ಬೆಳ್ಳುಳ್ಳಿ ಇದು ಒಂದು ಔಷಧಿಯುಕ್ತ ಆಹಾರ ಪದಾರ್ಥಗಳಲ್ಲಿ ಒಂದು. ಹಾಗೆಯೇ ಕೆಲವೊಂದು ಅಡುಗೆಗೆ ಇದನ್ನು ಬಳಸದಿದ್ದರೆ ರುಚಿಯೇ ಬರುವುದಿಲ್ಲ. ಕೆಲವರಿಗೆ ಬೆಳ್ಳುಳ್ಳಿಯನ್ನು ದಿನನಿತ್ಯದ ಆಹಾರದಲ್ಲಿ ಬಳಸದೇ ಇದ್ದರೆ ದಿನವೇ ಕಳೆಯುವುದಿಲ್ಲ. ಹಾಗೆಯೇ ಇದನ್ನು ದನಗಳಿಗೆ ಔಷಧಿಗೆ ಹೆಚ್ಚಾಗಿ ಬಳಸುತ್ತಾರೆ. ಹಿರಿಯರು ಮನೆಯಲ್ಲಿ ಏನಾದರೂ ವಿಶೇಷವಾದ ಕಾರ್ಯಕ್ರಮಗಳು ಇದ್ದರೆ ಇದನ್ನು ಬಳಸಬಾರದು ಎಂದು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಬೆಳ್ಳುಳ್ಳಿಯ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳು ಬಹಳ ಇವೆ. ಹಿಂದಿನ ಕಾಲದಲ್ಲಿ  ಹೆಚ್ಚಾಗಿ ಶೀತ ಕೆಮ್ಮಿಗೆ ಬೆಳ್ಳುಳ್ಳಿಯನ್ನು ಔಷಧವಾಗಿ ಬಳಸುತ್ತಿದ್ದರು ಹಾಗೂ ತ್ವಚೆಯಲ್ಲಿ ಹುಳುಕಡ್ಡಿಯಾಗಿದ್ದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಅದನ್ನು ಹೋಗಲಾಡಿಸುತ್ತದೆ. ದನಗಳಿಗೆ ಹೆಚ್ಚಾಗಿ ಔಷಧಿಗೆ ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಇದರಿಂದ ದನಗಳು ಗುಣಮುಖವಾಗುತ್ತವೆ. ಇದರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದೆ. ಹಾಗಾಗಿ  ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಬೆಳಿಗ್ಗೆ ಎದ್ದಾಕ್ಷಣ ಬೆಳ್ಳುಳ್ಳಿಯನ್ನು ಸೇವಿಸಿದರೆ ಬೊಜ್ಜು ಕರಗುತ್ತದೆ. ಕೆಲವರು ತಮ್ಮ ಬೊಜ್ಜನ್ನು ಕರಗಿಸಲು ಎಷ್ಟೋ ಪ್ರಯತ್ನ ಮಾಡುತ್ತಾರೆ. ಆದರೆ ಎದ್ದ ತಕ್ಷಣ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಹಾಗೆಯೇ ತಿಂದ ಆಹಾರ ಸರಿಯಾಗಿ ಪಚನ ಆದರೆ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ಬೆಳ್ಳುಳ್ಳಿಯ ಸೇವನೆ ಮಾಡುವುದರಿಂದ ಪಚನಕ್ರಿಯೆ ಸರಿಯಾಗಿ ಆಗುತ್ತದೆ. ಅಜೀರ್ಣದ ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ತಿಂದರೆ ಸಮಸ್ಯೆ ಪರಿಹಾರವಾಗುತ್ತದೆ.

ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಜ್ವರ ಉಸಿರಾಟದ ತೊಂದರೆ ದೂರವಾಗುತ್ತದೆ. ರಕ್ತ ಸಂಚಾರ ಸರಿಯಾಗಿ  ಆಗುತ್ತದೆ. ಹೃದಯ ಬಲಶಾಲಿಯಾಗುತ್ತದೆ. ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಉಂಟಾದಾಗ ನಿಶ್ಯಕ್ತಿಯಾಗುತ್ತದೆ. ಆಗ ಬೆಳ್ಳುಳ್ಳಿಯನ್ನು ಬಳಸುವುದು ಅತ್ಯುತ್ತಮ. ಬೆಳ್ಳುಳ್ಳಿಯನ್ನು  ಬೇಯಿಸಿ  ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದೇ ಆರೋಗ್ಯಕರ.ಬೆಳ್ಳುಳ್ಳಿ ಇದೇ ತರಹ ಅನೇಕ ಅನಾರೋಗ್ಯ ಸಮಸ್ಯೆಗೆ ಅತ್ಯುತ್ತಮ ಮನೆಮದ್ದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!