ಏಲಕ್ಕಿ ನಮ್ಮ ಭಾರತೀಯ ಅಡುಗೆ ಪದ್ಧತಿಯಲ್ಲಿನ ಒಂದು ಮುಖ್ಯವಾದ ಸಾಂಬಾರು ಪದಾರ್ಥಗಳಲ್ಲಿ ಎಲಕ್ಕಿಯೂ ಒಂದು. ಏಲಕ್ಕಿ ನಮ್ಮ ದೇಹಕ್ಕೆ ಉತ್ತಮವಾದದ್ದು. ಇದು ನಮ್ಮ ದೇಹಕ್ಕೆ ಹಲವಾರು ಲಾಭದಾಯಕ ಅಂಶಗಳನ್ನು ನೀಡುತ್ತದೆ. ನಾವು ಮಲಗುವ ಮೊದಲು ಪ್ರತೀ ದಿನ ಒಂದೆರೆಡು ಎಲಕ್ಕಿಯನ್ನು ತಿಂದು ಮಲಗಿದರೆ ಏನೆಲ್ಲ ಲಾಭಗಳು ಇವೆ ಅನ್ನುವುದನ್ನು ತಿಳಿದುಕೊಳ್ಳೋಣ.
ಏಲಕ್ಕಿಯನ್ನು ಸೇವಿಸುವುದರಿಂದ ಯಾವುದೇ ರೀತಿಯ ನೆಗಡಿ ಕೆಮ್ಮು ಇದ್ದರೂ ಸಹ ನಿವಾರಣೆ ಆಗುತ್ತದೆ. ನಾವು ಸೇವಿಸಿರುವ ಆಹಾರ ಉತ್ತಮವಾಗಿ ಜೀರ್ಣ ಆಗುತ್ತದೆ. ಇದರಿಂದ ಯಾವುದೇ ಹೊಟ್ಟೆ ನೋವು ಮತ್ತು ಮುಂತಾದ ಸಮಸ್ಯೆಗಳು ಬರುವುದಿಲ್ಲ. ಏಲಕ್ಕಿಯನ್ನು ಸೇವಿಸುವುದರಿಂದ ಗಂಟಲಿನಲ್ಲಿ ಹಾಗೂ ಹೊಟ್ಟೆಯಲ್ಲಿ ಆಗುವ ಉರಿಗಳನ್ನು ಸಹ ನಿವಾರಣೆ ಮಾಡುತ್ತದೆ. ಏಲಕ್ಕಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾ ಬಂದರೆ ಗ್ಯಾಸ್ಟ್ರಿಕ್, ಉದರ ಸಮಸ್ಯೆಯನ್ನು ಕೂಡಾ ಕಾಲ ಕ್ರಮೇಣ ನಿವಾರಿಸಿಕೊಳ್ಳಬಹುದು.
ಅಷ್ಟೇ ಅಲ್ದೆ ಏಲಕ್ಕಿಯನ್ನು ತಿಂದು ಮಲಗುವುದರಿಂದ ಪುರುಷರಲ್ಲಿ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಹಾಗು ಸತಿ ಪತಿ ಮಲಗುವಾಗ ಏಲಕ್ಕಿ ತಿಂದು ಮಲಗುವುದರಿಂದ ಲವಲವಿಕೆಯಿಂದ ಇರಬಹುದು ಅನ್ನೋದನ್ನ ಹೇಳಲಾಗುತ್ತದೆ, ಇವಿಷ್ಟು ನಾವು ಪ್ರತೀ ದಿನ ಏಲಕ್ಕಿಯನ್ನು ಸೇವಿಸುವುದರಿಂದ ಆಗುವ ಉಪಯೋಗಗಳು.