ನಾವುಗಳು ಸೇವನೆ ಮಾಡುವಂತ ಆಹಾರ ಪದ್ದತಿಗಳು ನಮ್ಮ ಆರೋಗ್ಯವನ್ನು ವೃದ್ಧಿಸುವಂತ ಕೆಲಸವನ್ನು ಮಾಡುತ್ತವೆ. ನಮ್ಮ ಪ್ರತಿದಿನದ ಆಹಾರ ಶೈಲಿ ಕೂಡ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ, ಹಾಗಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಪೌಷ್ಟಿಕಾಂಶ ಭರಿತವಾದ ಹಣ್ಣು ತರಕಾರಿ ಸೊಪ್ಪು ಇವುಗಳನ್ನು ಸೇವಿಸುವುದು ಉತ್ತಮ. ಅಷ್ಟೇ ಅಲ್ದೆ ಒಣ ಹಣ್ಣುಗಳು ಕೂಡ ದೇಹಕ್ಕೆ ಉತ್ತಮ ಪೌಷ್ಟಿಕಾಂಶವನ್ನು ಒದಗಿಸುತ್ತವೆ, ಅವುಗಳಲ್ಲಿ ಒಂದಾಗಿರುವಂತ ಈ ಒಣದ್ರಾಕ್ಷಿ ಕೂಡ ಆರೋಗ್ಯಕ್ಕೆ ಉತ್ತಮ ಔಷಧಿಯನ್ನು ನೀಡುವಂತ ಗುಣಗಳನ್ನು ಹೊಂದಿದೆ.
ಒಣದ್ರಾಕ್ಷಿ ಮಾನವನ ಮೆದುಳಿಗೆ ಉತ್ತಮ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ದೇಹಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಒಣ ದ್ರಾಕ್ಷಿ ಹಾಗೂ ಹಸಿ ದ್ರಾಕ್ಷಿ ಎರಡು ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವಂತ ಕೆಲಸ ಮಾಡುತ್ತದೆ. ನೂರು ಗ್ರಾಂ ದ್ರಾಕ್ಷಿಯಲ್ಲಿರುವಂತ ಆರೋಗ್ಯಕಾರಿ ಅಂಶಗಳು ಯಾವುವು ಅನ್ನೋದನ್ನ ಹೇಳುವುದಾದರೆ ನಾರು ಕ್ಯಾಲ್ಶಿಯಂ ಸೋಡಿಯಂ ಸಕ್ಕರೆ ಸಸಾರಜನಕ ಪೊಟ್ಯಾಶಿಯಂ ಇನ್ನು ಅನೇಕ ಅಂಶಗಳನ್ನು ದ್ರಾಕ್ಷಿ ಹೊಂದಿದೆ, ಹಾಗಾಗಿ ಇದರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.
ವಿಷ್ಯಕ್ಕೆ ಬರೋಣ ಒಣ ದ್ರಾಕ್ಷಿಯಲ್ಲಿರುವಂತ ಆರೋಗ್ಯಕಾರಿ ಗುಣಗಳು ಯಾವುವು ಅನ್ನೋದನ್ನ ತಿಳಿಯುವುದಾದರೆ ಉಷ್ಣದಿಂದ ಉಂಟಾಗುವಂತ ಕೆಮ್ಮು ಸಮಸ್ಯೆಯನ್ನು ನಿವಾರಿಸುತ್ತದೆ, ಹೌದು ರಾತ್ರಿ ಹಾಗೂ ಬೆಳಗ್ಗೆ ೮ ರಿಂದ ೧೦ ದ್ರಾಕ್ಷಿಯನ್ನು ಸೇವಿಸವುದರಿಂದ ಕೆಮ್ಮು ಬಹುಬೇಗನೆ ನಿವಾರಣೆಯಾಗುತ್ತದೆ. ಹಾಲಿನೊಂದಿಗೆ ಒಣ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಎನರ್ಜಿ ದೊರೆಯುವುದು. ಹಾಗೂ ಬಾಯಾರಿಕೆ ಶಮನವಾಗುವುದು.
ಕೆಮ್ಮು ಕಫ ನಿವಾರಣೆಗೆ ಒಣದ್ರಾಕ್ಷಿ ಹಾಗೂ ಕಾಳುಮೆಣಸು ಸಮಪ್ರಮಾಣದಲ್ಲಿ ತಗೆದುಕೊಂಡು ಅದನ್ನು ಅರೆದು ಸೇವನೆ ಮಾಡುವುದರಿಂದ ಕೆಮ್ಮು ಕಫ ನಿವಾರಣೆಯಾಗುವುದು. ಮುಖದ ಕಾಂತಿಯನ್ನು ಹೆಚ್ಚಿಸಲು ಒಣದ್ರಾಕ್ಷಿಯನ್ನು ಹಾಲಿನೊಂದಿದೆ ಅರೆದು ಮುಖದ ಮೇಲೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುವುದು. ಅಷ್ಟೇ ಅಲ್ದೆ ಮಲಬದ್ಧತೆ ಸಮಸ್ಯೆ ಇರೋರು ಸ್ವಲ್ಪ ಒಣದ್ರಾಕ್ಷಿಯನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂಡಿಗೂ ಮುನ್ನ ಸೇವನೆ ಮಾಡುವುದರಿಂದ ಮಲಬದ್ಧತೆ ದೂರವಾಗುವುದು. ಹೀಗೆ ನಾನಾ ಉಪಯೋಗಗಳನ್ನು ಒಣದ್ರಾಕ್ಷಿಯಿಂದ ಪಡೆದುಕೊಳ್ಳಬಹುದಾಗಿದೆ.