ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ-ಸ್ವತ್ತು ಎಂಬ ತಂತ್ರಾಂಶವನ್ನು ರೂಪಿಸಿದೆ. ಹೌದು, ಇನ್ನೂ ಮುಂದೆ ಗ್ರಾಮಾಂತರ ಪ್ರದೇಶದ ಆಸ್ತಿ ನೋಂದಣಿಗೆ ಗ್ರಾಮ ಪಂಚಾಯತಿಯಿಂದ ಪಡೆದ ನಮೂನೆ 9 ಹಾಗೂ ನಮೂನೆ 11 ಪಡೆಯುವುದು ಕಡ್ಡಾಯಗೊಳಿಸಿದೆ. ಇ ಸ್ವತ್ತು, ನಮೂನೆ 9 ಮತ್ತು ನಮೂನೆ 11 ಏನಿವು. ಇದರಿಂದ ಉಪಯೋಗಗಳೇನು ಇ-ಸ್ವತ್ತು ಅಡಿ ಆಸ್ತಿ ನೋಂದಣಿ ಏಕೆ ಮಾಡಿಸಬೇಕು ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಇ -ಸ್ವತ್ತು? ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖರೀದಿಸಿದ ಜಮೀನು ಅಥವಾ ಆಸ್ತಿ, ಅಥವಾ ಮನೆ ಖರೀದಿ ಮಾಡಿದ್ದರೆ ಅಥವಾ ಈಗಾಗಲೇ ನಿಮ್ಮ ಆಸ್ತಿ, ಮನೆಗಳಿದ್ದರೆ ಸರ್ಕಾರ ಸಿದ್ದಪಡಿಸಿರುವ ಇ ತಂತ್ರಾಂಶದ ಮೂಲಕ ಆಸ್ತಿಗೆ ಗ್ರಾಮ ಪಂಚಾಯತಿನಲ್ಲಿ ಅರ್ಜಿ ಸಲ್ಲಿಸಿ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಳ್ಳುವುದನ್ನು ಇ ಸ್ವತ್ತು ಎನ್ನುವರು. ನೂತನ ನಿಯಮದ ಪ್ರಕಾರ ಈ-ಸ್ವತ್ತು ತಂತ್ರಾಂಶ ಬಳಸಿ ಆನ್ ಲೈನ್ ಮೂಲಕ ವಿತರಿಸಿದ ನಮೂನೆ 9 ಮತ್ತು ನಮೂನೆ 11 ನ್ನು ಆಸ್ತಿ ನೋಂದಣಿಗೆ ಬಳಸಬಹುದು.
ಕೈ ಬರಹದ ಮೂಲಕ ನೀಡುವ ಹಾಗೂ ಹಳೆ ಮಾದರಿಯ ನಮೂನೆ 9 ಹಾಗೂ ನಮೂನೆ 11ನ್ನು ಇನ್ನೂಮುಂದೆ ರದ್ದುಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತಿಳಿಸಿದೆ. ಹೊಸದಾಗಿ ಬಂದಂತಹ ಆಸ್ತಿಗಳ ನೋಂದಣಿ ಇ ಸ್ವತ್ತು ನಲ್ಲಿ ಪಿಡಿಓಗಳು ಡಿಜಿಟಲ್ ಸಹಿಯನ್ನು ಹಾಕಿರುವುದರಿಂದ ಇದು ಮಾನ್ಯತೆ ಹೊಂದಿರುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಯನ್ನು ಮಾರುವಾಗಿ ಅಥವಾ ಕೊಳ್ಳುವಾಗ ಈ ಸ್ವತ್ತು ಕಡ್ಡಾಯವಾಗಿರುತ್ತದೆ. ನಮೂನೆ 9: ಕೃಷಿಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಿರ್ಧರಿಸಲು ಒಂದು ಪಟ್ಟಿ ಸಿದ್ದಗೊಳಿಸಲಾಗುತ್ತದೆ. ಅದರ ಆಧಾರದಲ್ಲಿ ನಮೂನೆ 9ನ್ನು ಪಿಡಿಒ ನೀಡುತ್ತಾರೆ
ಅದರಲ್ಲಿ ಮಾಲಿಕರ ಹೆಸರು, ಭಾವಚಿತ್ರ, ಜಾಗದ ಸರ್ವೆ ನಂಬರ್, ಆಸ್ತಿಯ ವಿಸ್ತೀರ್ಣ, ಮತ್ತಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿಧದ ಆಸ್ತಿ, ಅದರ ಛಾಯಾಚಿತ್ರ, ಮತ್ತಿತರ ವಿವರಗಳನ್ನು ಪಿಡಿಓ ಭರ್ತಿ ಮಾಡಿರುತ್ತಾರೆ. ನಮೂನೆ 11 ಬಿ: ರಲ್ಲಿ ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮತ್ತಿತರ ವಿವರಗಳನ್ನು ಪಿಡಿಓ ಭರ್ತಿ ಮಾಡಿ ಸಹಿ ಮಾಡಿರುತ್ತಾರೆ. ಈ ಸ್ವತ್ತು ಮಾಡಿಸಲು ಬೇಕಾಗುವ ದಾಖಲೆಗಳು: ಮಾಲೀಕನ ವಿಳಾಸದ ಕುರಿತು ಪತ್ರ, (ಆಧಾರ್ ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ) ಆಸ್ತಿಯ ಮಾಲೀಕತ್ವದ ದಾಖಲೆಗಳು, ಜಮೀನಿನ ದಾಖಲಾತಿಗಳು ಮುಖ್ಯವಾಗಿ ಚೆಕ್ ಬಂದಿ ಬೇಕಾಗುತ್ತದೆ. ಜಮೀನು ಮಾಲೀಕರ passport size ಫೋಟೊಗಳು, ನಿವೇಶನದ ನಕ್ಷೆ ಅಂದರೆ ಆಸ್ತಿಯ ನಕ್ಷೆ ಬೇಕು. ಕ್ರಯಪತ್ರ ಬೇಕು. ಪಹಣಿ ಪತ್ರ ಇದ್ದರೆ ಲಗತ್ತಿಸಬೇಕು. ಕಟ್ಟಡಗಳ ತೆರಿಗೆ ಪತ್ರ, ಅಥವಾ ವಿದ್ಯುತ್ ಬಿಲ್ ಬೇಕು.
ಇ-ಸ್ವತ್ತಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲಾತಿಗಳೊಂದಿಗೆ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ದ್ವಿತೀಯ ದರ್ಜೆ ಸಹಾಯಕ, ಕಾರ್ಯದರ್ಶಿ ದಾಖಲಾತಿ ಮತ್ತು ಸ್ಥಳದ ಪರಿಶೀಲನೆ ನಡೆಸಿ 7 ದಿನಗಳ ಒಳಗೆ ಆಕ್ಷೇಪಣೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳು ಬಂದಲ್ಲಿ ಪರಿಶಿಲೀಸಿ ದಾಖಲೆ ಮಾಡಿ ಟಿಪ್ಪಣೆಯೊಂದಿಗೆ ಪ್ರಸ್ತಾವನೆಯನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಸಭೆಯ ನಿರ್ಣಯದಂತೆ ಕ್ರಮಕೈಗೊಳ್ಳಲಾಗುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತರ ಈ ಸ್ವತ್ತಿನ ಮೇಲೆ ಪಿಡಿಓರವರು ಡಿಜಿಟಲ್ ಸಹಿ ಮಾಡುವ ಮೂಲಕ ಅರ್ಜಿ ಸಲ್ಲಿಸಿದ 45 ದಿನಗಳೊಳಗಾಗಿ ಇ-ಸ್ವತ್ತು ಮಾಡಬೇಕೆಂಬ ನಿಯಮವಿದೆ.
ನಮೂನೆ 9 ಮತ್ತು 11 ಏಕೆ ಬೇಕು? ಫಾರ್ಮ್ 9 ಮತ್ತು ಫಾರ್ಮ್ 11 ಇರದಿದ್ದರೆ ಕಾನೂನಿನ ಅಡಿಯಲ್ಲಿ ಆಸ್ತಿಗೆ ಮಾನ್ಯತೆಯಿರುವುದಿಲ್ಲ. ನಮೂನೆ 9 ಮತ್ತು 11 ಇದ್ದರೆ ನಿಮ್ಮ ಜಮೀನನನ್ನು ಸರಳವಾಗಿ ಮಾರಬಹುದು. ಬೇರೆಯವರು ಅಕ್ರಮಿಸುವುದಕ್ಕೆ ಆಗುವುದಿಲ್ಲ.ಮಾರುವಾಗ ಅಥವಾ ಕೊಳ್ಳುವಾಗ ಇ ಸ್ವತ್ತು ಅಡಿಯಲ್ಲಿ ಮಾಡಿರುವು ಫಾರ್ಮ 9 ಮತ್ತು 1 ಕಡ್ಡಾಯವಾಗಿರುತ್ತದೆ. ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಸರಳವಾಗಿರುತ್ತದೆ. ಫಾರ್ಮ 9 ಎಂದರೇನು? ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೃಷಿಯೇತರ ಆಸ್ತಿಗಳಿಗೆ ದಾಖಲೆ ನೀಡುವುದನ್ನು ಫಾರ್ಮ್ 9 ಎನ್ನುವರು. ಪಿಡಓ ನೀಡುತ್ತಾರೆ.
ಮಾಲೀಕನ ಹೆಸರು, ಫೊಟೋ, ಜಾಗದ ಸರ್ವೆ, ಆಸ್ತಿಯ ಚಿತ್ರ, ಆಸ್ತಿ ಯಾವ ಮೂಲದ ಆಸ್ತಿ ಸೇರಿದಂತೆ ಮತ್ತಿತರ ವಿವರಗಳು ಇರುತ್ತವೆ. ಫಾರ್ಮ 11 ಎಂದರೇನು? ಕಟ್ಟಡ ತೇರಿಗೆಗಳ ಪಾವತಿ, ಆಸ್ತಿಯ ವಿವರ ಇರುತ್ತದೆ. ಮಾಲೀಕರ ಭಾವಚಿತ್ರ ಇರುತ್ತದೆ. ತೆರಿಗೆಳ ಪ್ರತಿಯೊಂದು ವಿವರ ಇರುತ್ತದೆ. ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಯಾತಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತೆರ ಪಿಡಿಓ ರವರು ಇ ಸ್ವತ್ತು ತಂತ್ರಾಂಶದ ಮೂಲಕ ಅರ್ಜಿಯನ್ನು ಆಸ್ತಿ ನಕ್ಷೆ ಪಡೆಯಲು ಮೋಜಿನಿಗೆ ಅಂದರೆ ಅಳತೆಗಾಗಿ ವರ್ಗಾಯಿಸುತ್ತಾರೆ.
ನಂತರ ಮೋಜಿನಿಯಾದ ನಂತರ 800 ರುಪಾಯಿ ಶುಲ್ಕ ಪಾವತಿಸಿ ಸ್ವೀಕೃತಿ ಪಡೆದುಕೊಳ್ಳಬೇಕು. ಇದಾದ ನಂತರ 21 ದಿನಗಳ ನಂತರ ಅರ್ಜಿದಾರರ ಸಮ್ಮುಖದಲ್ಲಿ ಪಿಡಿಓ ಸ್ಥಳ ಪರಿಶೀಲನೆ ಮಾಡಿದ ನಂತರ ಡಿಜಿಟಲ್ ಸಹಿ ಮಾಡಿ ಇ-ಸ್ವತ್ತು ನೀಡುತ್ತಾರೆ. ಇ ಸ್ವತ್ತು ಆನ್ಲೈನ್ ಮೂಲಕ ಫಾರ್ಮ್ 9 ಹಾಗೂ ಫಾರ್ಮ್ 11ನ್ನು ವೀಕ್ಷಿಸಬಹುದು. ಪಿಡಿಒರವರ ಡಿಜಿಟಿಲ್ ಸಹಿ ಮಾಡಿದ ಡಿಜಿಟಲ್ ಸಹಿಯೊಂದಿಗೆ ನಿಮ್ಮ ಆಸ್ತಿಯ ಇ-ಸ್ವತ್ತು ಫಾರ್ಮ್ 9 ಅಥವಾ 11 ನೋಡಬೇಕಾದರೆ ಈ https://e-swatu.car.nik.in/(s(gas31z1pitsh3smknkbizwnv1))/issueform9/from_publicsearchform9.asps
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲಿ ಫಾರ್ಮ್ 9 ಅಥವಾ ಫಾರ್ಮ್ 11 ನ್ನು ಎರಡರಲ್ಲಿ ಯಾವುದನ್ನು ನೋಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆ ಬ್ಲಾಕ್, ಗ್ರಾಮ ಪಂಚಾಯತಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ಆಸ್ತಿ ಐಡಿ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಸ್ತಿಯ ವಿವರ ಓಪನ್ ಆಗುತ್ತದೆ. ಇದನ್ನು ಪ್ರಿಂಟ್ ಸಹ ಪಡೆದುಕೊಳ್ಳಬಹುದು.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ