ಪ್ರಪಂಚದಲ್ಲಿ ನಾವು ತಿಂದು ಕುಡಿಯುವ ಆಹಾರ ಪದಾರ್ಥಗಳು ಪಾನೀಯಗಳು ತುಂಬಾ ಮುಖ್ಯವಾಗಿ ಇರುತ್ತವೆ. ಯಾರು ಹೆಚ್ಚಾಗಿ ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೋ ಅಂತವರು ಮುಖ್ಯವಾಗಿ ಖಾರ ಹಾಗೂ ಮಸಾಲೆ ಪಾದರ್ಥಗಳಿಂದ ದೂರ ಇರುತ್ತಾರೆ. ಖಾರವಾಗಿರುವ ಎಲ್ಲ ಪದಾರ್ಥಗಳು ಕೂಡ ನಮ್ಮ ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಅವುಗಳಲ್ಲಿ ಕೆಲವೊಂದು ನಮ್ಮ ಆರೋಗ್ಯಕ್ಕೆ ಒಳ್ಳೆಯದನ್ನು ಕೂಡ ಮಾಡುತ್ತವೆ. ಅಂತಹ ಕಾರ್ಯ ಪದಾರ್ಥಗಳಲ್ಲಿ ಒಂದು ಹಸಿಮೆಣಸಿನಕಾಯಿ ಕೂಡ ಒಂದು. ಈ ಲೇಖನದ ಮೂಲಕ ನಾವು ಹಸಿಮೆಣಸಿನಕಾಯಿಯನ್ನು ನಮ್ಮ ದೇಹಕ್ಕೆ ಆಗುವಂತಹ ಲಾಭಗಳು ಕುರಿತು ತಿಳಿದುಕೊಳ್ಳೋಣ.

ಕೆಲವರು ಅಂದುಕೊಳ್ಳಬಹುದು ಖಾರವಾಗಿರುವ ಹಸಿಮೆಣಸಿನಕಾಯಿ ಅಥವಾ ಖಾರವಾದ ಪದಾರ್ಥಗಳು ನಮ್ಮ ಶರೀರಕ್ಕೆ ಅಷ್ಟೊಂದು ಒಳ್ಳೆಯದಲ್ಲ ಯಾವ ರೀತಿಯಲ್ಲಿ ಒಳ್ಳೆಯದು ಎಂದು ಕೇಳಬಹುದು. ನಮ್ಮ ಹಲವಾರು ಅನಾರೋಗ್ಯ ಸಮಸ್ಯೆಗಳು ದೂರವಾಗಬೇಕು ಎಂದರೆ ನಾವು ಯಾವ ಪ್ರಮಾಣದಲ್ಲಿ ಹೇಗೆ ಹಸಿಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ. ಹಸಿರು ಮೆಣಸಿನಕಾಯಿ ಬದಲಾಗಿ ಕೆಂಪು ಮೆಣಸಿನಕಾಯಿಯನ್ನು ತೆಗೆದುಕೊಳ್ಳಬಾರದು ಇದು ಅಷ್ಟಾಗಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಮಸಾಲೆ ಪದಾರ್ಥಗಳು ಕೂಡ ನಮ್ಮ ಶರೀರಕ್ಕೆ ಹಾಗೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಪ್ರತೀ ದಿನ ನಾವು ಒಂದು ಹಸಿಮೆಣಸಿನಾಯಿಯನ್ನು ತಿನ್ನುವುದರಿಂದ ನಮ್ಮ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಚಿಕ್ಕ ಮಕ್ಕಳಲ್ಲಿ ಕಣ್ಣಿನ ದೋಷ ಇದ್ದರೆ ದಿನಕ್ಕೆ ಒಂದು ಹಸಿಮೆಣಸಿನಾಯಿಯನ್ನು ತಿನ್ನುವುದರಿಂದ ಕಣ್ಣಿನ ದೋಷ ನಿವಾರಣೆ ಆಗುತ್ತದೆ. ವಿಟಮಿನ್ ಏ ಇದರಲ್ಲಿ ಹೆಚ್ಚಾಗಿ ಇರುವುದರಿಂದ ಮೂರರಿಂದ ನಾಲ್ಕು ತಿಂಗಳುಗಳ ಕಾಲ ತೆಗೆದುಕೊಳ್ಳುವುದರಿಂದ ಮಕ್ಕಳು ಕನ್ನಡಕ ಹಾಕಿಕೊಳ್ಳುತ್ತಾ ಇದ್ದಾರೆ ಅದನ್ನು ತಪ್ಪಿಸಬಹುದು. ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ನೀಡುತ್ತದೆ. ಲೋ ಬೀಪಿ ಇರುವವರಿಗೆ ಹಸಿಮೆಣಸಿನಕಾಯಿ ಉತ್ತಮ ಔಷಧದ ರೀತಿ ಕೆಲಸ ಮಾಡುತ್ತದೇ. ಇವರು ಪ್ರತೀ ದಿನ ಒಂದು ಹಸಿಮೆಣಸಿನಾಯಿಯನ್ನು ತಿನ್ನುವುದರಿಂದ ರಕ್ತದ ಕಣಗಳನ್ನು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಇರುವ ಬಿ 6 , ಕಾಪರ್ , ಪೊಟ್ಯಾಶಿಯಂ ಫೈಬರ್ , ಫೋಲಿಕ್ ಹಾಗೂ ಮುಖ್ಯವಾಗಿ ಐರನ್ ಅಂಶಗಳು ಹೆಚ್ಚಾಗಿ ಇರುವುದರಿಂದ ಇವು ನಮ್ಮ ಶರೀರದಲ್ಲಿ ರಕ್ತವನ್ನು ಹೆಚ್ಚು ಮಾಡಿ ರಕ್ತ ಹೀನತೆಯನ್ನು ಕಡಿಮೆ ಮಾಡುತ್ತವೆ. ರಕ್ತಸಂಚಾರ ಸರಿಯಾಗಿ ಆಗಿ ಲೋ ಬಿಪಿ ಸಮಸ್ಯೆ ಕಡಿಮೆ ಆಗುವುದು.

ಪ್ರತೀ ದಿನ ಒಂದು ಹಸಿಮೆಣಸಿನಕಾಯಿ ತಿನ್ನುವುದರಿಂದ ಕ್ಯಾನ್ಸರ್ ಅಂತಹ ಮಾರಕ ರೋಗಗಳಿಂದ ದೂರ ಇರಬಹುದು. ಹಸಿಮೆಣಸಿನಕಾಯಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿರುತ್ತವೆ . ಇವು ನಮ್ಮ ಶರೀರದಲ್ಲಿರುವ ಪ್ರೀ ರಾಡಿಕಲ್ಸ್ ಗಳನ್ನು ಬಹುಬೇಗ ಹೊರಹಾಕಲು ಸಹಾಯಕಾರಿಯಾಗುತ್ತದೆ. ಹಸಿಮೆಣಸಿನಕಾಯಿ ನಮ್ಮ ಹೃದಯಕ್ಕೆ ತುಂಬಾ ಒಳ್ಳೆಯದಾಗಿದ್ದು ಇದು ರಕ್ತವನ್ನು ಮಂದವಾಗಿಸುತ್ತದೆ. ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯಕಾರಿ ಆಗಿರುವುದರಿಂದ ಹೃದಯಕ್ಕೆ ಒಳ್ಳೆಯದು. ಒಂದು ಸಂಶೋಧನೆ ಪ್ರಕಾರ ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೆ ಐದು ಜನರು ಹಾರ್ಟ್ ಅಟ್ಟ್ಯಾಕ್ ಸಮಸ್ಯೆಯಿಂದ ಮರಣ ಹೊಂದುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಟ್ಯಾಕ್ ಎನ್ನುವುದು ಒಂದು ದೊಡ್ಡ ಸಮಸ್ಯೆಯಾಗಿದೆ. ಇತ್ತೀಚಿನದಿನಗಳಲ್ಲಿ ಸೈಲೆಂಟ್ ಅಟ್ಯಾಕ್ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿರುವುದರಿಂದ ಪ್ರತಿದಿನ ಒಂದು ಹಸಿಮೆಣಸಿನ ಕಾಯಿಯನ್ನು ತಿನ್ನುವುದು ಒಳ್ಳೆಯದು. ಹಸಿಮೆಣಸಿನಕಾಯಿಯನ್ನು ಬೀಜದ ಸಮೇತ ತಿನ್ನುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯಕಾರಿಯಾಗುತ್ತದೆ.

ಹಸಿಮೆಣಸಿನಕಾಯಿ ಅಲ್ಲಿ ಝೀರೋ ಕ್ಯಾಲೋರಿ ಇರುತ್ತದೆ ಹಾಗು ಡಯಾಬಿಟಿಸ್ ಇರುವವರೆಗೆ ಹಸಿಮೆಣಸಿನಕಾಯಿ ಒಂದು ಉತ್ತಮ ಔಷಧ. ಇದು ರಕ್ತದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಹಾಗಾಗಿ ಮಧುಮೇಹ ಇರುವವರು ಪ್ರತಿದಿನ ಅವರ ಆಹಾರದಲ್ಲಿ ಒಂದು ಹಸಿಮೆಣಸಿನಕಾಯಿಯನ್ನು ತೆಗೆದುಕೊಳ್ಳುವುದರಿಂದ ಅವರ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ. ಹಾಗೆಯೇ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಅಜೀರ್ಣತೆಯನ್ನು ಕೂಡ ದೂರ ಮಾಡುತ್ತದೆ.ಇದು ನಮ್ಮ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಹೊಟ್ಟೆ ಹಸಿವನ್ನು ಚೆನ್ನಾಗಿ ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಗಳಿಂದ ಉಂಟಾಗುವ ಇನ್ಫೆಕ್ಷನ್ ಗಳಿಂದ ನಮ್ಮನ್ನು ಕಾಪಾಡುತ್ತದೆ. ಬ್ಯಾಕ್ಟರಿಯ ಇನ್ಫೆಕ್ಷನ್ ಇಂದ ಕೆಮ್ಮು ನೆಗಡಿ ಅಂತಹ ಸಮಸ್ಯೆ ಬಹಳ ಬೇಗ ಬರುತ್ತದೆ. ಇಂತಹ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಪ್ರತಿನಿತ್ಯ ಒಂದು ಹಸಿಮೆಣಸಿನಕಾಯಿಯನ್ನು ಸೇವಿಸುವುದರಿಂದ ಅನಾರೋಗ್ಯ ಸಮಸ್ಯೆಗಳು ಬಹುಬೇಗ ನಿವಾರಣೆಯಾಗುತ್ತದೆ.

ಡೆಂಗ್ಯೂ ಚಿಕನಗುನ್ಯಾ ಅಂತಹ ಸಮಸ್ಯೆಗಳ ದೂರವಿರಬೇಕು ಅಂದುಕೊಂಡರೆ ಪ್ರತಿಯೊಂದು ಹಸಿಮೆಣಸಿನಕಾಯಿಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಆಂಟಿ ಬ್ಯಾಕ್ಟರಿಯಲ್ ಆಗಿರುತ್ತದೆ. ಇದು ನಮ್ಮ ಶರೀರಕ್ಕೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಾವು ದೂರವಿರಬಹುದು. ನಮ್ಮ ದೇಹದ ಉಷ್ಣವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.ಹಸಿಮೆಣಸಿನಕಾಯಿ ಸೇವಿಸುವುದರಿಂದ ಇದು ನಮ್ಮ ಶರೀರದಲ್ಲಿರುವ ಬ್ಯಾಕ್ಟೀರಿಯಗಳನ್ನು ಹೊರಹಾಕಲು ಸಹಾಯಕಾರಿ ಆಗಿರುವುದು. ಇದು ತಲೆನೋವಿನ ನಿವಾರಣೆಗೂ ಕೂಡ ಬಹಳ ಉತ್ತಮ. ಜೀರೋ ಕ್ಯಾಲೋರಿ ಇರುವ ಹಸಿಮೆಣಸಿನಕಾಯಿ ಯಲ್ಲಿ ಎಷ್ಟು ವಿಟಮಿನ್ ಗಳು ನಮಗೆ ದೊರೆಯುತ್ತವೆ . ಹಾಗಂತ ನಮ್ಮ ದೇಹಕ್ಕೆ ಇಷ್ಟೊಂದು ಪ್ರಯೋಜನ ಇದೆ ಎಂದು ಹಸಿಮೆಣಸಿನಕಾಯಿಯನ್ನು ಅತಿಯಾಗಿ ಸೇವಿಸುವುದು ಕೂಡ ಒಳ್ಳೆಯದಲ್ಲ ನಿಯಮಿತವಾಗಿ ಸೇವಿಸಬೇಕು. ಹಸಿಮೆಣಸಿನಕಾಯಿ ಅತಿಯಾದ ಸೇವನೆಯಿಂದ ಬೇಧಿ ಪೈಲ್ಸ್ ಅಂತ ಸಮಸ್ಯೆಗಳು ಕೂಡ ಬರುತ್ತದೆ. ಬಿಪಿ ಹೆಚ್ಚಾಗಲು ಕೂಡ ಕಾರಣವಾಗಿರುತ್ತದೆ ಹಾಗಾಗಿ ಕಡಿಮೆ ಪ್ರಮಾಣದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಇದು ಒಳ್ಳೆಯದು ಎನ್ನಬಹುದು.

Leave a Reply

Your email address will not be published. Required fields are marked *