ಪಾನ್ ಕಾರ್ಡ್ (Pan Card) ಹೊಂದಿರುವವರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರವು (Central Govt) ಹಲವಾರು ಕೆಲಸದ ಉದ್ದೇಶಕ್ಕಾಗಿ ನೀಡಿರುವಂತಹ ಪಾನ್ ಕಾರ್ಡ್ (Pan Card)ಅನ್ನು ಏಕಾಏಕಿ ರದ್ದುಗೊಳಿಸಲು ಮುಂದಾಗಿದೆ ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿಯೋಣ.

ಕೇಂದ್ರ ಆದಾಯ ಮತ್ತು ತೆರಿಗೆ ಇಲಾಖೆಯಿಂದ (Income Tax Department) ಜಾರಿಗೆ ತಂದಿರುವ ನಿಯಮದ ಪ್ರಕಾರ ಪಾನ್ ಕಾರ್ಡ್ (Pan Card) ಅನ್ನು ರದ್ದುಗೊಳಿಸಲಾಗುತ್ತಿದೆ ಹೀಗೆ ಪಾನ್ ಕಾರ್ಡ್ (Pan Card) ರದ್ದಾಗಲು ಮುಖ್ಯ ಕಾರಣಗಳು ಏನೆಂದರೆ ಪಾನ್ ಕಾರ್ಡ್ಗಳಿಗೆ ಆಧಾರ್ ಕಾರ್ಡನ್ನು (Aadhar Card) ಲಿಂಕ್ ಮಾಡದೆ ಇರುವುದು. ಆಧಾರ್ ಕಾರ್ಡ್ ನ ಜೊತೆಯಲ್ಲಿ ಪಾನ್ ಕಾರ್ಡ್ ಲಿಂಕ್ ಮಾಡಲು ಈಗಾಗಲೇ ಗಡುವು ನೀಡಲಾಗಿದ್ದು ಇದುವರೆಗೆ ಬಹಳಷ್ಟು ಮಂದಿ ತಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಜೊತೆಯಲ್ಲಿ ಲಿಂಕ್ ಮಾಡಿಲ್ಲ ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ.

ಆದಾಯ ತೆರಿಗೆ ಇಲಾಖೆ ಕಾಯ್ದೆ 1961ರ ಅನ್ವಯ ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ಇದಕ್ಕಾಗಿ 2023ರ ಮಾರ್ಚ್ 31 ಅಂತಿಮ ದಿನಾಂಕವಾಗಿದೆ ಈ ದಿನಾಂಕದ ಒಳಗಡೆ ಆಧಾರ್ ಜೊತೆಯಲ್ಲಿ ಪಾನ್ ಕಾರ್ಡ್ ಅನ್ನು ಲಿಂಕ ಮಾಡದಿದ್ದರೆ ಏಪ್ರಿಲ್ ಒಂದರಿಂದ ಆ ಎಲ್ಲಾ ಪಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿದೆ.

ಇದನ್ನೂ ಓದಿ..KMF ನಲ್ಲಿ ಹಲವು ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿಹಾಕಿ

ಈ ಮೊದಲು ಹಲವು ಬಾರಿ ಆಧಾರ್ ಜೊತೆಯಲ್ಲಿ ಪಾನ್ ಕಾರ್ಡ್ ಲಿಂಕ್ ಮಾಡಲು ಗಡುವು ನೀಡಿದ್ದ ಆದಾಯ ತೆರಿಗೆ ಇಲಾಖೆಯು ಈಗ ಒಂದು ಸಾವಿರ ರೂ ಪಾವತಿಸಿ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಅವಕಾಶವನ್ನ ತಪ್ಪಿಸಿಕೊಂಡರೆ ಪಾನ್ ಕಾರ್ಡ್ ಅನ್ನು ರದ್ದು ಮಾಡಲಾಗುವುದು ಇದರ ಜೊತೆಗೆ ಬ್ಯಾಂಕಿನ ಕೆಲವು ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಇದೇ ಮಾರ್ಚ್ 31ರ ಒಳಗಾಗಿ ಎಲ್ಲಾ ಪ್ಯಾನ್ ಕಾರ್ಡ್ ಗಳಿಗೂ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ತಮ್ಮ ಪಾನ್ ಕಾರ್ಡ್ ರದ್ದಾಗುತ್ತದೆ.

Leave a Reply

Your email address will not be published. Required fields are marked *