ಕೇಂದ್ರ ಸರ್ಕಾರದಿಂದ (Central Govt) ವಾಹನ ಚಾಲಕರಿಗೆ ಇದೀಗ ಮಹತ್ವದ ಯೋಜನೆಯೊಂದು ಜಾರಿಯಾಗಿದ್ದು ವಾಹನ ನೋಂದಣಿ (Vehicle registration) ಪ್ರಮಾಣ ಪತ್ರದ ನಕಲಿ ಕಾರ್ಡ್ ಗಳು ಇರುವ ಉದ್ದೇಶದಿಂದ ಚಿಪ್ ಆಧಾರಿತ ಆರ್.ಸಿ. ಸ್ಮಾರ್ಟ್ ಕಾರ್ಡ್ (RC Smart card) ಪದ್ಧತಿ ಮರುಜರಿಗೆ ತೀರ್ಮಾನ ಕೈಗೊಂಡಿದೆ.
ವಾಹನ ನೋಂದಣಿ (Vehicle registration) ಯಾದ ದಿನಾಂಕ, RC. ನಂಬರ್, ವಾಹನದ ಕಂಪನಿ, ಬಣ್ಣ ಮತ್ತು ಮಾಡೆಲ್, ಟ್ಯಾಕ್ಸ್ ಪಾವತಿ, ವಾಹನ ತಯಾರಿಸಿದ ದಿನಾಂಕ, ಮಾಲೀಕರ ಹೆಸರು ವಿಳಾಸ ಸೇರಿದಂತೆ ಇನ್ನಿತರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಕಾರ್ಡ್ ಮೇಲೆ ಇರುತ್ತವೆ. ರಾಜ್ಯದ ಎಲ್ಲಾ ಆರ್.ಟಿ. ಓ. ಕಚೇರಿಗಳಲ್ಲಿ ವಿತರಿಸುವ ಕಾರ್ಡ್ ಗಳಿಗೆ ಈ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ವಯಿಸಲು ಸೂಚಿಸಿದ್ದು ತಕ್ಷಣದಿಂದಲೇ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ.
ಈ ಮೊದಲು ಚಿಪ್ ಆಧಾರಿತ ಆರ್.ಸಿ. ಕಾರ್ಡಿಗೆ, ಕರ್ನಾಟಕ ಮೋಟಾರು ವಾಹನ ನಿಯಮಕ್ಕೆ ತಿದ್ದುಪಡಿ ತಂದು ಹೊಸ ವಾಹನಗಳಿಗೆ ಡೀಲರ್ ಮಟ್ಟದಲ್ಲಿ ಎಲೆಕ್ಟ್ರಾನಿಕ್ಸ್ ಅಥವಾ ಆನ್ಲೈನ್ ಮೂಲಕ ಆರ್ ಸಿ ವಿತರಿಸಲು 2021ರ ಆಗಸ್ಟ್ 31 ರಂದು ಸಾರಿಗೆ ಇಲಾಖೆ ಆದೇಶಿಸಿತ್ತು. ಈ ಮೊದಲು ಮಾರ್ಕರ್ ಬದಲು ಪೇಪರ್ ಜೆರಾಕ್ಸ್ ಮಾಡುತ್ತಿದ್ದು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಸ್ಮಾರ್ಟ್ ಕಾರ್ಡ್ ವಿತರಣೆ ಜಾರಿಯಾಗಿತ್ತು. ಆದರೆ ಚಿಪ್ ಆಧಾರಿತ ಕಾರ್ಡುಗಳನ್ನು ಕೊಡುತ್ತಿರಲಿಲ್ಲ.
ಆರ್ಸಿ ಕಾರ್ಡ್ ಮೇಲಿನ ವಿವರಗಳನ್ನು ತಿರುಚುವುದು ಮತ್ತು ದುರ್ಬಳಕೆ ಮಾಡಿಕೊಂಡು ನಕಲಿ ಕಾರ್ಡ್ ಸೃಷ್ಟಿ ಮಾಡುವುದು ಇತ್ಯಾದಿ ಕಾರ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಲಹೆಯ ಅನ್ವಯ ಈ ವ್ಯವಸ್ಥೆಯ ಮರು ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಚಿಪ್ ಆರ್ ಸಿ ಕಾರ್ಡ್ಗಳನ್ನು ಮರು ಜಾರಿಗೊಳಿಸುವುದರಿಂದ ಚಿಪ್ ನಲ್ಲಿ ವಾಹನಗಳ ಎಲ್ಲಾ ಮಾಹಿತಿಗಳು ಇರಲಿವೆ ಇದರಿಂದ ನಕಲು ಮಾಡಲು ಸಾಧ್ಯವಾಗುವುದಿಲ್ಲ.
ಅಷ್ಟೇ ಅಲ್ಲದೆ ರೀಡರ್ ನಲ್ಲಿ ಸಂಪೂರ್ಣ ಮಾಹಿತಿ ಇರುವುದರಿಂದ ಪೊಲೀಸರಿಗೂ ಅನುಕೂಲವಾಗುತ್ತದೆ ಇದರಿಂದ ವಂಚನೆಯನ್ನೂ ತಡೆಯಬಹುದಾಗಿದೆ.
ಇದನ್ನೂ ಓದಿ..Pan Card: ಪಾನ್ ಕಾರ್ಡ್ ಇದ್ದವರಿಗೆ ಬಿಗ್ ಶಾ’ಕ್ ನೀಡಿದ ಕೇಂದ್ರ ಸರ್ಕಾರ