ಧ್ರುವ ಸರ್ಜಾ ಸರ್ಜಾ ಕುಟುಂಬದ ಒಂದು ಕುಡಿ ಆಗಿದ್ದಾರೆ. ಇವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಆಗಿದ್ದರು. ಆದರೆ ಈಗ ಅವರು ಇಲ್ಲ. ಇವರಿಬ್ಬರೂ ಬಹಳ ಅನ್ಯೋನ್ಯವಾಗಿ ಇದ್ದರು. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದಾರೆ. ಆದರೆ ಈಗ ಅವರಿಗೆ ಸ್ವಲ್ಪ ಸಂತೋಷವಿದೆ. ಅದೇನೆಂದರೆ ಚಿರಂಜೀವಿ ಸರ್ಜಾರ ಪುತ್ರ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಜನಿಸಿದ್ದಾರೆ. ಆದರೆ ಇಲ್ಲಿ ನಾವು ಧ್ರುವ ಸರ್ಜಾ ಅವರು ತಮ್ಮ ಪತ್ನಿಯ ಜೊತೆ ಗೋವಾಕ್ಕೆ ಹೋದಾಗ ಚಿರು ಪುತ್ರನಿಗೆ ತಂದ ಉಡುಗೊರೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈಗ ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಸರ್ಜಾ ಅವರು ತೀರಿ ಹೋದರು. ಆಗ ಮೇಘನಾ ರಾಜ್ ಅವರು 6ತಿಂಗಳ ಪ್ರಗ್ನೆಂಟ್ ಇದ್ದರು. ಈಗ ಅವರಿಗೆ ಗಂಡು ಮಗು ಹುಟ್ಟಿದೆ. ಚಿರಂಜೀವಿ ಸರ್ಜಾ ಅವರೇ ವಾಪಸ್ ಬಂದಂತೆ ಆಗಿದೆ. ಚಿರಂಜೀವಿ ಅವರು ಧ್ರುವ ಸರ್ಜಾ ಅವರ ಅತ್ಯಂತ ಪ್ರೀತಿಯ ಸಹೋದರ ಆಗಿದ್ದಾರೆ. ಅವರನ್ನು ಕಳೆದುಕೊಂಡು ಬಹಳ ನೋವನ್ನು ಅನುಭವಿಸಿದ್ದಾರೆ. ಧ್ರುವಸರ್ಜಾ ಅವರು ಅವರ ಪುತ್ರನನ್ನು ಬಹಳ ಪ್ರೀತಿ ಮಾಡುತ್ತಾರೆ. ತಮ್ಮ ಸ್ವಂತ ಪುತ್ರನಂತೆ ನೋಡಿಕೊಳ್ಳುತ್ತಾರೆ.

ಧ್ರುವ ಸರ್ಜಾ ಇವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಒಂದು ಅಮೋಘವಾದ ನಟನೆಯಿಂದ 2012ರಲ್ಲಿ ಒಂದು ಸಿನೆಮಾದಲ್ಲಿ ಕಾಣಿಸಿಕೊಂಡರು. ಹಾಗೆಯೇ ಇವರು ಅರ್ಜುನ್ ಸರ್ಜಾ ಅವರ ಅಕ್ಕನ ಮಗನಾಗಿದ್ದಾರೆ. ಧ್ರುವ ಸರ್ಜಾ ಅವರು ಪ್ರೇರಣಾ ಎನ್ನುವವರನ್ನು ವಿವಾಹವಾಗಿದ್ದಾರೆ. ಈಗ ಸ್ವಲ್ಪ ದಿನಗಳ ಹಿಂದೆ ಪ್ರೇರಣಾ ಅವರ ಹುಟ್ಟುಹಬ್ಬ ಇತ್ತು. ಧ್ರುವ ಸರ್ಜಾ ಅವರು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಿದರು.

ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣಾ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿಂದ ತನ್ನ ಪ್ರೀತಿಯ ಸಹೋದರರಾದ ಚಿರು ಅವರ ಪುತ್ರನಿಗೆ ವಿಶೇಷವಾದ ಉಡುಗೊರೆಯನ್ನು ತಂದಿದ್ದಾರೆ. ಅದೇನೆಂದರೆ ಮಕ್ಕಳು ಆಡುವ ಆಟಿಕೆ ಸಾಮಾನುಗಳು. ಇದರಲ್ಲಿ ಬಣ್ಣಬಣ್ಣದ ಆಟಿಕೆ ಸಾಮಾನುಗಳು ಇವೆ. ಹಾಗೆಯೇ ಅವರ ನಾಮಕರಣವನ್ನು ಧ್ರುವ ಸರ್ಜಾ ಅವರು ತಮ್ಮ ಮನೆಯಲ್ಲಿ ಮಾಡಬೇಕೆಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಬಹಳ ವಿಜೃಂಭಣೆಯಿಂದ ನಾಮಕರಣ ಮಾಡಬೇಕು ಎಂದುಕೊಂಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!