ಮೀನನ್ನು ಸಾಮಾನ್ಯವಾಗಿ ಎಲ್ಲರು ತಿನ್ನುವುದಿಲ್ಲ. ಆದರೆ ಕೆಲವರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಸಾರು, ಮೀನಿನ ಫ್ರೈಯನ್ನು ತುಂಬಾ ಇಷ್ಟ ಪಡುತ್ತಾರೆ. ಮಾಂಸವನ್ನು ತಿನ್ನುವ ಬದಲು ಮೀನವನ್ನು ತಿಂದರೆ ಒಳ್ಳೆಯದು. ಕೆಲವರು ಮೀನಿನ ತಲೆಯನ್ನು ತಿನ್ನಲು ಇಷ್ಟ ಪಡುತ್ತಾರೆ. ಹಾಗೆಯೇ ನಾವು ಇಲ್ಲಿ ಮೀನಿನ ಜೊತೆ ಮೀನಿನ ತಲೆಯನ್ನು ತಿಂದರೆ ಆರೋಗ್ಯಕ್ಕೆ ಆರೋಗ್ಯಕ್ಕೆ ಉಂಟಾಗುವ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನಮ್ಮ ಭೂಗ್ರಹದಲ್ಲಿ ಒಳ್ಳೆಯ ಆಹಾರವೆಂದರೆ ಮೀನು . ಮೀನಿನತಲೆ, ಮೀನಿನ ದೇಹ ಇವನ್ನೆಲ್ಲ ತಿಂದರೆ ವಿಟಮಿನ್ ಡಿ ವಿಟಮಿನ್ ಸಿ ಹಾಗೂ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. ಖನಿಜ ಫಾಸ್ಪರಸ್ ಇವು ಸಹ ಇರುತ್ತದೆ . ಮಹಿಳೆಯರಿಗೆ ಸಹ ಇದರಿಂದ ಒಳ್ಳೆಯಪೋಷಕಾಂಶಗಳು ಸಿಗುತ್ತದೆ. ಇದನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ಹಾಗೆಯೇ ಹೃದಯಕ್ಕೂ ಒಳ್ಳೆಯದು . ಇದನ್ನು ತಿನ್ನುವುದರಿಂದ ಹೃದಯದಲ್ಲಿ ಕೊಬ್ಬು ಸೇರುವುದಿಲ್ಲ ಹಾಗೆಯೇ ರಕ್ತನಾಳಗಳಲ್ಲೂ ಸೇರುವುದಿಲ್ಲ.
ಹಾರ್ಟ್ ಅಟಾಕ್ ಆದವರು ವಾರದಲ್ಲಿ ಎರಡುಸಲ ತಿಂದರೆ ಒಳ್ಳೆಯದು. ಹಾಗೆಯೇ ಕಣ್ಣಿನ ಸಮಸ್ಯೆಯು ಬರುವುದಿಲ್ಲ . ಅಲ್ಜೇನಿಯಸ್ ಸಮಸ್ಯೆ ವಯಸ್ಸಾದಂತೆ ಕಂಡುಬರುತ್ತದೆ .
ಮೀನನ್ನು ತಿನ್ನುವುದರಿಂದ ಅದು ಬರುವುದಿಲ್ಲ. ಮಂಡಿನೋವು ಇವೆಲ್ಲ ಇದ್ದರೆ ದಿನಾಲು ಮೀನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಮೀನನ್ನು ತಿನ್ನುವುದರಿಂದ ಯಾವುದೇ ರೀತಿಯ ಬೊಜ್ಜು ಬರುವುದಿಲ್ಲ. ಹೊಟ್ಟೆಯ ಸುತ್ತಲಿನ ಬೊಜ್ಜು ಸಹ ಬರುವುದಿಲ್ಲ. ಒಂದುವೇಳೆ ಬಂದಿದ್ದರೆ ವಾರದಲ್ಲಿ ಎರಡು ಸಲ ತಿನ್ನುವುದರಿಂದ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗುತ್ತದೆ.
ಮೀನಿನ ತಲೆಯನ್ನು ಹೆಚ್ಚಾಗಿ ತಿನ್ನುವುದರಿಂದ ಕ್ಯಾನ್ಸರ್ ರೋಗ ಬರುವುದಿಲ್ಲ. ಲೈಂಗಿಕಕ್ರಿಯೆಯಿಂದ ಬಳಲುವ ಪುರುಷರು ಇದನ್ನು ಬಳಸಿದರೆ ಒಳ್ಳೆಯದು. ಚಿಕ್ಕಮಕ್ಕಳಿಗೆ ಇದನ್ನು ಕೊಟ್ಟರೆ ನೆನಪಿನಶಕ್ತಿ ಹೆಚ್ಚಾಗುತ್ತದೆ. ಅವರಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಮೀನು ತಿಂದರೆ ಒಳ್ಳೆಯದು ಎಂದು ಎಲ್ಲಾ ಮೀನನ್ನು ತಿನ್ನಬಾರದು. ಒಳ್ಳೆಯ ನೀರಿನಲ್ಲಿ ಬೆಳೆದ ಮೀನಿಗಿಂತ ಉಪ್ಪು ನೀರಿನಲ್ಲಿ ಬೆಳೆದ ಮೀನು ಒಳ್ಳೆಯದು ಮತ್ತು ಆರೋಗ್ಯಕ್ಕೂ ಒಳ್ಳೆಯದು. ಹಾಗೆಯೇ ಮೀನು ತಿನ್ನುವಾಗ ದೇಹ ಮಾತ್ರವಲ್ಲದೆ ಮೀನಿನ ತಲೆಯನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ ಅದು ದೇಹಕ್ಕೆ ತುಂಬಾ ಒಳ್ಳೆಯದು.