ಇತ್ತೀಚೆಗೆ ಯಾರಿಗೆ ಆದರೂ ಸಿಹಿ ಪದಾರ್ಥ ನೀಡಿದರೆ ಸಾಕು ಬೇಡಪ್ಪ ನನಗೆ ಶುಗರ್ ಇದೆ ಎನ್ನುತ್ತಾರೆ ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಶುಗರ್ , ಬಿಪಿ ಅಂತಹ ಕಾಯಿಲೆಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿವೆ. ಈ ಶುಗರ್ ನಿಂದ ಒದ್ದಾಡುವವರು ಏನೇ ಆಹಾರವನ್ನು ತಿನ್ನಲು ಕೂಡ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಏನನ್ನು ಸೇವಿಸಬೇಕು? ತಿಂದರೆ ಏನಾಗುತ್ತದೋ? ಎಂಬ ಭಯದಲ್ಲೇ ತಿನ್ನುತ್ತಾರೆ. ಈ ಶುಗರ್ ಕಾಯಿಲೆ ಎಂಬುದು ಜನರನ್ನು ಅಷ್ಟು ಭಯಕ್ಕೆ ಒಳಪಡಿಸಿದೆ ಸ್ವಲ್ಪ ಸಿಹಿ ತಿಂದರು ಸಾಕು ಶುಗರ್ ಜಾಸ್ತಿ ಆಯಿತು , ಸುಸ್ತು , ಬೆವರು ಎಂದು ಹೇಳಿ ಡಾಕ್ಟರ್ ಬಳಿ ಹೊಗುತ್ತೇವೆ ಮತ್ತು ನಂತರ ಆ ವೈದ್ಯರು ಹೇಳಿದ ಆಹಾರ ಕ್ರಮವನ್ನೇ ಅನುಸರಿಸಬೇಕಾಗುತ್ತದೆ ಹಾಗೂ ಅವರು ಹೇಳಿದ ಮಾತ್ರೆಗಳನ್ನು ತಿನ್ನುತ್ತಲೇ ಜೀವನ ನಡೆಸಬೇಕು. ಆದರೆ ಮಧುಮೇಹ, ಇದು ಇಂದು ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದ್ದು ನಮ್ಮ ಜೀವನಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಂಡರೆ ಈ ಕಾಯಿಲೆಯಿಂದ ದೂರವಿರಬಹುದು. ಸಕ್ಕರೆ ಕಾಯಿಲೆ ಇದೆ ಅನ್ನೋ ಭಯ ಬೇಡ , ಬೇಯಿಸಿದ ಮೊಟ್ಟೆಯಲ್ಲಿ ಸಕ್ಕರೆ ಕಾಯಿಲೆಗೆ ಸೂಕ್ತ ಪರಿಹಾರ ಇದ್ದು , ಅದು ಹೇಗೆ ಎನ್ನುವುದನ್ನು ನಾವು ಲೇಖನದ ಮೂಲಕ ತಿಳಿದುಕೊಳ್ಳೋಣ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೇವಲ ಒಂದು ಬೇಯಿಸಿದ ಮೊಟ್ಟೆ ಸಾಕು ಎನ್ನುವುದು ಎಷ್ಟೋ ಜನರಿಗೆ ತಿಳಿದಿಲ್ಲ. ವಿಶ್ವದಾದ್ಯಂತ ಬಹಳಷ್ಟು ಜನರು ಈ ಮದುಮೇಹ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾರೆ. ಭಾರತವನ್ನಂತೂ ಮಧುಮೇಹದ ರಾಜಧಾನಿ ಎಂದೇ ಪಡೆದಿದೆ ಎಂದರೆ ತಪ್ಪಾಗಲಾರದು. ಇನ್ನು ಮಧುಮೇಹ ಹೇಗೆ ಬರುತ್ತದೆ ಎಂದು ನೋಡುವುದಾದರೆ ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿ ನಾವು ಮಧುಮೇಹಕ್ಕೆ ತುತ್ತಾಗುತ್ತೇವೆ. ಉತ್ಪತ್ತಿಯಾದ ಇನ್ಸುಲಿನ್ ನ ಅಸಮರ್ಪಕ ಬಳಕೆಯು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ವೇಗವಾಗಿ ತೂಕ ಇಳಿಯುವುದು, ಸುಸ್ತು, ಮಬ್ಬಾದ ದೃಷ್ಟಿ, ಆಗಾಗ ಮೂತ್ರ ವಿಸರ್ಜನೆ ಮಾಡಬೇಕು ಎನಿಸುವುದು , ನಿರಂತರ ಬಾಯಾರಿಕೆ ಮತ್ತು ಗುಪ್ತಾಂಗಗಳ ಸುತ್ತ ತುರಿಕೆಯ ಅನುಭವ ಇವು ಮಧುಮೇಹದ ಸಾಮಾನ್ಯ ಲಕ್ಷಣಗಳು. ಮಧುಮೇಹಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೆ ನಿರ್ಲಕ್ಷಿಸಿದರೆ ಅದು ಮೂತ್ರ ಪಿಂಡ ವೈಫಲ್ಯ, ಹೃದ್ರೋಗ, ಅಂದತ್ವ, ನರಗಳಿಗೆ ಹಾನಿಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆದರೆ ಈ ಶುಗರ್ ಕಾಯಿಲೆಯನ್ನು ದೂರ ಮಾಡಿಕೊಳ್ಳಲು ಒಂದು ಉತ್ತಮ ಆಹಾರ ಪದ್ಧತಿ ಇದೆ. ಅದನ್ನು ತೆಗೆದುಕೊಂಡರೆ ಸಾಕು ಶುಗರ್ ಸಮಸ್ಯೆಯನ್ನು ದೂರ ಮಾಡಿಕೊಳ್ಳುಬಹುದು. ಅದು ಏನು? ಎಂದು ನೋಡುವುದಾದರೆ , ಎಲ್ಲರೂ ಸೇವಿಸುವ ಆಹಾರ ಹಾಗೂ ದೇಹಕ್ಕೆ ಒಳ್ಳೆಯ ಪೌಷ್ಟಿಕ ಅಂಶಗಳನ್ನು ನೀಡುವ ಮೊಟ್ಟೆ ಇದನ್ನು ಬೇಯಿಸಿಕೊಂಡು ಸೇವಿಸುತ್ತಾ ಬಂದರೆ ಸಾಕು ಎಂತಹ ಶುಗರ್ ಸಮಸ್ಯೆಯನ್ನು ಕೂಡ ದೂರ ಮಾಡಿಕೊಳ್ಳಬಹುದು. ನಿತ್ಯ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸುತ್ತಾ ಬಂದರೆ ನಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಿಕೊಳ್ಳಬಹುದು.

ದಿನಕ್ಕೆ ಒಂದು ಬೇಯಿಸಿದ ಮೊಟ್ಟೆಯ ಸೇವನೆ ಮಾಡುವುದು ಇದು ಮಧುಮೇಹಕ್ಕೆ ಉತ್ತಮ ಚಿಕಿತ್ಸೆಯಾಗಿದೆ, ಆದರೆ ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸಬಾರದು. ಮೊಟ್ಟೆಯನ್ನ ಬೇಯಿಸಿ ಅದರ ಸಿಪ್ಪೆಯನ್ನ ತೆಗೆದು ಮುಳ್ಳು ಚಮಚದ ಸಹಾಯದಿಂದ ಮೊಟ್ಟೆಯ ಮೇಲೆ ಚುಚ್ಚಿ ಅದನ್ನು ಪಾತ್ರೆಯಲ್ಲಿರಿಸಿ, ನಂತರ ಮೊಟ್ಟೆಯ ಮೇಲೆ ಸ್ವಲ್ಪ ಪ್ರಮಾಣದ ವಿನೆಗರ್ ಅನ್ನು ಚುಮುಕಿಸಿ ರಾತ್ರಿ ಇಡೀ ಹಾಗೆಯೆ ಇಡಬೇಕು. ಬೆಳಿಗ್ಗೆ ಈ ಮೊಟ್ಟೆಯನ್ನು ಒಂದು ಚಮಚ ವಿನೆಗರ್ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ಹಲವಾರು ದಿನಗಳ ಕಾಲ ಹೀಗೆ ಮಾಡಿದರೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ ಇನ್ನು ಮುಂದೆ ನಿತ್ಯ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸುತ್ತಾ ಶುಗರ್ ಅಂತಹ ಸಮಸ್ಯೆಯಿಂದ ದೂರ ಆಗಿ ಜೊತೆಗೆ ಇದು ಹಲವಾರು ಆರೋಗ್ಯದ ಸಮಸ್ಯೆಗಳನ್ನು ಕೂಡ ನಿಯಂತ್ರಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!