ನಿಸರ್ಗದತ್ತವಾಗಿರುವಂತಹ ಕೆಲವು ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹವು ಫಿಟ್ ಆಗಿರುತ್ತದೆ. ಮುಖ್ಯವಾಗಿ ನಾವು ಸಿಹಿ ತಿನಿಸುಗಳು ಹಾಗೂ ಇತರ ಕೆಲವೊಂದು ಖಾದ್ಯಗಳು ಹಾಗೂ ಐಸ್ ಕ್ರಿಮ್ ಗಳಲ್ಲಿ ಬಳಸುವಂತಹ ಒಣ ದ್ರಾಕ್ಷಿಯು ನಮ್ಮ ಆರೋಗ್ಯಕ್ಕೆ ಅತೀ ಉತ್ತಮ. ದ್ರಾಕ್ಷಿ ಹಣ್ಣುಗಳು ಎಲ್ಲಾ ವಯಸ್ಸಿನ ಜನರು ಇಷ್ಟಪಟ್ಟು ತಿನ್ನುವ ಸಿಹಿ ಹಣ್ಣು. ಒಣದ್ರಾಕ್ಷಿಯು ಒಂದು ಜನಪ್ರಿಯ ಡ್ರೈ ಫ್ರೂಟ್ ಆಗಿದ್ದು, ಆಹಾರಗಳನ್ನು ಸಿಹಿಗೊಳಿಸಲು ಅಥವಾ ಅನೇಕ ವೇಳೆ ಸಿಹಿಯನ್ನು ನೀಡಲು ಡೆಸರ್ಟ್ಗಳಿಗೆ ಬಳಸಲಾಗುತ್ತದೆ. ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಅಂಶಗಳನ್ನು ಒದಗಿಸುವ ಒಣ ದ್ರಾಕ್ಷಿಯ ಬಗ್ಗೆ ಯಾರು ಯಾವಾಗ ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು? ಎನ್ನುವುದರ ಕುರಿತಾಗಿ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮುಖ್ಯವಾಗಿ ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶ ಆಗಾಧ ಪ್ರಮಾಣದಲ್ಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಇನ್ನು ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಿಗಬೇಕೆಂದರೆ ನಾವು ಪ್ರತಿದಿನ ಮಲಗುವ ಮುನ್ನ ನಾಲ್ಕರಿಂದ ಐದು ಒಣದ್ರಾಕ್ಷಿಯನ್ನು ರಾತ್ರಿ ಅರ್ಧ ಕಪ್ ನೀರಿನಲ್ಲಿ ನೆನಸಿಟ್ಟು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದರಿಂದ ನೈಸರ್ಗಿಕ ಸಕ್ಕರೆ ಅಂಶವನ್ನು ಒಳಗೊಂಡಿರುವಂತಹ ಒಣದ್ರಾಕ್ಷಿಯು ನಮ್ಮಲ್ಲಿ ಚುರುಕುತನ ಮತ್ತು ಶಕ್ತಿ ತುಂಬಿರುವಂತೆ ಮಾಡುತ್ತದೆ. ಒಣದ್ರಾಕ್ಷಿಯಲ್ಲಿ ಉನ್ನತ ಮಟ್ಟದ ಕಬ್ಬಿಣ ಅಂಶ, ಪೊಟಾಶಿಯಂ ಮತ್ತು ಕ್ಯಾಲ್ಸಿಯಂ ಇದ್ದು, ನಿಮ್ಮನ್ನು ದೈಹಿಕ ಹಾಗೂ ಮಾನಸಿಕವಾಗಿ ಫಿಟ್ ಆಗಿ ಇಡುತ್ತದೆ. ಅಷ್ಟೇ ಅಲ್ಲದೇ ಬೊಜ್ಜು ದೇಹವನ್ನು ಹೊಂದಿದ್ದರೆ ಅಂತಹ ವ್ಯಕ್ತಿಗಳಿಗೆ ಎಲ್ಲಾ ರೀತಿಯ ಶ್ರಮ ವಹಿಸಿಯೂ ತೂಕ ಇಳಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಆಗ ನೆನೆಸಿರುವ ಒಣ ದ್ರಾಕ್ಷಿ ಸೇವಿಸಬೇಕು. ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದೆ ಮತ್ತು ಇದು ಏನಾದರೂ ತಿನ್ನಬೇಕು ಎಂಬ ಬಯಕೆಯನ್ನು ಕಡಿಮೆ ಮಾಡಿ ಹೆಚ್ಚುವರಿ ಕ್ಯಾಲರಿ ಸೇರ್ಪಡೆ ಯಾಗದಂತೆ ತಡೆಯುವುದು. ತೂಕ ಇಳಿಸಿಕೊಳ್ಳಬೇಕಾದರೆ ನೀವು ಒಣ ದ್ರಾಕ್ಷಿ ತಿಂದರೆ ಆಗ ದೀರ್ಘ ಕಾಲದ ತನಕ ಹೊಟ್ಟೆಯು ತುಂಬಿದಂತೆ ಇರುವುದು. ಆದರೆ ಇದನ್ನು ಅತಿಯಾಗಿ ಕೂಡಾ ಸೇವನೆ ಮಾಡಬಾರದು ಇದನ್ನು ತಜ್ಞರು ಹೇಳಿದಷ್ಟೇ ಪ್ರಮಾಣದಲ್ಲಿ ಸೇವಿಸಬೇಕು.

ನಮ್ಮ ದೇಹದ ರಕ್ತ ಶುದ್ಧೀಕರಣಕ್ಕೆ ಹೇಳಿ ಮಾಡಿಸಿದ ದಿವ್ಯ ಔಷಧ ಎಂದರೆ ಅದು ಒಣದ್ರಾಕ್ಷಿ. ದ್ರಾಕ್ಷಿ ಇದು ಶೀತ ದ್ರವ್ಯ ಆಗಿದ್ದು ನಮ್ಮ ದೇಹದಲ್ಲಿ ಕಫವನ್ನು ಉತ್ಪತ್ತಿ ಮಾಡುತ್ತದೆ ಎನ್ನುವುದನ್ನು ಸಹ ನಾವು ಮರೆಯುವ ಹಾಗೆ ಇಲ್ಲ. ದೇಹದಲ್ಲಿ ಉಷ್ಣ ಪ್ರಕೃತಿ ಹೆಚ್ಚು ಇದ್ದವರು , ರಕ್ತದ ಶುದ್ಧೀಕರಣಕ್ಕೆ ಒಣದ್ರಾಕ್ಷಿ ಬಹಳಷ್ಟು ಸಹಾಯಕಾರಿ. ಹಾಗೆಯೇ ಪುರುಷರ ಗುಪ್ತಾಂಗಗಳ ಸಮಸ್ಯೆ ಇದ್ದರೆ ಅವುಗಳ ನಿವಾರಣೆಗೆ ಕೂಡಾ ಒಣ ದ್ರಾಕ್ಷಿ ಸಹಾಯಕಾರಿ. ಪುರುಷರಿಗೆ ಗುಪ್ತಾಂಗಗಳು ತಾಯಿಯ ಗರ್ಭದಲ್ಲಿ ಇದ್ದಾಗ ಮಾತ್ರ ಹೊಟ್ಟೆಯ ಒಳಗೆ ಇರುತ್ತದೆ ಹೊರತು ತಾಯಿಯ ಗರ್ಭದಿಂದ ಹೊರಗೆ ಬಂದ ಮೇಲೆ ಈ ಗುಪ್ತಾಂಗಗಳು ಹೊರಗೇ ಇರುತ್ತವೆ. ಈ ಗುಪ್ತಾಂಗಗಳು ಉಷ್ಣವಾಗಿ ಇರಬಾರದು ಇದರಿಂದ ವೀರ್ಯ ಉತ್ಪತ್ತಿ ಆಗಲು ಸಮಸ್ಯೆ ಉದ್ಭವ ಆಗುತ್ತದೆ. ಗುಪ್ತಾಂಗಗಳು ಉಷ್ಣವನ್ನು ಸಹಿಸುವುದಿಲ್ಲ ಇದಕ್ಕೆ ದೇಹ ತಂಪಾಗಿ ಇರಬೇಕು. ಪುರುಷರ ದೇಹ ರಚನೆಯಲ್ಲಿ ದೇಹದ ಒಳಗಡೆ ಅತೀ ಉಷ್ಣ ಇರುವ ಕಾರಣಕ್ಕೆ ಈ ಗುಪ್ತಾಂಗವನ್ನು ದೇಹದ ಹೊರಗೆ ರಚನೆ ಮಾಡಲಾಗಿದೆ. ಈಗಿನ ಕಾಲದಲ್ಲಿ ಧರಿಸುವ ಜೀನ್ಸ್, ಬಿಗಿಯಾದ ವಸ್ತ್ರಗಳು ಇದರಿಂದ ಗುಪ್ತಾಂಗ ದೇಹಕ್ಕೆ ತಾಗಿದಾಗ ಉಷ್ಣ ಹೆಚ್ಚಾಗಿ ವೀರ್ಯ ಉತ್ಪತ್ತಿ ಕಡಿಮೆ ಆಗುತ್ತದೆ. ಅದಕ್ಕಾಗಿ ಪ್ರತೀ ದಿನ ಹತ್ತು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ತಿಂದು ಅದೇ ನೀರು ಕುಡಿಯುವುದರಿಂದ ದೇಹ ತಂಪಾಗಿ ಇರುವುದು ಮಾತ್ರವಲ್ಲದೆ ಉತ್ತಮ ವೀರ್ಯ ಉತ್ಪತ್ತಿಗೆ ಸಹಾಯಕಾರಿ ಆಗುತ್ತದೆ.

ಇನ್ನು ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ರಕ್ತದ ಕೊರತೆ ಹೆಚ್ಚಾಗಿ ಇರುವುದರಿಂದ ಮಹಿಳೆಯರಿಗೂ ಸಹ ಇದರ ಸೇವನೆ ಉತ್ತಮ. ಪ್ರತೀ ದಿನ ರಾತ್ರಿ ಹತ್ತರಿಂದ ಹದಿನೈದು ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ತಿನ್ನುವುದರಿಂದ ರಕ್ತದ ಕೊರತೆ ಉಂಟಾಗುವುದಿಲ್ಲ. ಇನ್ನು ಸಾಮಾನ್ಯವಾಗಿ ಮಕ್ಕಳು ವೃದ್ಧರು ಸಹ ಇದನ್ನು ಉಪಯೋಗಿಸಬಹುದು. ಆದರೆ ಯಾರಿಗೆ ಕಫ ಹಾಗೂ ಅದಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆಯೋ ಅಂತಹ ವ್ಯಕ್ತಿಗಳು ಇದನ್ನು ಬಳಸಬಾರದು. ಹಾಗಂತ ಬಳಸಲೇ ಬಾರದು ಅಂತಲ್ಲ ಶೀತ ಪ್ರಕೃತಿ ಇರುವ ಜನರು ಬೆಳಗ್ಗಿನ ಸಮಯ ಬಿಟ್ಟು ಮಧ್ಯಾಹ್ನದ ಸಮಯದಲ್ಲಿ ದ್ರಾಕ್ಷಿ ಸೇವಿಸುವುದು ಉತ್ತಮ ಹಾಗೆ ಮಳೆಗಾಲದಲ್ಲಿ ಕೂಡಾ ಇವರು ದ್ರಾಕ್ಷಿ ಸೇವಿಸಬಾರದು. ನಮ್ಮ ದೇಹಕ್ಕೆ ಇನ್ನೂ ಹತ್ತು ಹಲವಾರು ಪ್ರಯೋಜನಗಳು ಒಣದ್ರಾಕ್ಷಿಯ ಸೇವನೆಯಿಂದ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!