ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿದೆ. ದಿನನಿತ್ಯದ ಆಹಾರದಲ್ಲಿ ಡ್ರೈ ಫ್ರೂಟ್ಸ್ ಸೇವಿಸಬೇಕು. ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಪ್ರಮುಖವಾಗಿದೆ. ಬಾದಾಮಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಇರುತ್ತವೆ ಹಾಗೂ ಬಾದಾಮಿಯನ್ನು ಹೇಗೆ ಸೇವಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಬಾದಾಮಿಯಲ್ಲಿರುವ ಪೋಷಕಾಂಶಗಳು ಹೆಚ್ಚುವರಿ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತವೆ. ಇದರಿಂದ ಹೃದಯದ ಮೇಲಿನ ಒತ್ತಡ ತಗ್ಗುತ್ತದೆ ಹಾಗೂ ಹೃದಯದ ಕ್ಷಮತೆ ಮತ್ತು ಆರೋಗ್ಯ ಹೆಚ್ಚುತ್ತದೆ. ದಿನಕ್ಕೆ ಎರಡು ಬಾದಾಮಿ ಹಾಗೂ ವಿವಿಧ ಕಾಳುಗಳನ್ನು ಸೇವಿಸಿ ಎಂದು ತಜ್ಞರು ಹೇಳುತ್ತಾರೆ. ಬೀಜಗಳು ಮತ್ತು ಕಾಳುಗಳು ಅನೇಕ ಪೋಷಕಾಂಶಗಳು ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ ಆದರೆ ನಾವು ಅವುಗಳನ್ನು ಸರಿಯಾದ ರೀತಿಯಲ್ಲಿ ತಿನ್ನಬೇಕು. ಬಾದಾಮಿ, ಕಾಳುಗಳನ್ನು ಸರಿಯಾದ ರೀತಿ ತಿನ್ನುವುದು ಎಂದರೆ ಅವುಗಳನ್ನು ನೆನೆಸಿಟ್ಟು ನಂತರ ಸೇವಿಸುವುದು ಎಂದರ್ಥ.
ಬಾದಾಮಿ ನಮ್ಮ ಆರೋಗ್ಯಕ್ಕೆ ಬೇಕಾಗಿರುವ ಪ್ರಮುಖ ಆಹಾರವಾಗಿದೆ. ಇವುಗಳನ್ನು ಒಣದಾಗಿರುವಂತೆಯೆ ತಿಂದರೆ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಬಾದಾಮಿಯಲ್ಲಿರುವ ಹೆಚ್ಚಿನ ಕ್ಯಾಲೋರಿಗಳು, ಒಮೆಗಾ-ವಿಟಮಿನ್ ಗಳು ನಮ್ಮ ಮೆದುಳನ್ನು ಚುರುಕುಗೊಳಿಸಲು ಸಹಾಯವಾಗಬೇಕಾದರೆ ಅವುಗಳನ್ನು ನೆನೆಸಿಟ್ಟು ಮರುದಿನ ತಿನ್ನಬೇಕು. ಅಡುಗೆ ಮಾಡುವ ಮೊದಲು ದಾಲ್ ಮತ್ತು ಬೇಳೆಕಾಳುಗಳನ್ನು ರಾತ್ರಿಯಿಡಿ ನೆನೆಸಿಡುತ್ತಾರೆ ಏಕೆಂದರೆ ಬೇಳೆಗಳು ನೆನೆದಾಗ ಅವುಗಳು ವೇಗವಾಗಿ ಬೇಯುತ್ತವೆ ಎಂದು. ಇದು ಕೇವಲ ಬೇಯುವಿಕೆಗೆ ಮಾತ್ರ ಸಂಬಂಧಿಸಿಲ್ಲ. ಪ್ರಾಪಂಚಿಕ ಕ್ರಿಯೆಯು ಹಲವಾರು ಪ್ರಯೋಜನಗಳನ್ನು ಪಡೆದಿದೆ. ಬಾದಾಮಿಯಂತಹ ಬೀಜಗಳಿಗೂ ಈ ಕ್ರಮ ಅನ್ವಯಿಸುತ್ತದೆ.
ಬಾದಾಮಿಯು ನಮ್ಮ ದೇಹಕ್ಕೆ ಅಗತ್ಯವಾದ ಹೆಚ್ಚು ಕಬ್ಬಿಣ, ಸತು, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ ಆದರೆ ಬಾದಾಮಿ ಮತ್ತು ಬೇಳೆಕಾಳುಗಳ ಸಿಪ್ಪೆ ಫೈಟಿಕ್ ಆಸಿಡ್ ಎಂಬ ಅಂಶವನ್ನು ಹೊಂದಿರುತ್ತದೆ ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ ಹೀಗಾಗಿ ಬಾದಾಮಿಯನ್ನು ನೆನೆಸಿಟ್ಟು ತಿನ್ನುವುದರಿಂದ ಅಥವಾ ಕಾಳುಗಳನ್ನು ನೆನೆಸಿಡುವುದರಿಂದ ಅಥವಾ ಬೇಯಿಸುವುದರಿಂದ ಫೈಟಿಕ್ ಆಮ್ಲ ಒಡೆದು ಈ ಫೈಟೇಟ್ಸ್ ಎಂಬ ಕಿಣ್ವಗಳು ನಿಷ್ಕ್ರೀಯಗೊಳುತ್ತದೆ ಮತ್ತು ಎಲ್ಲಾ ಪೋಷಕಾಂಶಗಳು ನಮ್ಮ ದೇಹ ಸೇರುತ್ತವೆ. ಅಲ್ಲದೆ ನೆನೆಸಿ ಸಿಪ್ಪೆ ತೆಗೆದು ತಿನ್ನುವುದರಿಂದ ಅಜೀರ್ಣ ಸಮಸ್ಯೆ ಸಹ ಇರುವುದಿಲ್ಲ.
ತಜ್ಞರು ಹೇಳುವ ಪ್ರಕಾರ ಲೆಕ್ಟಿನ್ ಮತ್ತು ಫೈಟೇಟ್‌ಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ನೆನೆಸುವುದು ಅಥವಾ ಕುದಿಸುವುದರಿಂದ ಸಂಯುಕ್ತಗಳನ್ನು ತಟಸ್ಥಗೊಳಿಸುವ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಸಮರ್ಥವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ದಿನನಿತ್ಯದ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿ.