ಸಹಿಸುವುದು ಅಸಾಧ್ಯವಾದ ನೋವೆಂದರೆ ಅದು ಕಿವಿ ನೋವು. ದೊಡ್ಡವರು ಮತ್ತು ಮಕ್ಕಳು ಎಂಬ ತಾರತಮ್ಯವಿಲ್ಲದೆ ಕಾಡುವ ನೋವು ಇದಾಗಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಕಿವಿಯಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿರುವುದು, ಕಿವಿಯ ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್ ಸೋಂಕು ಕಾರಣವಾಗಿರುತ್ತದೆ. ಈ ರೀತಿಯ ನೋವುಗಳಿಗೆ ಮನೆಯಲ್ಲಿಯೇ ಮಾಡಬಹುದಾದ ಕೆಲವು ಮನೆಮದ್ದುಗಳನ್ನು ತಿಳಿಯೋಣ.

ಗಜ ನಿಂಬೆ ಹಣ್ಣಿನ ರಸಕ್ಕೆ ಸ್ವಲ್ಪ ತುಪ್ಪ ಬೆರೆಸಿ ಕಾಯಿಸಿ ಬೆಚ್ಚಗಿನ ರಸವನ್ನು ಕಿವಿಗೆ ಹಾಕಿದರೆ ಕಿವಿ ನೋವು ಗುಣವಾಗುತ್ತದೆ. ಎಕ್ಕದ ಎಲೆಗಳನ್ನು ತುಪ್ಪದಲ್ಲಿ ಹುರಿದು ಅದರಿಂದ ರಸ ತೆಗೆದು ನಿಯಮಿತವಾಗಿ ಕಿವಿಗಳಿಗೆ ಹಾಕಿದರೆ ಕಿವಿ ನೋವು, ಕಿವಿ ಸೋರುವುದು ಮತ್ತು ಇತರೆ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ.

ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಹಂನಿಗಳನ್ನು ನೊವಿರುವ ಕಿವಿಗೆ ಹಾಕಿದರೆ ಅದು ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಕಡಿಮೆಗೊಳಿಸುತ್ತದೆ. ಕಿವಿಯಲ್ಲಿ ಕೀಟ ಅಥವಾ ಇರುವೆ ಹೊಕ್ಕಿದರೆ ಸ್ವಲ್ಪ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬೆಚ್ಚಗೆ ಮಾಡಿ ಕಿವಿಗೆ ಹಾಕಿ, ಕೆಲವು ಸೆಕೆಂಡುಗಳ ನಂತರ ಕಿವಿಯನ್ನು ಕೆಳಮುಖವಾಗಿ ಮಾಡಿ ಎಣ್ಣೆಯನ್ನು ಕಿವಿಯಿಂದ ತೆಗೆಯಿರಿ.

2 ಹನಿಗಳಷ್ಟು ತುಳಸಿಯ ರಸವನ್ನು ನೋವಿರುವ ಕಿವಿಗೆ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ. ಸ್ವಚ್ಛವಾದ ಟಾವೆಲ್‌ ಅನ್ನು ಬಿಸಿನೀರಿಗೆ ಅದ್ದಿ ಅದನ್ನು 20 ನಿಮಿಷಗಳ ಕಾಲ ನೋವಿರುವ ಕಿವಿಗೆ ಮೃದುವಾಗಿ ಒತ್ತಿ ಹಿಡಿಯಿರಿ ಈ ರೀತಿ ಮಾಡುವುದರಿಂದ ಕಿವಿ ನೋವು ಅಥವಾ ಕಿವಿ ಬಾತುಕೊಂಡಿದ್ದರೆ ಬೇಗನೇ ಕಡಿಮೆಯಾಗುತ್ತದೆ. ಚಮಚವನ್ನು ಬಿಸಿ ನೀರಿನಲ್ಲಿಟ್ಟು ಬಿಸಿ ಮಾಡಿ ಅದಕ್ಕೆ ಬಾದಾಮಿ ಎಣ್ಣೆಯನ್ನು ಹಾಕಿ ಕಿವಿಗೆ ಹಾಕಿದರೆ ಕಿವಿನೋವು ಕಡಿಮೆಯಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *