ಡ್ರೈಫ್ರೂಟ್ಸ್ಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ. ಪ್ರತಿ ದಿನ ದ್ರಾಕ್ಷಿ, ಗೋಡಂಬಿ, ಖರ್ಜೂರ ತಿನ್ನುವುದರಿಂದ ಒಳ್ಳೆಯ ಆರೋಗ್ಯ ಪ್ರಯೋಜನಗಳು ನಿಮಗೆ ಸಿಕ್ಕಿದಂತಾಗಿ ಇತರರಿಗಿಂತ ಆರೋಗ್ಯವಾಗಿರಲು ಮತ್ತು ಅವು ಸಣ್ಣ ಪುಟ್ಟ ಯಾವುದೇ ಕಾಯಿಲೆಗಳು ಬರದಂತೆ ನಿಮ್ಮ ಆರೋಗ್ಯ ರಕ್ಷಣೆ ಮಾಡಿಕೊಂಡು ಜೀವನ ಮಾಡಬಹುದು ಎಂದು ಆಹಾರ ತಜ್ಞರ ಜೊತೆಗೆ ಮನೆಯ ಮಂದಿ ಕೂಡ ಹೇಳುವುದುಂಟು.
ಪುಟ್ಟ ಮಕ್ಕಳಿಗೆ ಕುಡಿಯಲು ಬಾದಾಮಿ ಹಾಲು ಕೊಡುವುದು, ಅವರ ಆಹಾರಗಳಲ್ಲಿ ಗೋಡಂಬಿ ದ್ರಾಕ್ಷಿಗಳನ್ನು ಹಾಕಿ ರುಚಿ ರುಚಿಯಾದ ಆಹಾರ ಸೇವಿಸಲು ಕೊಡುವುದು ಇತ್ಯಾದಿಗಳನ್ನು ನೋಡಿದರೆ ಕೇವಲ ಇವುಗಳನ್ನು ರುಚಿಯ ಹೆಚ್ಚುವಿಕೆಗಾಗಿ ಮಾತ್ರ ಬಳಸುತ್ತಾರೆ ಎಂದುಕೊಂಡರೆ ಅದು ತಪ್ಪಾಗುತ್ತದೆ. ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಡ್ರೈಫ್ರೂಟ್ಸ್ ಗಳು ತುಂಬಾ ಆರೋಗ್ಯಕ್ಕೆ ಪ್ರಯೋಜನಕಾರಿ ಲಾಭಗಳನ್ನು ಒದಗಿಸಿಕೊಡುತ್ತವೆ. ಈ ಲೇಖನದಲ್ಲಿ ನಾವು ಡ್ರೈ ಫ್ರೂಟ್ಸ್ ನಿಂದ ನಮಗೆ ದೊರೆಯುವ ಆರೋಗ್ಯಕರ ಲಾಭಗಳ ಜೊತೆಗೆ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ.
ಸಾಮಾನ್ಯವಾಗಿ ಎಲ್ಲ ವಯಸ್ಸಿನವರಿಗೂ ಸೂಕ್ತವಾಗುವ ಡ್ರೈಫ್ರೂಟ್ಸ್ ಎಂದರೆ ಅದು ಬಾದಾಮಿ ಬೀಜಗಳು. ಏಕೆಂದರೆ ಮಕ್ಕಳ ವಯಸ್ಸಿನಿಂದ ವಯಸ್ಸಾದ ಮುದುಕರವರೆಗೂ ಅವರ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕ ಸತ್ವಗಳು ಬಾದಾಮಿ ಬೀಜಗಳಲ್ಲಿ ಸಿಗುತ್ತವೆ. ಇದರಲ್ಲಿರುವ ಸಾಕಷ್ಟು ಆರೋಗ್ಯ ಪ್ರಯೋಜನಗಳ ಕುರಿತಾದ ಮಾಹಿತಿ ಸರಿಯಾಗಿ ಇನ್ನು ಜನರಿಗೆ ತಿಳಿದಿಲ್ಲದಿರುವುದು ಬಾದಾಮಿ ಬೀಜಗಳ ಬಳಕೆ ವಿರಳ ಎಂದು ಹೇಳಬಹುದು. ಪುಟ್ಟ ಮಕ್ಕಳಿಗೆ ಇಡೀ ದಿನ ಚೈತನ್ಯದಿಂದ ಕೂಡಿರಲು ಒಂದು ಹಿಡಿ ಬಾದಾಮಿ ಬೀಜಗಳು ತುಂಬಾ ಸಹಾಯ ಮಾಡುತ್ತದೆ.
ಮುಖ್ಯವಾಗಿ ಮನುಷ್ಯನಿಗೆ ಆತ ಹುಟ್ಟಿದಾಗಿನಿಂದ ಸಾಯುವವರೆಗೂ ಆತನ ಹೃದಯ ಬಿಡುವಿಲ್ಲದೆ ಕೆಲಸ ಮಾಡುತ್ತಲೇ ಇರುತ್ತದೆ. ಇಂತಹ ನಿರಂತರ ಪ್ರಕ್ರಿಯೆಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಾಕಷ್ಟು ಅಂಶಗಳ ನೆರವು ಬೇಕಾಗುತ್ತದೆ. ಅವುಗಳಲ್ಲಿ ವಿಟಮಿನ್ ‘ ಇ ‘ ಅಂಶ ಕೂಡ ಒಂದು. ಏಕೆಂದರೆ ಇದು ಹೃದಯಕ್ಕೆ ತೊಂದರೆ ಕೊಡುವ ಕೊಲೆಸ್ಟ್ರಾಲ್ ಅಂಶವನ್ನು ತಡೆ ಹಿಡಿಯುತ್ತದೆ. ಇದರ ಜೊತೆಗೆ ಬಾದಾಮಿ ಬೀಜಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶಗಳು ಸಾಕಷ್ಟು ಲಭ್ಯವಿದ್ದು, ಮುಖ್ಯವಾಗಿ ದೇಹದ ರಕ್ತದ ಒತ್ತಡವನ್ನು ಸಹಜ ಸ್ಥಿತಿಗೆ ತರುವ ಹಾಗೂ ಹೃದಯದ ಕಾರ್ಯ ಚಟುವಟಿಕೆಯನ್ನು ನಿರಂತರವಾಗಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಇವುಗಳದ್ದು. ಆದ್ದರಿಂದ ಒಂದು ಹಿಡಿ ಬಾದಾಮಿ ಬೀಜಗಳನ್ನು ಪ್ರತಿ ದಿನ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಎರಡನೆಯದಾಗಿ ವಾಲ್ನಟ್, ಇವುಗಳಿಂದ ನಿಮ್ಮ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳನ್ನು ನೋಡುವುದಾದರೆ, ವಾಲ್ನಟ್ ಗಳಲ್ಲಿ ನಿಮ್ಮ ದೇಹದ ಮೆದುಳಿನಿಂದ ಎಲ್ಲಾ ಅಂಗಾಂಗಗಳಿಗೆ ಸಾಗಿರುವ ನರನಾಡಿಗಳನ್ನು ಆರೋಗ್ಯಭರಿತವಾಗಿಸುವ ಅಂಶಗಳಾದ ವಿಟಮಿನ್ ‘ ಇ ‘, ಒಮೆಗಾ 3 ಫ್ಯಾಟಿ ಆಸಿಡ್ ಮತ್ತು ಆಂಟಿ – ಆಕ್ಸಿಡೆಂಟ್ ಗಳು ಸಾಕಷ್ಟು ಲಭ್ಯವಿವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅರಿವಿನ ಸಾಮರ್ಥ್ಯವನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಒತ್ತಡವನ್ನು ಮತ್ತು ಆತಂಕವನ್ನು ದೂರ ಮಾಡಿ ಶಾಂತವಾಗಿರಲು ಪ್ರೇರೇಪಿಸುತ್ತದೆ. ಅಧ್ಯಯನಗಳ ಪ್ರಕಾರ ವಿಟಮಿನ್ ‘ ಇ ‘ ಮತ್ತು ಫ್ಲೇವೋನಾಯ್ಡ್ ಅಂಶಗಳು ವಾಲ್ನಟ್ ಗಳಲ್ಲಿ ಲಭ್ಯವಿರುವುದರಿಂದ ನಿಮ್ಮ ದೇಹದ ಫ್ರೀ ರಾಡಿಕಲ್ಸ್ ಗಳ ವಿರುದ್ಧ ಹೋರಾಡುವ ಮತ್ತು ಡೆಮೆನ್ಶಿಯಾ ಸಮಸ್ಯೆಯನ್ನು ದೂರ ಮಾಡುವ ಶಕ್ತಿ ಪಡೆದಿವೆ.
ಮೂರನೆಯದಾಗಿ ಖರ್ಜೂರ, ಇದರಲ್ಲಿ ಕಬ್ಬಿಣದಂಶ ಸಾಕಷ್ಟಿದೆ ಸಾಮಾನ್ಯವಾಗಿ ಮಳೆಗಾಲ ಶುರುವಾಗುತ್ತಿದ್ದಂತೆ ಖರ್ಜೂರಗಳು ಮಾರುಕಟ್ಟೆಗಳಲ್ಲಿ ಎಲ್ಲೆಂದರಲ್ಲಿ ಸಿಗುತ್ತವೆ. ತುಂಬಾ ಕಡಿಮೆ ಬೆಲೆಗೆ ಸಿಕ್ಕಂತಹ ಸಮಯದಲ್ಲಿ ನಿಮಗೆ ಬೇಕಾದಷ್ಟು ಒಣ ಖರ್ಜೂರವನ್ನು ತಂದು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಖರ್ಜೂರ ಗಳಿಂದ ನಿಮ್ಮ ದೇಹಕ್ಕೆ ಆಗುವ ಉಪಯೋಗಗಳನ್ನು ನೋಡುವುದಾದರೆ, ಖರ್ಜೂರ ಗಳಲ್ಲಿ ಯಥೇಚ್ಛವಾದ ಕಬ್ಬಿಣದ ಅಂಶವಿದ್ದು ಅನಿಮಿಯಾ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಇದು ಹೇಳಿ ಮಾಡಿಸಿದ ಆಹಾರ.
ನಿಮಗೆ ಒಂದು ವೇಳೆ ಅನೀಮಿಯಾದ ರೋಗ ಲಕ್ಷಣಗಳು ಕಂಡು ಬಂದರೆ ನೀವು ಯಾವ ವೈದ್ಯರ ಬಳಿಗೆ ಹೋಗುವ ಅವಶ್ಯಕತೆ ಇಲ್ಲ. ಪ್ರತಿ ದಿನ ಖರ್ಜೂರವನ್ನು ತಿನ್ನುತ್ತಾ ಬನ್ನಿ. ಇಲ್ಲವೆಂದರೆ ನಿಮ್ಮ ಆಹಾರ ಪದಾರ್ಥಗಳಲ್ಲಿ ಖರ್ಜೂರವನ್ನು ಮಿಶ್ರಣ ಮಾಡಿ ಆಹಾರ ತಯಾರು ಮಾಡಿ ಸೇವನೆ ಮಾಡಿ. ಖರ್ಜೂರದಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶವಿದ್ದು ( ಗ್ಲೂಕೋಸ್, ಪ್ರಕ್ಟೋಸ್ ಮತ್ತು ಸುಕ್ರೋಸ್ ) ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಾಗಿಸಲು ಕರ್ಜೂರ ಸಹಾಯ ಮಾಡಬಲ್ಲದು. ಇದ್ದಕ್ಕಿದ್ದಂತೆ ನಿಮ್ಮ ಸುಸ್ತನ್ನು ಹೋಗಲಾಡಿಸಿ ನಿಮ್ಮ ದೇಹಕ್ಕೆ ಪುನಶ್ಚೇತನ ಒದಗಿಸುತ್ತದೆ.
ಇನ್ನೂ ಅಂಜೂರದ ಹಣ್ಣುಗಳು, ಇದನ್ನು ನೆನೆಸಿಟ್ಟು ಸೇವನೆ ಮಾಡಬಹುದು ಅಥವಾ ಈ ಅಂಜೂರದ ಹಣ್ಣನ್ನು ಊಟಕ್ಕೂ ಮೊದಲು ಸೇವನೆ ಮಾಡುವುದರಿಂದ ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. ಅಂಜೂರದ ಹಣ್ಣನ್ನು ಚಿಕ್ಕಮಕ್ಕಳು ಸೇವಿಸಬಹುದು ಪ್ರತಿದಿನ ಊಟಕ್ಕೂ ಮೊದಲು ಈ ಅಂಜೂರದ ಹಣ್ಣಿನ ಸೇವನೆ ಮಾಡುವುದರಿಂದ ಇದರಲ್ಲಿ ಇರುವಂತಹ ಹೇರಳವಾದ ಫೈಬರ್ ಅಂಶ ಅಂದರೆ ನಾರಿನ ಅಂಶವು ಆಹಾರವನ್ನು ಸರಿಯಾಗಿ ಜೀರ್ಣ ಆಗುವಂತೆ ಮಾಡುತ್ತದೆ ಮತ್ತು ಅಂಜೂರದ ಹಣ್ಣನ್ನು ಸೇವನೆ ಮಾಡುವುದರಿಂದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ.
ಕರುಳನ್ನು ಶುದ್ದೀಕರಿಸುತ್ತದೆ ಮತ್ತು ಮಲಬದ್ಧತೆ ಮೂಲವ್ಯಾಧಿ ಯನ್ನು ನಿವಾರಿಸಿಕೊಳ್ಳಬಹುದು, ಇದಕ್ಕಾಗಿ ತಪ್ಪದೆ ಅಂಜೂರದ ಹಣ್ಣನ್ನು ಸೇವನೆ ಮಾಡಿ.ಮಧುಮೇಹಿಗಳಿಗೆ ಅಂಜೂರದ ಹಣ್ಣು ಉತ್ತಮ ಯಾಕೆಂದರೆ ಇದರಲ್ಲಿ ಇರುವಂತಹ ಉತ್ತಮವಾದ ಪೋಷಕಾಂಶಗಳು ನಾರಿನ ಅಂಶವು ರಕ್ತದಲ್ಲಿ ಸಕ್ಕರೆ ಅಂಶವನ್ನು ವೇಗವಾಗಿ ಹೆಚ್ಚು ಮಾಡುವುದಿಲ್ಲ ಮತ್ತು ಊಟದ ಎರಡೇ ಎರಡು ಅಂಜೂರದ ಹಣ್ಣನ್ನು ಸೇವನೆ ಮಾಡಿ, ನಂತರ ಊಟ ಮಾಡುವುದರಿಂದ ಇದು ಆಹಾರವನ್ನು ಜೀರ್ಣಗೊಳಿಸುವುದಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಒಣ ದ್ರಾಕ್ಷಿ, ಮುಖ್ಯವಾಗಿ ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಇನ್ನು ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಗಬೇಕೆಂದರೆ, ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಕು , ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವಂತಹ ಒಣದ್ರಾಕ್ಷಿಯು ನಿಮ್ಮಲ್ಲಿ ಚುರುಕುತನ ಮತ್ತು ಶಕ್ತಿ ತುಂಬಿರುವಂತೆ ಮಾಡುವುದು.
ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿನಾಂಶ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿಡುತ್ತದೆ. ನೀವು ಬೊಜ್ಜು ದೇಹವನ್ನು ಹೊಂದಿದ್ದರೆ, ಎಲ್ಲಾ ರೀತಿಯ ಶ್ರಮ ವಹಿಸಿಯೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಗ ನೀವು ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ ಮತ್ತು ಇದು ಬಯಕೆ ಕಡಿಮೆ ಮಾಡಿ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಯಾಗದಂತೆ ತಡೆಯುವುದು. ಆದರೆ ನೀವು ಇದನ್ನು ಅತಿಯಾಗಿ ಸೇವಿಸಬೇಡಿ ಮತ್ತು ತಜ್ಞರು ಹೇಳಿದಷ್ಟೇ ಸೇವಿಸಿ. ತೂಕ ಇಳಿಸಿಕೊಳ್ಳಬೇಕಾದರೆ ನೀವು ಒಣ ದ್ರಾಕ್ಷಿ ತಿಂದರೆ ಆಗ ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು.
ಇನ್ನೂ ಇಷ್ಟೆಲ್ಲಾ ಲಾಭವಿರುವ ಡ್ರೈ ಫ್ರೂಟ್ಸ್ ಗಳ ಮಿಲ್ಕ್ ಶೇಕ್ ಹೇಗೆ ಮಾಡುವುದು ಎಂದು ನೋಡುವುದಾದರೆ, ಇದು ತುಂಬಾ ಸುಲಭ ಹಾಗೂ ರುಚಿಕರವಾದದ್ದು. ಅಂಜೂರ, ಒಣ ದ್ರಾಕ್ಷಿ , ಬಾದಾಮ್, ಪಿಸ್ತಾ ಗೋಡಂಬಿ, ಖರ್ಜೂರ ಈ ಎಲ್ಲಾ ಡ್ರೈ ಫ್ರೂಟ್ಸ್ ಗಳನ್ನು ರಾತ್ರಿ ಇಡೀ ನೆನೆಸಿಟ್ಟು ಅಥವಾ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟು ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಒಮ್ಮೆ ರುಬ್ಬಿಕೊಂಡು ನಂತರ ಅದಕ್ಕೆ ಒಂದು ಲೋಟದಷ್ಟು ಹಾಲನ್ನು ಮತ್ತು ಒಂದೆರಡು ಚಮಚ ಜೇನುತಪ್ಪವನ್ನು ಹಾಕಿ ರುಬ್ಬಿಕೊಳ್ಳಬೇಕು. ಅದಾದ ನಂತರ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಸರ್ವಿಂಗ್ ಗ್ಲಾಸ್ ಗೆ ಹಾಕಿ ಮೇಲಿನಿಂದ ಡ್ರೈ ಫ್ರೂಟ್ಸ್ ಅಲಂಕಾರ ಮಾಡಿ ಸೇವಿಸಬಹುದು.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430