನಮಗೆ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಂಡರೆ ಬೆಲ್ಲ ಬೇಡ ಅನ್ನುವವರೂ ಕೂಡ ನಿಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳುತ್ತೀರ. ಯಾಕಂದರೆ ಬೆಲ್ಲದಲ್ಲಿ ಕ್ಯಾಲೋರಿ ಕಡಿಮೆ ಇರತ್ತೆ ಇದರಿಂದಾಗಿ ನಮ್ಮ ಶರೀರದಲ್ಲಿ ಅಧಿಕ ಕ್ಯಾಲೋರಿ ಸೇರಿಕೊಳ್ಳುತ್ತೇ ಅನ್ನುವ ಭಯ ಇರಲ್ಲ. ಅನಾರೋಗ್ಯದ ಸಮಸ್ಯೆಗಳಿಗೆ ಬೆಲ್ಲ ಅದ್ಭುತವಾಗಿ ಕೆಲಸ ಮಾಡುತ್ತದೇ ಎಂದು ಒಂದು ಪರಿಶಿಧನೆಯಲ್ಲಿ ಕೂಡ ತಿಳಿದುಬಂದಿದೆ.
ಪ್ರತೀ ದಿನ ರಾತ್ರಿ ಊಟ ಮಾಡಿದ ನಂತರ ಆಗಲಿ ಅಥವಾ ಬೆಳಿಗ್ಗೆ ಸಮಯದಲ್ಲಿ ಆಗಲಿ ಖಾಲಿ ಹಿಟ್ಟೆಯಲ್ಲಿ ಒಂದು ಚಿಕ್ಕ ತುಂಡು ಬೆಲ್ಲವನ್ನು ತಿಂದು ಒಂದು ಲೋಟ ಉಗರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು. ಇದರಿಂದ ಜೀರ್ಣ ಕ್ರಿಯೆಗೆ ತುಂಬಾ ಸೂಲಭ ಆಗತ್ತೆ. ಇದರಿಂದಾಗಿ ಜೀರ್ಣ ಕ್ರಿಯೆ ಸರಿಯಾಗಿ ಆಸೀಡಿಟಿ, ಮಲಬದ್ಧತೆ ಮುಂತಾದ ಸಮಸ್ಯೆಗಳೂ ಕೂಡ ದೂರ ಆಗತ್ತೆ. ಹೊಟ್ಟೆ ತಣ್ಣಗೆ ಇರಬೇಕು ಅಂದರೆ ಬೆಲ್ಲದ ಶರಬತ್ ಅನ್ನು ಕುಡಿಯಬೇಕು ಅನ್ನೋ ಮಾತನ್ನ ವೈದ್ಯರೂ ಸಹ ಹೇಳುತ್ತಾರೆ. ಬೆಲ್ಲ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಸಹ ದೂರ ಮಾಡುತ್ತದೆ. ಅಸ್ತಮಾ ಇರುವವರು ಬೆಲ್ಲ ಮತ್ತು ಎಳ್ಳನ್ನು ಬೆರೆಸಿ ತಿನ್ನುವುದರಿಂದ ಅಸ್ತಮಾ ಕ್ರಮೇಣವಾಗಿ ಕಡಿಮೆ ಆಗುತ್ತದೆ. ಮುಖ್ಯವಾಗಿ ಚಳಿಗಾಲದಲ್ಲಿ ಕೂಡಾ ಬೆಲ್ಲ ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.
ಇನ್ನೂ ಮುಖ್ಯವಾಗಿ ಗರ್ಭಿಣಿ ಸ್ತ್ರೀಯರಿಗೆ ಬೆಲ್ಲ ತಿನ್ನುವುದು ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಇರುವ ಅಧಿಕ ಪೋಷಕಾಂಶಗಳು ಪೀರಿಯಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಬರುವ ಹೊಟ್ಟೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಪೀರಿಯಡ್ಸ್ ನಂತರ ಅನೇಕ ಅನಾರೋಗ್ಯಗಳು ಉಂಟಾಗದಂತೆಯೇ ಬೆಲ್ಲ ಕಾಪಾಡುತ್ತದೆ. ಬೆಲ್ಲದಲ್ಲಿ ಇರುವಂತಹ ಎಂಡೋಫೆನ್ಸ್ ಇದು ನಮ್ಮ ಶರೀರದಲ್ಲಿ ಬರುವಂತಹ ನೋವುಗಳನ್ನು ಕಡಿಮೆ ಮಾಡುತ್ತದೆ. ಬೆಲ್ಲದಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ಸ್, ಜಿಂಕ್ಸ್, ಸೆಲೋನಿಯಂ ಅಂತಹ ಖನಿಜಗಳು ಇರುವುದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯ ಇನ್ಫೆಕ್ಷನ್ಸ್ ಆಗದೆ ಇರುವ ಹಾಗೇ ನೋಡಿಕೊಳ್ಳುತ್ತದೆ. ಮುಖ್ಯವಾಗಿ ಬೆಲ್ಲದಲ್ಲಿ ಪೊಟ್ಯಾಶಿಯಂ, ಸೋಡಿಯಂ ಇರುವುದರಿಂದ ಶರೀರದಲ್ಲಿ ಆಸಿಡ್ ಮಟ್ಟವನ್ನು ಕ್ರಮಬದ್ಧವಾಗಿ ಮಾಡುತ್ತದೆ. ಇದರಿಂದ ಶರೀರದಲ್ಲಿ ಬ್ಲಡ್ ಪ್ರೆಶರ್ ಕೂಡ ನಿಯಂತ್ರಣದಲ್ಲಿ ಇರುತ್ತದೆ. ಕೀಲು ನೋವಿನಿಂದ ಬಾಧೆ ಪಡುತ್ತಾ ಇದ್ದರೆ, ಬೆಲ್ಲ ಅದರಿಂದ ಮುಕ್ತಿ ನೀಡುತ್ತದೆ. ಬೆಲ್ಲವನ್ನು ಶುಂಠಿಯ ಜೊತೆಗೆ ಬೆರೆಸಿ ತಿನ್ನುವುದರಿಂದ ಇನ್ನೂ ಹೆಚ್ಚಿನ ಲಾಭಗಳು ದೊರೆಯುತ್ತವೆ.
ಪ್ರತೀ ದಿನ ಹಾಲಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಕೀಲು ನೋವು ಸಮಸ್ಯೆಗಳೂ ಸಹ ಹೋಗುತ್ತವೆ. ಸಾಮಾನ್ಯವಾಗಿ ಬೆಲ್ಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮ್ಯಾಗ್ನಿಶಿಯಂ ಇರುವುದರಿಂದ ಇದು ಕರುಳಿಗೆ ಒಳ್ಳೆಯ ಬಲವನ್ನು ಕೊಡುತ್ತದೆ. 10 ಗ್ರಾಮ್ ಬೆಲ್ಲದಲ್ಲಿ 11 ಮಿಲಿ ಗ್ರಾಮ್ ಅಷ್ಟು ಮ್ಯಾಗ್ನಿಶಿಯಂ ಇರುತ್ತದೆ. ನಮ್ಮ ಶರೀರಕ್ಕೆ ಪ್ರತಿ ದಿನ 4 ಗ್ರಾಂ ಅಷ್ಟು ಮ್ಯಾಗ್ನಿಶಿಯಂ ಬೇಕಾಗಿರತ್ತೆ. ಹಾಗಾಗಿ ಪ್ರತೀ ದಿನವೂ ಒಂದು ಚಿಕ್ಕ ತುಂಡು ಬೆಲ್ಲವನ್ನು ತಿನ್ನುವುದು ಒಳ್ಳೆಯದು. ಇನ್ನು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಇರುವವರು ಕೂಡ ಬೆಲ್ಲವನ್ನು ತಿನ್ನುವುದು ಒಳ್ಳೆಯದು. ಯಾಕಂದ್ರೆ, ಇದರಲ್ಲಿ ಇರುವ ಪೊಟ್ಯಾಶಿಯಂ ಅಂಶ ನಮ್ಮ ಶರೀರದಲ್ಲಿರುವ ಎಲೆಕ್ಟ್ರೋ ಲೈಟ್ಸ್ ಅನ್ನು ನಿಯಂತ್ರಣ ಮಾಡುತ್ತದೆ. ಇದರಿಂದ ಖಂಡಗಳನ್ನು ಗಟ್ಟಿಗೊಳಿಸಿ ಮೆಟಬಾಲಿಸಮ್ ಅನ್ನು ಹೆಚ್ಚಿಸುತ್ತದೆ. ಇದರಿಂದ ತೂಕವನ್ನು ಸಹ ನಿಯಂತ್ರಣ ಮಾಡಿಕೊಳ್ಳಬಹುದು. ಕೆಜಿ ಲೆಕ್ಕದಲ್ಲಿ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಡಯೆಟ್ ನಲ್ಲಿ ಬೆಲ್ಲ ಬಳಸುವುದು ಉತ್ತಮ. ಮುಖ್ಯವಾಗಿ ಬೆಲ್ಲದಲ್ಲಿ ಇರುವ ಕೆಲವು ಅದ್ಭುತ ಲಕ್ಷಣ ಏನು ಅಂದರೆ, ಪ್ರತೀ ದಿನ ಬೆಲ್ಲವನ್ನು ಸೇವಿಸುವುದರಿಂದ ರಕ್ತವನ್ನು ಶುದ್ಧಿ ಮಾಡುತ್ತದೆ. ಶರೀರದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೆ ರಕ್ತ ಹೀನತೆಯನ್ನು ಸಹ ನಿವಾರಣೆ ಮಾಡುತ್ತದೆ. ರಕ್ತ ಶುದ್ಧವಾಗಿರುವಾಗ ಯಾವುದೇ ರೀತಿಯ ವ್ಯಾಧಿಗಳೂ ಸಹ ಬರುವುದಿಲ್ಲ. ಬೆಲ್ಲ ನಮ್ಮ ಶರೀರದಲ್ಲಿರುವ ಲಿವರ್ ಗೂ ಕೂಡಾ ಎಷ್ಟೋ ಸಹಾಯಕಾರಿ ಆಗಿದೆ.
ಪ್ರತೀ ದಿನ ಬೆಲ್ಲವನ್ನು ಸೇವಿಸುವುದರಿಂದ ಲಿವರ್ ನಲ್ಲಿ ಇಯುವ ಹಾನಿಕಾರಕ, ವ್ಯರ್ಥ ಪದಾರ್ಥಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಕೆಮ್ಮು, ನೆಗಡಿಯಿಂದ ಬಾಧೆ ಪಡುವವರು ಕೂಡ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಅಥವಾ ಟೀ ಕಾಫಿಯಲ್ಲಿ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ತಕ್ಷಣಕ್ಕೆ ಕಡಿಮೆ ಆಗುತ್ತದೆ. ಬೇಸಿಗೆ ಕಾಲದಲ್ಲಿ ಬೆಲ್ಲವನ್ನು ಸೇವಿಸುವುದು ತುಂಬಾ ಉತ್ತಮ. ಬೆಲ್ಲವು ಶರೀರದಲ್ಲಿರುವ ಉಷ್ಣವನ್ನು ನಿಯಂತ್ರಣ ಮಾಡುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಬೆಲ್ಲದ ಶರಬತ್ ಅನ್ನು ತಯಾರಿಸಿ ಕುಡಿಯುವುದು ಒಳ್ಳೆಯದು. ಬೆಲ್ಲದಲ್ಲಿರುವ ಮ್ಯಾಗ್ನಿಶಿಯಂ ಅಂಶವು ದೇಹದಲ್ಲಿ ಕ್ಯಾನ್ಸರ್ ಬರದಂತೆ ಆ ಅಂಶವನ್ನು ತಡೆಯುತ್ತದೆ. ಇದರಿಂದಾಗಿ ಕ್ಯಾನ್ಸರ್ ಬರದಂತೆಯೇ ತಡೆಯುತ್ತದೆ. ಆದರೆ, ಡಯಾಬಿಟಿಸ್ ಇರುವವರು ನಿಯಮಿತ ಪ್ರಮಾಣದಲ್ಲಿ ಬೆಲ್ಲವನ್ನು ಸೇವಿಸಿದರೆ ಒಳ್ಳೆಯದು. ಹೀಗೆಲ್ಲ ಮಾಡುವುದರಿಂದ ಬೆಲ್ಲವನ್ನು ಸೇವಿಸುವ ಮೂಲಕ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡಿ, ದಿನನಿತ್ಯದ ಅಡುಗೆಯಲ್ಲಿ ಆಹಾರದಲ್ಲಿ ಬೆಲ್ಲವನ್ನೇ ಬಳಸಿ.