ಮಾನವೀಯತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕೆಲವೊಬ್ಬರಲ್ಲಿ ಇರುವುದಿಲ್ಲ. ಕೆಲವೊಬ್ಬರಲ್ಲಿ ಹೆಚ್ಚಾಗಿ ಇದ್ದರೆ ಇನ್ನೂ ಕೆಲವರಲ್ಲಿ ಕಡಿಮೆ ಇರುತ್ತದೆ. ಇಲ್ಲಿ ಒಬ್ಬ ಅಂಗವಿಕಲಳಿಗೆ ತಾಳಿ ಕಟ್ಟಿ ಮಾನವೀಯತೆಯನ್ನು ಮೆರೆದಿದ್ದಾನೆ. ಆದ್ದರಿಂದ ನಾವು ಇಲ್ಲಿ ಅಪರೂಪದ ಒಂದು ಸಂಗತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಪ್ರಪಂಚದಲ್ಲಿ ಎಷ್ಟೋ ವ್ಯಕ್ತಿಗಳು ಪೋಲಿಯೋದಿಂದಾಗಿ ತಮ್ಮ ಅಂಗಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಈ ಹುಡುಗಿ ಕೂಡ ಒಬ್ಬಳು. ಈ ಹುಡುಗಿ ಪೋಲಿಯೋದಿಂದಾಗಿ ತನ್ನ ಎರಡೂ ಕಾಲುಗಳಲ್ಲಿ ಬಲವನ್ನು ಕಳೆದುಕೊಂಡಿದ್ದಾಳೆ. ಸೆಕೆಂಡ್ ಪಿಯುಸಿವರೆಗೆ ಕಲಿತು ತನ್ನ ತಂದೆ ಮತ್ತು ತಾಯಿಯ ಆಶ್ರಯದಲ್ಲಿ ಬೆಳೆದಿದ್ದಾಳೆ. ಕಾಲು ಕಿತ್ತುಕೊಂಡು ದೇವರು ಮದುವೆಯ ವಿಚಾರದಲ್ಲಿ ಅವಳ ಕೈ ಬಿಡಲಿಲ್ಲ. ದುಬೈನಲ್ಲಿ ಉದ್ಯೋಗದಲ್ಲಿ ಇರುವ ಸಂದೀಪ್ ಎನ್ನುವ ವ್ಯಕ್ತಿ ಇವಳನ್ನು ವಿವಾಹವಾಗಿ ಇವಳಿಗೆ ಜೀವನ ನೀಡಿದ್ದಾರೆ. ಈ ಮದುವೆ ಉಡುಪಿಯ ದೇವಸ್ಥಾನದ ಆವರಣದಲ್ಲಿ ನಡೆಸಲಾಗಿತ್ತು.
ಇಂತಹ ಹುಡುಗಿಯನ್ನು ಮದುವೆ ಆಗಬೇಕು ಎಂದು ಸಂದೀಪ್ ಅವರು ಮೊದಲೇ ನಿರ್ಧಾರ ಕೈಗೊಂಡಿದ್ದರು. ಅವರೇ ಸಂಬಂಧಿಕರ ಮೂಲಕ ಇವಳ ಬಗ್ಗೆ ತಿಳಿದುಕೊಂಡಿದ್ದಾರೆ. ನಂತರ ಇವರೇ ಬಂದು ಮನೆಯಲ್ಲಿ ಮಾತನಾಡಿದ್ದಾರೆ. ಆಕೆಯ ತಾಯಿಯ ಮನೆಯವರು ಮಗಳ ಬಾಳು ನರಕವಾಗುತ್ತದೆ ಎಂದು ಯೋಚಿಸುತ್ತಿದ್ದರು. ಆಗ ಈತ ದೇವರಂತೆ ಹೋಗಿ ಅವರನ್ನು ಒಪ್ಪಿಸಿ ಮದುವೆ ಆಗಿದ್ದಾರೆ. ಇದರಿಂದ ಅವಳ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರವಾದಷ್ಟು ಸಂತೋಷವಾಗಿದೆ.
ಮದುವೆ ಮುಗಿಯುವವರೆಗೂ ಅವಳ ಸಂಬಂಧಿಕರು ಎಲ್ಲರೂ ಅನಂದಭಾಷ್ಪ ಸುರಿಸಿದ್ದಾರೆ. ಎಲ್ಲಾ ತವರುಮನೆಯವರಿಗೂ ಅಷ್ಟೇ ತಮ್ಮ ಮಗಳು ಸುಖವಾಗಿ ಇರಲು ಎಂದು ಬಯಸುತ್ತಾರೆ. ಹೆಣ್ಣು ಮಕ್ಕಳಿಗೆ ಯಾವ ಯಾವ ವಯಸ್ಸಿಗೆ ಏನು ಆಗಬೇಕೋ ಅದು ಆಗಬೇಕು ಎನ್ನುವುದು ಪ್ರತಿ ಹೆಣ್ಣನ್ನು ಹೆತ್ತವರ ಅಭಿಪ್ರಾಯ ಆಗಿರುತ್ತದೆ. ಹಾಗೆಯೇ ಈಕೆಯ ಕುಟುಂಬದವರು ತುಂಬಾ ನೋವು ಪಟ್ಟಿದ್ದರು. ಆದರೆ ಈಕೆಯ ಕಾಲು ಬಲಹೀನವಾದರೂ ಅವಳ ಅದೃಷ್ಟದ ಬಾಗಿಲು ಮಾತ್ರ ತೆರೆದಿತ್ತು. ಆದ್ದರಿಂದ ಕೊನೆಯದಾಗಿ ಹೇಳುವುದೇನೆಂದರೆ ಈ ಅಪರೂಪದ ಜೋಡಿ ಸಂತೋಷದಿಂದ ಬಾಳಲಿ.