ಒಣ ದ್ರಾಕ್ಷಿಯನ್ನು ಹೆಚ್ಚು ಸೇವಿಸಬೇಕು. ಡ್ರೈ ಫ್ರೂಟ್ಸ್ ಹೆಚ್ಚು ಸೇವಿಸಬೇಕು ಅದರಲ್ಲೂ ಒಣದ್ರಾಕ್ಷಿ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದು. ಒಣದ್ರಾಕ್ಷಿಯನ್ನು ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಹಾಗಾದರೆ ಒಣದ್ರಾಕ್ಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಒಣ ದ್ರಾಕ್ಷಿಯನ್ನು ಸೇವಿಸಬೇಕು ಇದರಿಂದ ರಕ್ತಹೀನತೆ, ನಿಶ್ಯಕ್ತಿ ಕಡಿಮೆಯಾಗುತ್ತದೆ. ಹಣ್ಣುಗಳನ್ನು ಸೇವಿಸುವುದರಿಂದ ಆಂಟಿ ಆಕ್ಸಿಡೆಂಟ್ ದೇಹಕ್ಕೆ ಸಿಗುತ್ತದೆ. ಕೆಲವರಲ್ಲಿ ಒಣದ್ರಾಕ್ಷಿ ಸೇವಿಸುವುದರಿಂದ ಮಧುಮೇಹ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆಯುರ್ವೇದದ ಪ್ರಕಾರ ಹಣ್ಣುಗಳಲ್ಲಿ ಹೆಚ್ಚು ಉತ್ತಮ ಹಣ್ಣು ಒಣದ್ರಾಕ್ಷಿ. ಒಣದ್ರಾಕ್ಷಿ ಮಧುರ ರಸವನ್ನು ಹೊಂದಿರುತ್ತದೆ ಇದರಿಂದ ದೇಹಕ್ಕೆ ಚೈತನ್ಯ ಕೊಡುತ್ತದೆ, ಶರೀರಕ್ಕೆ ತಂಪನ್ನು ಕೊಡುತ್ತದೆ. ಎಲ್ಲ ಹಣ್ಣುಗಳು ತನ್ನದೆ ಆದ ಪ್ರಾಮುಖ್ಯತೆ ಹೊಂದಿರುತ್ತದೆ, ಒಣದ್ರಾಕ್ಷಿ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಒಣದ್ರಾಕ್ಷಿ ಲಘು ಆಹಾರವಾಗಿದೆ. ಒಣದ್ರಾಕ್ಷಿ ರಕ್ತ ಪರಿಚಲನೆಗೆ ಸಹಾಯಕ, ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ಇತ್ತೀಚಿನ ದಿನಗಳಲ್ಲಿ ದ್ರಾಕ್ಷಿಗೆ ಹೆಚ್ಚು ರಾಸಾಯನಿಕ ಬಳಸುವುದರಿಂದ ತಿನ್ನುವಾಗ ಎಚ್ಚರಿಕೆ ವಹಿಸಬೇಕು. ಬಿಸಿ ನೀರಿಗೆ ಉಪ್ಪನ್ನು ಹಾಕಿ ಚೆನ್ನಾಗಿ ವಾಷ್ ಮಾಡಿ ಸೇವಿಸಬೇಕು. ಒಣ ದ್ರಾಕ್ಷಿಯನ್ನು ಸಂಜೆ ವಾಷ್ ಮಾಡಿ ಫಿಲ್ಟರ್ ನೀರು ಅಥವಾ ಕುಡಿಯುವ ನೀರಿನಲ್ಲಿ ನೆನೆಸಿಡಬೇಕು ಬೆಳಗ್ಗೆ ಪುನಃ ವಾಷ್ ಮಾಡಿ ಸೇವಿಸಬೇಕು. ಕೆಲವರು ರಾಸಾಯನಿಕ ಹೆಚ್ಚು ಬಳಸುವುದರಿಂದ ಒಣದ್ರಾಕ್ಷಿ ಹಾಗೂ ದ್ರಾಕ್ಷಿಯನ್ನು ಸೇವಿಸುವುದನ್ನು ಬಿಡುತ್ತಾರೆ ಆದರೆ ಹೀಗೆ ಮಾಡುವುದು ತಪ್ಪು. ಚೆನ್ನಾಗಿ ವಾಷ್ ಮಾಡಿದಾಗ ರಾಸಾಯನಿಕ ಹೋಗುತ್ತದೆ ಒಂದು ವೇಳೆ ರಾಸಾಯನಿಕ ಉಳಿದರೆ ದೇಹ ಮೂತ್ರ ಹಾಗೂ ಬೆವರಿನ ಮೂಲಕ ದೇಹದಿಂದ ಹೊರಹಾಕುತ್ತದೆ.
ಮಧುಮೇಹ ಇದ್ದವರು ಪ್ರತಿದಿನ ಸೇವಿಸುವ ಚಪಾತಿ, ಅನ್ನ ಇವುಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ ಸ್ವಲ್ಪ ಪ್ರಮಾಣದಲ್ಲಿ ಒಣದ್ರಾಕ್ಷಿಯನ್ನು ಸೇವಿಸಬೇಕು. ಆಯುರ್ವೇದಲ್ಲಿ ಸಿಗುವ ಅನೇಕ ಔಷಧಿಗಳಿಗೆ ಒಣದ್ರಾಕ್ಷಿಯನ್ನು ಬಳಸಲಾಗುತ್ತದೆ. ಪ್ರತಿದಿನ ಬಾದಾಮಿ, ಗೋಡಂಬಿ ಜೊತೆಗೆ ಒಣದ್ರಾಕ್ಷಿಯನ್ನು ಸೇವಿಸಬೇಕು. 8-10 ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿ ಬೆಳಗ್ಗೆ ಸೇವಿಸುವುದರಿಂದ ಹೊಟ್ಟೆ ತುಂಬಿದಂತೆ ಆಗಿ ಆರೋಗ್ಯಕ್ಕೆ ಒಳ್ಳೆಯದು. ಮಧುಮೇಹ ಇದ್ದವರು ಒಣದ್ರಾಕ್ಷಿಯನ್ನು ಕಡಿಮೆ ಸೇವಿಸಬಹುದು. ಒಣದ್ರಾಕ್ಷಿಯನ್ನು ಬಳಸುವಾಗ ಎಚ್ಚರಿಕೆಯಿಂದ ಬಳಸಬೇಕು. ಒಣದ್ರಾಕ್ಷಿಯನ್ನು ಹೆಚ್ಚು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ.