Ultimate magazine theme for WordPress.

ಬೆಲ್ಲ ತಿನ್ನೋದ್ರಿಂದ ಶರೀರಕ್ಕೆ ಏನ್ ಲಾಭವಿದೆ ಗೊತ್ತೇ ನಿಮಗೆ ಇದು ಗೊತ್ತಿರಲಿ

0 49

ಇತ್ತಿಚಿನ ದಿನಮಾನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯವಾಗಿದ್ದು ಹಾಗಾದರೆ ನಾವಿಂದು ಬೆಲ್ಲವನ್ನು ತಿನ್ನುವುದರಿಂದ ಹೇಗೆ ನಮ್ಮ ಆರೋಗ್ಯ ಸುರಕ್ಷಿತವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ನಮ್ಮ ದೇಹದ ಆರೋಗ್ಯ ಕಾಪಾಡಿಕೊಲ್ಲಬೇಕು ಅಂದರೆ ಸಣ್ಣ ಪುಟ್ಟ ಖಾಯಿಲೆಗಳನ್ನು ನಿಯಂತ್ರಿಸಲು ಅಡುಗೆಮನೆಯಲ್ಲಿ ಮದ್ದು ಇರುತ್ತದೆ ಎಂದು ನಮ್ಮ ಹಿರಿಯರು ಅನಾದಿಕಾಲದಿಂದಲೂ ಹೇಳುತ್ತಿದ್ದಾರೆ. ಹೌದು ನಿಯಮಿತವಾಗಿ ಬೆಲ್ಲ ತಿನ್ನುತ್ತಿದ್ದರೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆ ಹಲವು ಖಾಯಿಲೆಗಳಿಗೆ ಔಷಧ ಕೂಡ ಸಿಗುತ್ತದೆ ಬೆಲ್ಲ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಲ್ಲದೆ ದೇಹಕ್ಕೆ ಬಲವನ್ನು ನೀಡುತ್ತದೆ ಮತ್ತು ರಕ್ತ ಶುದ್ಧವಾಗಿ ಹರಿಯುವಂತೆ ಮಾಡುತ್ತದೆ. ಬೆಲ್ಲ ದೇಹವನ್ನು ನೈಸರ್ಗಿಕವಾಗಿ ಶುದ್ಧಿ ಮಾಡುವ ಪದಾರ್ಥ.

ಬೆಲ್ಲದ ಸೇವನೆಯಿಂದ ಯಕೃತ್ತಿನ ಹೊರೆಯನ್ನು ತಗ್ಗಿಸುತ್ತದೆ ಮತ್ತು ದೇಹದಿಂದ ಹಾನಿಕಾರಕ ಜೀವಾಣುವನ್ನು ಹೊರಹಾಕುವ ಮೂಲಕ ಅಂಗವನ್ನು ವಿಷರಹಿತವಾಗಿ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಬೆಲ್ಲದಲ್ಲಿ ಉತ್ಕರ್ಷಣ ಶಕ್ತಿಗಳು ಸೆಲೆನಿಯಂ ಸಮೃದ್ಧವಾಗಿರುತ್ತದೆ ಇದು ಮುಕ್ತ ಮೂಲಭೂತ ಹಾನಿ ಮತ್ತು ಸೋಂಕುಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ರಕ್ತ ಹಿನತೆಯನ್ನು ತಡೆಯುತ್ತದೆ. ದೇಹಕ್ಕೆ ತಕ್ಷಣ ಔಷಧಿಯನ್ನು ನೀಡಬಲ್ಲದು ಬೆಲ್ಲ ಎಂದು ಹೇಳಲಾಗುತ್ತದೆ.

ಬೆಲ್ಲ ರಕ್ತದ ಒತ್ತಡವನ್ನು ನಿಯಂತ್ರಣಮಾಡುತ್ತದೆ ರಕ್ತದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವುದರಿಂದ ದೇಹದಲ್ಲಿ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದರಿಂದ ದೇಹದ ರಕ್ತದ ಒತ್ತಡ ಮಟ್ಟ ಸಹಜವಾಗಿರುತ್ತದೆ ಇನ್ನು ಕೀಲು ನೋವುಗಳ ನಿವಾರಣೆಗೆ ಬೆಲ್ಲ ರಾಮಬಾಣ ಶುಂಠಿ ಯೊಂದಿಗೆ ಬೆಲ್ಲ ಸೇರಿಸಿ ತಿಂದರೆ ಅಥವಾ ಹಾಲಿನೊಂದಿಗೆ ಒಂದು ತುಂಡು ಬೆಲ್ಲವನ್ನು ಸೇರಿಸಿ ಕುಡಿದರೆ ಕೀಲು ನೋವು ವಾಸಿಯಾಗುತ್ತದೆ ಮೂಳೆಗಳು ಗಟ್ಟಿಯಾಗುತ್ತದೆ ಅಷ್ಟೇ ಅಲ್ಲ ಚರ್ಮದ ಕಾಂತಿಗು ಅತ್ಯುತ್ತಮವಾದ ಪದಾರ್ಥ ಈ ಬೆಲ್ಲ.

ಬೆಲ್ಲದಲ್ಲಿ ಹಲವು ವಿಟಮಿನ್ ಮತ್ತು ಖನಿಜ ಗಳು ಇರುತ್ತದೆ. ಮೊಡವೆಗಳು ನಿಯಂತ್ರಣಕ್ಕೆ ಬರುವುದಲ್ಲದೆ ಚರ್ಮವನ್ನು ದೋಷರಹಿತವಾಗಿಡುತ್ತದೆ. ಬೆಲ್ಲ ಚರ್ಮ ಸುಕ್ಕುಗಟ್ಟುವುದನ್ನು ಮತ್ತು ಕಪ್ಪು ಚುಕ್ಕಿಗಳಾಗುವುದನ್ನು ಸಹ ನಿಯಂತ್ರಿಸುತ್ತದೆ. ಇನ್ನು ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಮುಟ್ಟಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

ಹಲವು ಪೌಷ್ಟಿಕಾಂಶಗಳು ಬೆಲ್ಲದಲ್ಲಿ ಇರುವುದರಿಂದ ಹೆಣ್ಣುಮಕ್ಕಳಿಗೆ ಮುಟ್ಟಿನಸಮಯದ್ದಲ್ಲಿ ದಿವ್ಯ ಔಷಧ ಎಂದು ಹೇಳಲಾಗುತ್ತದೆ. ತೂಕವನ್ನು ನಿಯಂತ್ರಿಸಿಕೊಳ್ಳಲು ಬೆಲ್ಲವನ್ನು ಉಪಯೋಗಿಸಬೇಕು ಬೆಲ್ಲದಲ್ಲಿ ಹಲವು ಖನಿಜ ಲವಣ ಗಳು ಇರುವುದರಿಂದ ಇದು ತೂಕವನ್ನು ನಿಯಂತ್ರಿಸುತ್ತದೆ ಅದರಲ್ಲಿರುವ ಪೊಟ್ಯಾಶಿಯಂ ತೂಕ ನಿಯಂತ್ರಣಕ್ಕೆ ಸಹಾಯಕಾರಿ ಸ್ನಾಯುಗಳ ಬಲವರ್ಧನೆಗು ಸಹಕಾರಿ.

ಇದು ಜೀರ್ಣ ಕ್ರಿಯೆಗೆ ಒಳ್ಳೆಯದು ಮತ್ತು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಬೆಲ್ಲತಿನ್ನುವುದರಿಂದ ಸಂಧಿ ನೋವು ಮಂಡಿ ನೋವು ಕೈ ಕಾಲು ನೋವು ಕಡಿಮೆಯಾಗುತ್ತದೆ. ಹೀಗೆ ಬೆಲ್ಲ ಹತ್ತು ಹಲವಾರು ರೀತಿಗಳಲ್ಲಿ ಉಪಯೋಗವಾಗುತ್ತದೆ ಒಂದು ತುಂಡು ಬೆಲ್ಲವನ್ನು ಪ್ರತಿನಿತ್ಯ ಬಳಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲವನ್ನು ತಿನ್ನುವುದರಿಂದ ಬಾಯಿ ಸಿಹಿ ಜೊತೆಗೆ ದೇಹವು ಆರೋಗ್ಯಕರವಾಗಿರುತ್ತದೆ ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ

Leave A Reply

Your email address will not be published.