ಕರಾವಳಿ ಪ್ರದೇಶದ ಮೊದಲ ಆಹಾರ ಎಂದರೆ ಅದು ಮೀನು. ಮೀನು ತಿನ್ನುವವರು ತುಂಬಾ ಬುದ್ಧಿವಂತರಾಗಿರುತ್ತಾರೆ ಎಂದು ಹೇಳುತ್ತಾರೆ. ಬಹುತೇಕ ಮಾಂಸಾಹಾರಿ ಜನರು ಇವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಮೀನುಗಳಲ್ಲಿ ಮತ್ತು ಅವುಗಳ ಖಾದ್ಯಗಳಲ್ಲಿ ಹಲವು ವೆರೈಟಿಗಳು ಇವೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರಿಗೆ ಬಂಗುಡೆ ಮೀನುಗಳು ತುಂಬಾ ಲಾಭಕಾರಿ. ಮೀನು ತುಂಬಾ ಆರೋಗ್ಯಕರ ಆಹಾರ ಮತ್ತು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು.
ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಇಷ್ಟೊಂದು ಪೋಷಕಾಂಶ ಇರುವ ಮೀನನ್ನು ನಮ್ಮ ದೇಶದಲ್ಲಿ ಅತೀ ಕಡಿಮೆ ನೀನು ತಿನ್ನುವವರು ಸಹ ಇದ್ದಾರೆ. ಯಾವ ಯಾವ ರಾಜ್ಯಗಳಲ್ಲಿ ಮೀನು ತಿನ್ನುವವರ ಪ್ರಮಾಣ ಎಷ್ಟೆಷ್ಟು ಇದೆ ಎನ್ನುವುದನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.
ಅದಕ್ಕೂ ಮೊದಲು ಮೀನು ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವಂತಹ ಕೆಲವು ಆರೋಗ್ಯಕರ ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ. ನಿಯಮಿತದ ಮೀನು ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆರೋಗ್ಯಕ್ಕೆ ಬಹಳ ಉಪಕಾರಿ. ಹೃದಯದ ಆರೋಗ್ಯಕ್ಕೆ ನೆರವಾಗುವಂತಹ ಒಮೆಗಾ-3 ಕೊಬ್ಬಿನಾಮ್ಲವು ಮೀನಿನಲ್ಲಿದೆ.
ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಹೃದಯವನ್ನು ರಕ್ಷಿಸುವುದು. ಮೆದುಳಿನ ಕ್ರಿಯೆಗಳು ಸರಾಗವಾಗಿ ಸಾಗಲು ಮೀನು ಒಳ್ಳೆಯ ಆಹಾರವಾಗಿದೆ. ದಿನಾಲೂ ಮೀನು ಸೇವಿಸಿದರೆ ಅದರಿಂದ ಅಲ್ಝೆಮರ್ ಕಾಯಿಲೆಯ ಅಪಾಯ ತಗ್ಗಿಸಬಹುದು. ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಕುಗ್ಗುವಿಕೆ ಮತ್ತು ಕ್ಷೀಣಿಸುವಿಕೆ ಕಡಿಮೆ ಮಾಡಬಹುದು. ಇದರಿಂದ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುವುದು. ಮೀನು ಸೇವನೆಯಿಂದ ಅಸ್ತಮಾ ದೂರ ಮಾಡಬಹುದು. ಇದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಸ್ತಮಾ ರೋಗಕ್ಕೆ ಇದು ಉತ್ತಮ ಪರಿಹಾರ.
ಕೊಲೊನ್, ಸ್ತನ, ಅನ್ನನಾಳ, ಅಂಡಾಶಯ ಮತ್ತು ಪ್ರಾಸ್ಟೇಟ್ ಮೊದಲಾದ ಕ್ಯಾನ್ಸರ್ ಗಳನ್ನು ಮೀನು ಸೇವನೆಯಿಂದ ನಿಯಂತ್ರಿಸಬಹುದು. ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಳು 30-50% ರಷ್ಟು ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಮೀನು ಸೇವನೆಯಿಂದ ನಿಮ್ಮ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ. ಇದರಲ್ಲಿರುವ ಕಡಿಮೆ ಕೊಬ್ಬಿನ ಅಂಶಗಳು ಮತ್ತು ಉತ್ತಮ ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಉದುರುವುದನ್ನು ಮತ್ತು ಚರ್ಮ ಸುಕ್ಕುಗಟ್ಟುವುದನ್ನು ತಡೆದು ಹೊಳಪು ನೀಡುತ್ತದೆ. ಒಮೆಗಾ 3 ಆಮ್ಲಗಳು ರೆಟಿನಾದ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ನಿಮ್ಮ ದೃಷ್ಟಿಶಕ್ತಿ ವೃದ್ಧಿಗೆ ಮೀನಿನ ಸೇವನೆ ಸಹಕಾರಿ. ಅಲ್ಲದೆ, ಬಾಣಂತಿಯರು ಮೀನು ತಿನ್ನುವುದರಿಂದ ಎದೆಹಾಲು ಕುಡಿಯುವ ಶಿಶುಗಳು ಉತ್ತಮ ದೃಷ್ಟಿ ಹೊಂಡಲು ಉಪಕಾರಿ. ಒಮೆಗಾ -3 ಕೊಬ್ಬಿನಾಮ್ಲಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಚರ್ಮವನ್ನು ನಯವಾಗಿಸಿ, ಹೊಳೆಯುವಂತೆ ಮಾಡುತ್ತದೆ. ಅವು ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಿಸಬಹುದು, ಚರ್ಮದ ತೈಲ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
ಬ್ರೇಕ್ ಔಟ್ಗಳನ್ನು ತಡೆಯಬಹುದು ಮತ್ತು ಮೊಡವೆಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಮೀನು ಎಣ್ಣೆ ಸಹಾಯ ಮಾಡುತ್ತದೆ. ಅಲ್ಲದೆ, ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ದೇಶದಲ್ಲಿ ಅತೀ ಕಡಿಮೆ ಮೀನು ತಿನ್ನುವುದು ಈ ರಾಜ್ಯದ ಜನರಂತೆ..! ಹಾಗಿದ್ರೆ ಮೊದಲನೇ ಸ್ಥಾನದಲ್ಲಿ ಯಾರಿದ್ದಾರೆ? ಎಂದು ನೋಡುವುದಾದರೆ, ಕೇರಳದ ಮಂದಿ ವಾರ್ಷಿಕ 19.59 ಕೆಜಿ ಮೀನು ಸೇವಿಸುತ್ತಾರೆ. ಛತ್ತೀಸ್ಗಡ ರಾಜ್ಯವು ಈ ವಿಷಯದಲ್ಲಿ ಅವರನ್ನು ಹಿಮ್ಮೆಟ್ಟಿಸಿದ್ದು, ವಾರ್ಷಿಕ 19.7 ಕೆಜಿ ಮೀನು ತಿನ್ನುವ ಮೂಲಕ 4ನೇ ಸ್ಥಾನದಲ್ಲಿದೆ.
2019-20ರಲ್ಲಿ ಲಕ್ಷದ್ವೀಪದ ಜನರು105.6 ಕೆಜಿ ಮೀನು ಸೇವನೆ ಮಾಡಿದ್ದಾರೆ, ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜನರಿಗಿಂತ ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿದ್ದು, ಆ ಎರಡೂ ದ್ವೀಪಗಳ ಮಂದಿ ವರ್ಷಕ್ಕೆ 59 ಕೆಜಿ ಮೀನು ತಿನ್ನುತ್ತಾರೆ. ಲಕ್ಷದ್ವೀಪದ ಜನರು ದಿನಕ್ಕೆ 300 ಗ್ರಾಂ ಮೀನು ತಿನ್ನುತ್ತಾರೆ. ಅದು ಹರಿಯಾಣದ ಜನರು ಒಂದು ವರ್ಷಕ್ಕೆ ತಿನ್ನುವ ಮೀನಿನ ಪ್ರಮಾಣ! ಇತ್ತೀಚಿನ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಮೀನು ಸೇವನೆಯ ಪ್ರಮಾಣ ವಾರ್ಷಿಕ ಸರಾಸರಿ 6.46 ಕೆಜಿ.
ಹರಿಯಾಣದ ಜನರು ಸಮುದ್ರ ತೀರದಿಂದ ದೂರದ ಪ್ರದೇಶದಲ್ಲಿರುವುದರಿಂದ ಅವರು ಮೀನು ತಿನ್ನುವುದು ಕಡಿಮೆ ಎಂದು ಯೋಚಿಸಿದರೆ, ಅದೇ ರೀತಿ ಇರುವ ತ್ರಿಪುರಾದ ಮಂದಿ ಅದಕ್ಕೆ ಅಪವಾದ – 2019-20ರಲ್ಲಿ ಅವರು ವಾರ್ಷಿಕ 25.45 ಕೆಜಿ ಮೀನು ತಿಂದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಲ್ಪಟ್ಟ ಪ್ರಶ್ನೆಯೊಂದಕ್ಕೆ ಉತ್ತರ ರೂಪದಲ್ಲಿ ಈ ಮಾಹಿತಿಗಳನ್ನು ನೀಡಲಾಯಿತು.
ಮೀನು ತಿನ್ನುವುದರಲ್ಲಿ ಹಿಂದೆ ಬಿದ್ದಿರುವುದು ಕೇವಲ ಹರಿಯಾಣ ಮಾತ್ರವಲ್ಲ. ಅದರ ಸುತ್ತಮುತ್ತಲಿನ ಕೆಲವು ರಾಜ್ಯಗಳ ಕಥೆಯು ಕೂಡ ಇದೆ – ದೆಹಲಿಯ ನಾಗರಿಕರು ವರ್ಷಕ್ಕೆ ಸರಾಸರಿ 0.47 ಕೆಜಿ ಮೀನು ತಿನ್ನುತ್ತಾರೆ, ಪಕ್ಕದ ಉತ್ತರಾಖಂಡ ಮತ್ತು ರಾಜಸ್ಥಾನ ಮಂದಿ ಅನುಕ್ರಮವಾಗಿ ವಾರ್ಷಿಕ ಸರಾಸರಿ 0.7 ಕೆಜಿ ಮತ್ತು 0.86 ಕೆಜಿ ಮೀನು ಸೇವಿಸುತ್ತಾರೆ. ಇನ್ನು ಪಂಜಾಬ್ನಲ್ಲಿ ಅಮೃತ್ಸರಿ ಫಿಶ್ ಟಿಕ್ಕಾ ಅಲ್ಲಿನ ಮಾಂಸಹಾರಿಗಳಿಗೆ ಅಚ್ಚುಮೆಚ್ಚು. ಅಲ್ಲಿನ ಜನ ಮೀನು ತಿನ್ನುವುದರಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಇದರಿಂದಲೇ ತಿಳಿಯಬಹುದು. ಅವರು ವಾರ್ಷಿಕ ಸರಾಸರಿ 16.47 ಕೆಜಿ ಮೀನು ತಿನ್ನುತ್ತಾರೆ. ಅದೇ ರೀತಿ ಸಿಕ್ಕಿಂ ಜನರನ್ನು ಹೊರತುಪಡಿಸಿ ಈಶಾನ್ಯ ರಾಜ್ಯಗಳ ಬಹುಪಾಲು ಮಂದಿ ಮೀನು ಪ್ರಿಯರು.
ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ವಾರ್ಷಿಕ ಸರಾಸರಿ ಮೀನು ಸೇವನೆಯಲ್ಲಿ ಎರಡಂಕಿ ಹೋದಿರುವ ರಾಜ್ಯಗಳೆಂದರೆ ಪಾಂಡಿಚೇರಿ (18.8 ಕೆಜಿ), ಒಡಿಸ್ಸಾ (16.24 ಕೆಜಿ), ಅಸ್ಸಾಂ (11.89 ಕೆಜಿ), ಕರ್ನಾಟಕ (11.66 ಕೆಜಿ), ಉತ್ತರ ಪ್ರದೇಶ (10.87 ಕೆಜಿ) ಮತ್ತು ಮಣಿಪುರ (10.5 ಕೆಜಿ). 2019-20 ರಲ್ಲಿ ದೇಶದಲ್ಲಿ 141.64 ಲಕ್ಷ ಟನ್ ಮೀನು ಹಿಡಿಯಲಾಗಿದೆ. ಆಂಧ್ರಪ್ರದೇಶದಲ್ಲಿ 41.74 ಲಕ್ಷ ಟನ್ ಮೀನು ಹಿಡಿಯಲಾಗಿದ್ದು, ಅದು ದೇಶದ ಮೀನು ಉತ್ಪಾದನೆಯಲ್ಲಿ ಶೇಕಡಾ 30ರಷ್ಟು ಕೊಡುಗೆ ನೀಡುತ್ತದೆ.
ಅದರ ನಂತರದ ಸಾಲಿನಲ್ಲಿ ಪಶ್ಚಿಮ ಬಂಗಾಳ (17.82 ಲಕ್ಷ ಟನ್) ಮತ್ತು ಗುಜರಾತ್ (8.59 ಲಕ್ಷ ಟನ್ ) ರಾಜ್ಯಗಳಿವೆ. ಗೋವಾ ಮತ್ತು ಪಶ್ಚಿಮ ಬಂಗಾಳದಂತಹ ಜನಪ್ರಿಯ ಮೀನು ಪ್ರಿಯ ರಾಜ್ಯಗಳ ಜನರ ಮೀನು ಸೇವನೆ ಕುರಿತ ಅಂಕಿಅಂಶಗಳು ಲಭ್ಯವಿಲ್ಲ. ಕೇರಳದ ಮಂದಿ ವಾರ್ಷಿಕ 19.59 ಕೆಜಿ ಮೀನು ಸೇವಿಸುತ್ತಾರೆ. ಛತ್ತೀಸ್ಗಡ ರಾಜ್ಯವು ಈ ವಿಷಯದಲ್ಲಿ ಅವರನ್ನು ಹಿಮ್ಮೆಟ್ಟಿಸಿದ್ದು, ವಾರ್ಷಿಕ 19.7 ಕೆಜಿ ಮೀನು ತಿನ್ನುವ ಮೂಲಕ 4ನೇ ಸ್ಥಾನದಲ್ಲಿದೆ.