ಸಾಮಾನ್ಯವಾಗಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ. ಆದ್ರೆ ಎಲ್ಲದಕ್ಕೂ ಇಂಗ್ಲಿಷ್ ಔಷಧಿ ಮಾತ್ರೆಗಳು ಅಷ್ಟೇ ಅಲ್ಲ ನೈಸರ್ಗಿಕವಾಗಿ ಸಿಗುವಂತ ಹಣ್ಣು ತರಕಾರಿಗಳು ಕೂಡ ಒಳ್ಳೆಯ ಅರೋಗ್ಯ ನೀಡುವುದರ ಜೊತೆಗೆ ನಾನಾ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ.
ಈ ಲೇಖನದ ಮೂಲಕ ಒಂದಿಷ್ಟು ಮನೆಮದ್ದುಗಳನ್ನು ತಿಳಿಯೋಣ ನಿಮಗೆ ಇವುಗಳು ಉಪಯೋಗವಾಗಬಹುದು ಅನ್ನೋ ಕಾರಣಕ್ಕೆ ತಿಳಿಸಲು ಬಯಸುತ್ತಿದ್ದೇವೆ. ಅತ್ತಿ ಹಣ್ಣು ಅನ್ನೋದು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾದಂತ ಹಣ್ಣಾಗಿದ್ದು ಇದರ ಸೇವನೆಯಿಂದ ನಾನಾ ರೀತಿಯ ಉಪಯೋಗವನ್ನು ಪಡೆಯಬಹುದಾಗಿದೆ.
ಅತ್ತಿ ಹಣ್ಣನ್ನು ಪ್ರತಿದಿನವೊ ಒಂದರಂತೆ ಸೇವಿಸುತ್ತಾ ಬಂದರೆ ಮುಖದ ಮೇಲಿನ ಬಿಳಿ ಮತ್ತು ಕಪ್ಪು ಚರ್ಮ ರೋಗಗಳು ಗುಣವಾಗುತ್ತದೆ. ಅಷ್ಟೇ ಅಲ್ಲದೆ ಅತ್ತಿ ಹಣ್ಣು ತಿನ್ನೋದ್ರಿಂದ ಶರೀರಕ್ಕೆ ಹತ್ತಾರು ಲಾಭಗಳನ್ನು ಪಡೆಯಬಹುದಾಗಿದೆ.
ಇನ್ನು ಕೆಲವರಿಗೆ ಬೇಸಗೆಯಲ್ಲಿ ಮೈ ತುಂಬ ಬೆವರುಗುಳ್ಳೆಗಳು ಅಂತವರು ಕಾಂಚಿ ಹಣ್ಣು, ಹೆಸರುಬೇಳೆ ಮತ್ತು ಟೊಮೊಟೊವನ್ನು ಸೇರಿಸಿ ತೊವ್ವೆ ಮಾಡಿ ಸೇವಿಸಿದರೆ ಬೆವರು ಗುಳ್ಳೆಗಳು ನಿವಾರಣೆಯಾಗುತ್ತದೆ.
ಎಣ್ಣೆ ಚರ್ಮ ಅಂದರೆ ಆಯಿಲ್ ಪೇಸ್ ಇರೋರು ಟೊಮೊಟೊ ಚರ್ಮಕ್ಕೆ ಬಹಳ ಉತ್ತಮವಾದದ್ದು, ಪ್ರತಿ ದಿನವೋ ಬೆಳಗಿನ ವೇಳೆಯಲ್ಲಿ ಟೊಮೊಟೊ ರಸವನ್ನು ಮುಖಕ್ಕೆ ಹಚ್ಚಿಕೊಂಡು ಅದು ಚನ್ನಾಗಿ ಒಣಗಿದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುತ್ತ ಬನ್ನಿ. ಹೀಗೆ ಮಾಡುವುದರಿಂದ ಚರ್ಮದ ಎಣ್ಣೆ ಸೋರುವಿಕೆ ಕಡಿಮೆಯಾಗಿ ನಿಮ್ಮ ಮುಖದ ಕಾಂತಿಯು ಹೆಚ್ಚಾಗುತ್ತದೆ.