ಡ್ರೈ ನಟ್ಸ್ ಗಳು ನಮ್ಮ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಡ್ರೈ ಫ್ರೂಟ್ಸ್ ಎಂದರೆ ಒಣಗಿರುವ ಹಣ್ಣುಗಳು ಮತ್ತು ಹಣ್ಣಿನ ಬೀಜಗಳು. ಅವುಗಳೆಂದರೆ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ವಾಲ್ ನಟ್, ಅಂಜೂರ ಮುಂತಾದವುಗಳು ಈ ಒಣಹಣ್ಣುಗಳ ಬೆಲೆ ಅತ್ಯಂತ ದುಬಾರಿಯೂ ಹೌದು ಇವುಗಳ ಸೇವನೆಯ ಸರಿಯಾದ ಕ್ರಮವನ್ನು ತಿಳಿಯದೇ ಬೇಕಾಬಿಟ್ಟಿ ಸೇವಿಸಿದರೆ ಅದರಿಂದ ನಮ್ಮ ದೇಹಕ್ಕೆ ಯಾವ ಪ್ರಯೋಜನವಾಗದು. ಡ್ರೈ ಫ್ರೂಟ್ಸ್ ಅನ್ನು ಸರಿಯಾದ ಕ್ರಮದಲ್ಲಿ ಸೇವಿಸುವುದರಿಂದ ಅದರಲ್ಲಿನ ಹಲವಾರು ಪೋಷಕಾಂಶಗಳು ನಮ್ಮ ದೇಹದ ಆರೋಗ್ಯಕ್ಕೆ ಸಹಾಯಕವಾಗಿದೆ. ಈ ಒಣಹಣ್ಣುಗಳನ್ನು ಹೇಗೆ ಸೇವನೆ ಮಾಡಬೇಕು, ಇದರ ನಿಯಮಿತ ಸೇವನೆಯಿಂದ ನಮ್ಮ ದೇಹಕ್ಕಾಗುವ ಲಾಭಗಳೇನು ಎಂಬುದನ್ನ ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಡ್ರೈ ನಟ್ಸ್ ನಲ್ಲಿ ನಮ್ಮ ದೇಹಕ್ಕೆ ಉಪಯುಕ್ತವಾದ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಪ್ರೊಟೀನ್, ಫೈಬರ್ ಮತ್ತು ವಿಟಮಿನ್ ಪೋಷಕತತ್ವಗಳು ಹೇರಳವಾಗಿ ದೊರೆಯುತ್ತದೆ. ಈ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ. ಇದನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

ಡ್ರೈ ಫ್ರೂಟ್ಸ್ ಸೇವನೆಯ ಕ್ರಮ ಎರಡು ವಾಲ್ ನಟ್, ಆರು ಬಾದಾಮಿ, ಆರು ಗೋಡಂಬಿ, ಎರಡು ಅಂಜೂರ, ಹದಿನೈದು ಒಣದ್ರಾಕ್ಷಿ ಇವೆಲ್ಲವುಗಳನ್ನು ರಾತ್ರಿ ವೇಳೆ ನೆನೆ ಹಾಕಿ ಪ್ರತಿದಿನ ಮುಂಜಾನೆ ಬಾದಾಮಿ ಸಿಪ್ಪೆ ತೆಗೆದು ಉಳಿದವುಗಳನ್ನೆಲ್ಲ ಹಾಗೆ ತಿನ್ನ ಬಹುದು. ಎಲ್ಲವನ್ನೂ ಚೆನ್ನಾಗಿ ಅಗಿದು ಅಗಿದು ತಿನ್ನುವುದರಿಂದ ನಮ್ಮ ದೇಹಕ್ಕೆ ಪ್ರಯೋಜನವಾಗುತ್ತದೆ. ಒಂದು ವೇಳೆ ಅಗಿದು ತಿನ್ನಲೂ ಸಾಧ್ಯವಾಗದವರು ಇದನ್ನು ಜ್ಯೂಸ್ ಮಾಡಿ ಸಹ ಸೇವಿಸಬಹುದು. ಈ ಒಣ ಹಣ್ಣುಗಳನ್ನು ನೆನೆಸುವಾಗ ಚೆನ್ನಾಗಿ ತೊಳೆದು ನೆನೆಸಬೇಕು ಬೆಳಿಗ್ಗೆ ಜ್ಯೂಸ್ ಮಾಡಲು ಅದೇ ನೀರನ್ನು ಬಳಸಬೇಕು ಹೀಗೆ ಸೇವಿಸುವುದು ಸಹ ದೇಹದ ಆರೋಗ್ಯಕ್ಕೆ ಸಹಾಯಕವಾಗಿದೆ.

ಒಣ ಹಣ್ಣುಗಳ ನಿಯಮಿತ ಪ್ರಮಾಣದಲ್ಲಿ ಪ್ರತಿದಿನ ಸೇವಿಸುವುದರಿಂದ ನಮ್ಮ ಜೀರ್ಣಾಂಗವ್ಯವಸ್ಥೆಯಲ್ಲಿನ ದೇಹಕ್ಕೆ ಅನಾನುಕೂಲ ಮಾಡುವ ಕೆಟ್ಟ ಬ್ಯಾಕ್ಟೀರಿಯಗಳು ನಾಶಹೊಂದಿ ದೇಹದ ಆರೋಗ್ಯಕ್ಕೆ ಉಪಯುಕ್ತವಾದ ಬ್ಯಾಕ್ಟೀರಿಯಗಳು ಕ್ರಿಯಾಶೀಲವಾಗುತ್ತವೆ. ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು, ಜೀವಸತ್ವಗಳು ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಇದರಿಂದ ಶರೀರದ ಕಲ್ಮಶಗಳು ದೂರವಾಗಿ ಪರಿಶುದ್ಧ ಆರೋಗ್ಯಕರ ದೇಹ ನಮ್ಮದಾಗುತ್ತದೆ. ರಕ್ತದೊತ್ತಡ, ಕಬ್ಬಿಣದ ಕೊರತೆ, ದೃಷ್ಟಿದೋಷ, ಹೃದಯ ಸಂಬಂಧಿ ಕಾಯಿಲೆ, ಅಲರ್ಜಿ, ಕೂದಲು ಉದುರುವುದು, ಅಸಿಡಿಟಿ, ಗ್ಯಾಸ್ಟ್ರಿಕ್, ಮಲಬದ್ಧತೆ ಮುಂತಾದವುಗಳನ್ನ ಸಹ ಇದರ ನಿಯಮಿತ ಸೇವನೆಯಿಂದ ನಿಯಂತ್ರಿಸಬಹುದು.

ಮಾರುಕಟ್ಟೆಗಳಲ್ಲಿ ಈ ಡ್ರೈ ನಟ್ಸ್ ಬೆಲೆ ಅತ್ಯಂತ ದುಬಾರಿ ಇದ್ದು ಇವುಗಳ ಖರೀದಿ ಮತ್ತು ನಿಯಮಿತ ಸೇವನೆ ಸಾಧ್ಯವಾಗದಿದ್ದಲ್ಲಿ ಅಂತವರು ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡ್ಲೆ ಬೀಜ ಅಥವಾ ಶೇಂಗಾಬೀಜವನ್ನು ರಾತ್ರಿ ನೆನೆ ಹಾಕಿ ಮುಂಜಾನೆ ಬೆಲ್ಲದೊಂದಿಗೆ ಸೇವಿಸುವುದರಿಂದ ಡ್ರೈ ಫ್ರೂಟ್ಸ್ ಗಳ ಸೇವನೆಯಿಂದ ಪಡೆಯುವ ಲಾಭವನ್ನೇ ಪಡೆಯಬಹುದು.

ಒಟ್ಟಿನಲ್ಲಿ ಆರೋಗ್ಯಕರ ಜೀವನಶೈಲಿಯಿಂದ ಮಾತ್ರ ನಾವು ನೆಮ್ಮದಿಯಾಗಿ ದೀರ್ಘಕಾಲ ಬದುಕಲು ಸಾಧ್ಯ. ಪ್ರತಿಯೊಂದು ಸಮಸ್ಯೆಗೂ ಆಸ್ಪತ್ರೆ ಇಂಗ್ಲೀಷ್ ಮೆಡಿಸಿನ್ ಅವಲಂಬಿಸದೆ ಇಂತಹ ಡ್ರೈ ಫ್ರೂಟ್ಸ್ ಗಳ್ಳನ್ನ ಸರಿಯಾದ ಕ್ರಮದಲ್ಲಿ ಸೇವಿಸುವುದರಿಂದ ಉತ್ತಮ ಆರೋಗ್ಯ, ದೀರ್ಘ ಆಯುಷ್ಯ, ಸುಖ ಸಂತೋಷದ ಜೀವನ ನಮ್ಮದಾಗುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಉತ್ತಮ ಆರೋಗ್ಯ ನಮ್ಮದಾದರೆ ಎಂತಹ ಸಾಧನೆಯನ್ನಾದರೂ ನಾವು ಮಾಡಬಹುದು.

Leave a Reply

Your email address will not be published. Required fields are marked *