ನಾವು ಕೇವಲ ಎರಡು ವಾರಗಳ ಕಾಲ ದಾಲಿಂಬೆಯನ್ನು ತಿನ್ನುವುದರಿಂದ ಇದರಿಂದ ನಮಗೆ ಉಂಟಾಗುವ ಪ್ರಯೋಜನಗಳು ಹಲವಾರು. ದಾಳಿಂಬೆಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ದಾಳಿಂಬೆ ಸೇವನೆ ಮಾಡುವುದು ನಮ್ಮ ದೇಹಕ್ಕೆ ತುಂಬಾ ಲಾಭದಾಯಕ. ಏಕೆಂದರೆ ದಾಳಿಂಬೆಯಲ್ಲೀ ವಿಟಮಿನ್ ಏ, ವಿಟಮಿನ್ ಸಿ ಅಂಶಗಳು ಹಾಗೂ ಪಾಲಿಕ್ ಆಸಿಡ್ ಗುಣಗಳು ಹೇರಳವಾಗಿ ಇರುತ್ತವೆ. ದಾಳಿಂಬೆ ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ಸೌಂದರ್ಯಕ್ಕೆ ಕೂಡಾ ತುಂಬಾ ಒಳ್ಳೆಯದು. ದಾಳಿಂಬೆ ಹಣ್ಣು ಯಾವುದಾದರೂ ಒಂದು ರೀತಿಯಲ್ಲಿ ನಮಗೆ ಉಪಯೋಗಕಾರಿ ಆಗಿದೆ. ಒಂದು ದಾಳಿಂಬೆ ನೂರು ರೋಗಗಳಿಗೆ ಔಷಧಿ ಎನ್ನುವ ಒಂದು ಮಾತಿದೆ. ಪ್ರತೀ ದಿನ ಒಂದು ದಾಳಿಂಬೆಯನ್ನು ತಿನ್ನುವುದರಿಂದ ಅಥವಾ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಈ ರೀತಿಯ ಲಾಭಗಳನ್ನು ನಾವು ಪಡೆಯಬಹುದು. ಸಾಮಾನ್ಯ ತೂಕಕ್ಕಿಂತ ಹೆಚ್ಚಿನ ತೂಕ ಇರುವವರು ದಾಳಿಂಬೆಯನ್ನು ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯಕಾರಿ ಆಗುತ್ತದೆ. ಹೆಚ್ಚು ಬೊಜ್ಜು ಇರುವವರೂ ಸಹ ದಾಳಿಂಬೆ ಸೇವನೆಯಿಂದ ಬೊಜ್ಜನ್ನು ಕರಗಿಸಬಹುದು. ಮಧುಮೇಹ ಇರುವವರು ಸಹ ದಾಳಿಂಬೆಯನ್ನು ಸೇವಿಸಬಹುದು. ಇದರಲ್ಲಿ ಪ್ಲೂಟೋನ್ ಅಂಶ ಇರುವ ಕಾರಣ ಸಿಹಿಯಾಗಿದ್ದರೂ ಕೂಡಾ ದೇಹದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುವುದಿಲ್ಲ.
ಹೃದಯ ಸಂಬಂಧಿತ ರೋಗಿಗಳು ದಾಲಿಂಬೆಯನ್ನು ತಿನ್ನಲೇಬೇಕು. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವುದು ಅಷ್ಟೇ ಅಲ್ಲದೆ ಹೃದಯಾಘಾತ ಕೂಡಾ ಆಗುವುದಿಲ್ಲ ಹಾಗೇ ದೇಹದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತವನ್ನು ಶುದ್ಧೀಕರಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂದರೆ ದಾಳಿಂಬೆಯನ್ನೂ ತಿನ್ನುವುದು ಒಳ್ಳೆಯದು. ದಾಳಿಂಬೆ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕುವುದರಿಂದ ಇದು ಕ್ಯಾನ್ಸರ್ ರೋಗಕ್ಕೆ ರಾಮಬಾಣ ಎನ್ನಬಹುದು. ಪ್ರತೀ ದಿನ ದಾಳಿಂಬೆ ಸೇವನೆಯಿಂದ ಮುಖದ ಕಾಂತಿ ಹೆಚ್ಚುತ್ತದೆ. ಗರ್ಭಿಣಿಯರಿಗೆ ಕೂಡಾ ದಾಳಿಂಬೆ ಲಾಭದಾಯಕ ಎನ್ನಬಹುದು. ಇದರಲ್ಲಿರುವ ವಿಟಮಿನ್ ಗಳು, ಮಿನರಲ್ ಗಳು ಹಾಗೂ ಪಾಲಿಕ್ ಆಸಿಡ್ ಗಳು ಮಗುವಿಗೆ ಉತ್ತಮ ಆಹಾರವಾಗುತ್ತದೆ. ಈ ಮೂಲಕ ಮಗುವಿನ ರಕ್ಷಣೆ ಕೂಡಾ ಮಾಡುತ್ತದೆ.