ಬಹಳಷ್ಟು ಜನರು ಡ್ರೈ ಸ್ಕಿನ್ ಹಾಗೂ ಇತರ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಹಣ ಖರ್ಚು ಮಾಡಿ ಔಷಧಿ ಬಳಸುವುದರಿಂದ ತಾತ್ಕಾಲಿಕ ಪರಿಹಾರ ದೊರೆಯುತ್ತದೆ. ಸೋಪು, ಫೇಸ್ ವಾಶ್ ಬಳಸುವುದರಿಂದ ಕೆಮಿಕಲ್ ಬಳಕೆ ಚರ್ಮಕ್ಕೆ ಒಳ್ಳೆಯದಲ್ಲ. ಹಾಗಾಗಿ ಮನೆಯಲ್ಲೇ ಸುಲಭವಾಗಿ ದಿನನಿತ್ಯ ಬಳಸುವ ಸಾಮಗ್ರಿಗಳನ್ನು ಬಳಸಿ ಮಾಡುವ ಮನೆ ಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.
ತ್ರಿ ಸ್ನೇಹಗಳಾದ ಎಳ್ಳೆಣ್ಣೆ, ಹರಳೆಣ್ಣೆ, ತುಪ್ಪ ಇವುಗಳನ್ನು ಸಮ ಪ್ರಮಾಣದಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ 7-8 ನಿಮಿಷಗಳ ಕಾಲ ಬ್ಲೆಂಡ್ ಮಾಡಿ ಚೆನ್ನಾಗಿ ಅರೆದು. 1-4 ಚಿಟಿಕೆಯಷ್ಟು ಪರಿಶುದ್ಧವಾದ ಅರಿಶಿಣ ಕೊಂಬಿನ ಪುಡಿ, ಅರಿಶಿಣ ಕೊಂಬು ಅಂಗಡಿಗಳಲ್ಲಿ ಸಿಗುತ್ತದೆ. ಕುಟ್ಟಿ ಪುಡಿ ಮಾಡಿದ ಅರಿಶಿಣ ಪುಡಿಯನ್ನು ಬಟ್ಟೆಯಲ್ಲಿ ಫಿಲ್ಟರ್ ಮಾಡಬೇಕು ಹೀಗೆ ಮಾಡಿದಾಗ ಅರಿಶಿಣ ಪರಿಶುದ್ಧವಾಗಿರುತ್ತದೆ. ಸ್ಕಿನ್ ಸೂಕ್ಷ್ಮವಾಗಿರುವುದರಿಂದ ಶುದ್ಧತೆಯ ಬಗ್ಗೆ ಗಮನ ಕೊಡಬೇಕು. ಇವುಗಳ ಮಿಶ್ರಣವನ್ನು ಡ್ರೈ ಸ್ಕಿನ್ ಇರುವ ಭಾಗಕ್ಕೆ ಅಪ್ಲೈ ಮಾಡಬೇಕು ಉರಿ ಇಲ್ಲದೆ ಕೇವಲ ಒಣ ಚರ್ಮ ಇದ್ದರೆ ಈ ಮಿಶ್ರಣವನ್ನು ಅಪ್ಲೈ ಮಾಡಿ ಚೆನ್ನಾಗಿ ರಬ್ ಮಾಡಬೇಕು. ಈ ರೀತಿ 8-10 ದಿನ 3-4 ಸಲ 4-15 ನಿಮಿಷದವರೆಗೆ ರಬ್ಬಿಂಗ್ ಮತ್ತು ಅಪ್ಲಿಕೇಷನ್ ಮಾಡಬೇಕು ಹೀಗೆ ಮಾಡುವುದರಿಂದ ಡ್ರೈನೆಸ್ ಹೋಗುತ್ತದೆ ಬಹಳ ಹೆಚ್ಚಿದ್ದಾಗ 45-60 ದಿನಗಳವರೆಗೆ ದಿನಕ್ಕೆ 4 ಬಾರಿ ಮಾಡಬೇಕು ಹೀಗೆ ಮಾಡುವುದರಿಂದ ಹಂತ ಹಂತವಾಗಿ ಡ್ರೈನೆಸ್ ನಿವಾರಣೆಯಾಗುತ್ತದೆ. ಬಹಳಷ್ಟು ಜನರು ಸೋಪ್, ಫೇಸ್ ವಾಷ್ ಹಾಕುತ್ತಾರೆ ಆದರೆ ಆಯುರ್ವೇದದಲ್ಲಿ ಸೋಪು, ಶಾಂಪೂ ಬಳಕೆ ಇರಲಿಲ್ಲ. ಆಯುರ್ವೇದದ ಪ್ರಕಾರ ಮುಖ ತೊಳೆಯಲು ಕಡಲೆ ಹಿಟ್ಟನ್ನು ಬಳಸಬಹುದು.
ಕಡಲೆ ಹಿಟ್ಟಿಗೆ ಹಾಲನ್ನು ಮಿಕ್ಸ್ ಮಾಡಿ ಇದಕ್ಕೆ ಬೇವಿನ ಚೂರ್ಣ ಅಥವಾ ಚಕ್ಕೆಯನ್ನು ಮಿಕ್ಸ್ ಮಾಡಿ ಬೊಡಿ ಸ್ಕ್ರಬ್ ಆಗಿ ಬಳಸಿ ಸಾಧ್ಯವಾದರೆ ಪರಿಶುದ್ಧವಾದ ಗೋ ಮೂತ್ರ ಸೇರಿಸಿದರೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹೀಗೆ ಮಾಡಿದರೆ ಡ್ರೈನೆಸ್ ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ಹಾನಿಕಾರಕ ಅಂಶಗಳು ನಿವಾರಣೆಯಾಗುತ್ತದೆ ಅಲ್ಲದೇ ರಕ್ತ ಸಂಚಾರ ಸರಿಯಾಗಲು ಸಹಾಯವಾಗುತ್ತದೆ. ಮನೆಯಲ್ಲಿ ತಯಾರಿಸಿದ ಈ ರೆಮಿಡಿಯ ಬಳಕೆಯಿಂದ ಡ್ರೈ ಸ್ಕಿನ್, ಒಣ ಇಸುಬು ನಿವಾರಣೆಯಾಗುತ್ತದೆ. ಹೀಗೆ ಜೀವನ ಪೂರ್ತಿ ಮಾಡಿದರೂ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಹಾಗೂ ಡ್ರೈ ಸ್ಕಿನ್ ನಿವಾರಣೆಯಾಗಿ ಚರ್ಮ ಸಾಫ್ಟ್ ಆಗಿ ಉತ್ತಮ ಆರೋಗ್ಯ ಹೊಂದುತ್ತದೆ. ಕೆಮಿಕಲ್ಸ್ ಬಳಸಿದ ಸೋಪು, ಶಾಂಪೂ ಬಳಸಿದಾಗ ಚರ್ಮ ಹಾಳಾಗುತ್ತದೆ ಆದ್ದರಿಂದ ಮನೆಯಲ್ಲೇ ಸುಲಭವಾಗಿ ದಿನನಿತ್ಯ ಬಳಸುವ ಉನ್ನತ ಮಟ್ಟದ ಅಂಶಗಳಿರುವ ಸಾಮಗ್ರಿಗಳನ್ನು ಸೇರಿಸಿ ಮಾಡಿದ ಮನೆ ಮದ್ದನ್ನು ಬಳಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಚರ್ಮದ ಆರೋಗ್ಯವನ್ನು ಆಯುರ್ವೇದದ ಮೂಲಕ ಕಪಾಡಿಕೊಳ್ಳೋಣ.