Ultimate magazine theme for WordPress.

ಅಲೋವೆರಾದಲ್ಲಿ ಇರುವಂತ ಆರೋಗ್ಯಕಾರಿ ಉಪಯೋಗಗಳಿವು

0 2

ಮನೆ ಮದ್ದು ಹಾಗೂ ಆಯುರ್ವೇದ ಔಷಧಗಳಲ್ಲಿ ಗೊಂದಲ ಬೇಡ ಕೆಲವರಿಗೆ ಇದರ ಬಗ್ಗೆ ಸಾಕಷ್ಟು ಗೊಂದಲ ಇರುತ್ತದೆ. ಮನೆ ಮದ್ದು ಎಂದರೆ ನಮ್ಮ ಮನೆಯ ಅಡುಗೆ ಮನೆಯಲ್ಲಿ ಬಳಸುವಂತಹ ಜೀರಿಗೆ, ಮೆಂತೆ, ಸಾಸಿವೆ , ಕೊತ್ತಂಬರಿ ಬೀಜ, ಅಜವಾನ, ಅರಿಶಿನ ಈ ತರದ ಪದಾರ್ಥಗಳನ್ನು ಮಾತ್ರ ಮನೆಮದ್ದು ಅಂತ ಹೇಳಬಹುದು. ಮನೆಯ ಹೊರಗಡೆ ಇರುವಂತಹ ಬೇವಿನ ಗಿಡ, ಮಾವಿನ ಗಿಡ, ಅಮೃತ ಬಳ್ಳಿ ಇವೆಲ್ಲವೂ ಮನೆ ಮದ್ದಲ್ಲಿ ಬರುವಂತದ್ದಲ್ಲ. ಇವೆಲ್ಲ ಆಯುರ್ವೇದಿಕ್ ಔಷಧಿಗಳು. ಹಾಗಾಗಿ ಇವತ್ತು ಕೆಲವು ಆಯುರ್ವೇದಿಕ್ ಔಷಧಿ ಸಸ್ಯಗಳ ಕುರಿತಾಗಿ ತಿಳಿದುಕೊಳ್ಳೋಣ.

ಅಲೋವೆರ ಇದು ಬಹಳಷ್ಟು ಕಾಯಿಲೆಗಳಿಗೆ ದಿವ್ಯ ಔಷಧ. ಇದರ ಉಪಯೋಗ ಏನು ಏನಕ್ಕೆ ಬಳಸುತ್ತಾರೆ ಹಾಗೂ ಯಾವ ಕಾಯಿಲೆಗೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅನ್ನೋದನ್ನ ನೋಡೋಣ.

ಮನೆಯಲ್ಲೇ ಬೆಳೆದ ಅಲೋವೆರವನ್ನು ಕಟ್ ಮಾಡಿಕೊಂಡು, ಕಟ್ ಮಾಡುದ ಭಾಗದಲ್ಲಿ ಬರುವಂತಹ ಹಳದಿ ಬಣ್ಣದ ಲೋಳೆಯನ್ನು ನೀಟ್ ಆಗಿ ಸ್ವಚ್ಛಗೊಳಿಸಬೇಕು. ಇದು ಒಂದು ರೀತಿಯ ಕೆಮಿಕಲ್ ಆಗಿದ್ದು ಬೇರೆ ಎಲೋವೆರದ ಜೊತೆ ಸೇರಬಾರದು ಹಾಗೂ ಇದನ್ನು ಸೇವಿಸಲೂ ಬಾರದು. ಇದನ್ನ ಪ್ರತೀ ದಿನ ಎಷ್ಟು ಬೇಕೋ ಅಷ್ಟೇ ಕಟ್ ಮಾಡಿ ತರುವುದು ಒಳ್ಳೆಯದು. ಎಲೋವೆರದ ಶೇಕಡಾ 99ರಷ್ಟು ನೀರಿನ ಅಂಶ ಹಾಗೂ ಶೇಕಡಾ 1 ರಷ್ಟು ಮಾತ್ರ ಕೆಮಿಕಲ್ ಅಂಶವನ್ನು ಇದು ಹೊಂದಿರುತ್ತದೆ.

ಅಲೋವೆರಾದಲ್ಲಿ ತಂದು ಸ್ವಚ್ಛವಾಗಿ ತೊಳೆದುಕೊಂಡು, ಅದರ ಮುಳ್ಳು ಹಾಗೂ ಸಿಪ್ಪೆಯನ್ನು ತೆಗೆದು ಒಮ್ಮೆ ತೊಳೆದುಕೊಳ್ಳಬೇಕು. ಇದರಿಂದ ಸಿಪ್ಪೆ ತೆಗೆದ ನಂತರವೂ ಕೂಡಾ ಕೆಲವೊಮ್ಮೆ ಹಳದಿ ಬಣ್ಣದ ಲೋಳೆ ಅದರಲ್ಲಿ ಸೇರಿರತ್ತೇ. ಈ ಹಳದಿ ಬಣ್ಣದ ಲೋಳೆ ಇದು ಎಲ್ಲರಿಗೂ ಆಗಿ ಬರಲ್ಲ ಕೆಲವರಿಗೆ ಒದರಿಂದ ಅಲರ್ಜಿ ಆಗಬಹುದು.

ಅಲೋವೆರದ ಗುಣಲಕ್ಷಣಗಳು ಮತ್ತು ಪ್ರಯೋಜನಗಳು ಏನು ಅಂತ ನೋಡುವುದಾದರೆ, ಏಲೋವೆರ ಆಂಟಿ ಇಂಪ್ಲಾಮೇಟರಿ ಮತ್ತು ಆಂಟಿ ಸಪ್ಟಿಕ್ ಆಗಿ ಕೆಲಸ ಮಾಡುತ್ತದೆ. ಎಲ್ಲಿಯಾದರೂ ಗಾಯ ಆಗಿದ್ದರೆ ಅಥವಾ ಸೆಪ್ಟಿಕ್ ಆಗಿದ್ದರೆ ಅಲ್ಲಿ ಮುಂದೆ ಮತ್ತೆ ಸೆಪ್ಟಿಕ್ ಆಗದಂತೆ ತಡೆಯುತ್ತದೆ ಹಾಗೆ ಯಾವುದೇ ಒಂದು ಕ್ರಿಮಿ ಕೀಟಗಳ ವಿರುದ್ಧವೂ ಸಹ ಹೋರಾಡಲು ಸಹಾಯ ಮಾಡುತ್ತದೆ. ಅಲೋವೆರ ಕಹಿ ಅಂಶವನ್ನು ಹೊಂದಿರುವುದರಿಂದ ಇದು ಡಯಾಬಿಟಿಸ್ ಅನ್ನು ನಿಯಂತ್ರಣ ಮಾಡುತ್ತದೆ. ಸನ್ ಬರ್ನ್, ಸುಟ್ಟ ಗಾಯಗಳು ಹಾಗೂ ಚಿಕ್ಕ ಪುಟ್ಟ ಗಾಯಗಳು ಏನಾದರೂ ಆಗಿದ್ದಲ್ಲಿ ದಿನಕ್ಕೆ ಒಂದು ಬಾರಿಯಂತೆ ಎರಡು ಮೂರು ದಿನಗಳ ಕಾಲ ಅಲೋವೆರವನ್ನು ಹಚ್ಚುವುದರಿಂದ ಗಾಯಗಳು ಕಡಿಮೆ ಆಗುತ್ತವೆ. ಪ್ರತೀ ದಿನ ಅಲೋವೆರವನ್ನು ಮುಖಕ್ಕೆ ಹಚ್ಚುವುದರಿಂದ ಇದು ಉತ್ತಮ ಮೊಯಿಶ್ಚರೈಸೇಷರ್ ಆಗಿ ಕೂಡ ಕೆಲಸ ಮಾಡುತ್ತದೇ. ಆದರೆ ಅಲೋವೆರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4-5 ಗ್ರಾಮ್ ಆಗುವಷ್ಟು ಮಾತ್ರವೇ ತೆಗೆದುಕೊಳ್ಳಬೇಕು ಅದೂ ಕೊಡ ಹಕಡಿ ಬಣ್ಣದ ಲೋಳೆಯನ್ನು ಪೂರ್ತಿಯಾಗಿ ತೊಳೆದುಕೊಂಡು ತಿನ್ನಬೇಕು. ಇದರ ಜೊತೆಗೆ ನಮ್ಮ ಆಹಾರ, ವಿಹಾರ ಜೀವನ ಶೈಲಿ ಎಲ್ಲವೂ ಸಮರ್ಪಕವಾಗಿ ಇದ್ದಾಗ ಮಾತ್ರ ನಮಗೆ ಇದರ ಲಾಭ ತಿಳಿಯುತ್ತದೆ. ಅಂಗಡಿ, ಮಾಲ್ ಗಳಲ್ಲಿ ಸಿಗುವ ಅಲೋವೆರ ಜೆಲ್, ಜ್ಯೂಸ್ ಗಿಂತ ನೈಸರ್ಗಿಕಾವಾಗಿ ಸಿಗುವ ಅಲೋವೆರ ಉತ್ತಮ.

Leave A Reply

Your email address will not be published.