ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಅದನ್ನು ಯಾವಾಗ, ಯಾರು ಪ್ರಾರಂಭಿಸಿದರು, ಭಾರತದಲ್ಲಿ ರೋಡ್ ನ ಎಡಗಡೆ ಡ್ರೈವ್ ಮಾಡುತ್ತಾರೆ, ಅಮೆರಿಕಾದಲ್ಲಿ ರೋಡ್ ನ ಬಲಗಡೆ ಡ್ರೈವ್ ಮಾಡುತ್ತಾರೆ ಇದಕ್ಕೆ ಕಾರಣವೇನು ಈ ರೀತಿಯ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ತಿಳಿಯೋಣ.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಬಗ್ಗೆ ಎಲ್ಲರೂ ಕೇಳಿರುತ್ತೀರಾ. ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ವ್ಯಕ್ತಿಗೆ, ಅತ್ಯಂತ ಕುಳ್ಳಗಿರುವ ವ್ಯಕ್ತಿಗೆ ಅದೇ ರೀತಿ ಯಾರೂ ಮಾಡದೆ ಇರುವ ಸಾಧನೆ ಮಾಡಿದ ವ್ಯಕ್ತಿಗೆ, ವಿಚಿತ್ರವಾದ ಸಾಧನೆ ಮಾಡಿದ ವ್ಯಕ್ತಿಗೆ ಅಲ್ಲದೆ ಪ್ರಾಣಿಗಳಿಗೆ, ವಿಚಿತ್ರ ಕಟ್ಟಡಗಳಿಗೆ, ಫಾಲ್ಸ್ ಗೆ ಈ ರೀತಿಯಾಗಿ ಎಲ್ಲಾ ಸಾಧನೆಗೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇರುತ್ತದೆ.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರುವ ಸಾಧನೆ ವಿಭಿನ್ನವಾಗಿರಬೇಕು, ಯುನಿಕ್ ಆಗಿರಬೇಕು ಅಲ್ಲದೆ ಈ ಸಾಧನೆಯನ್ನು ಅಳತೆ ಮಾಡುವಂತಿರಬೇಕು. ಸರ್ ವ್ಯೂ ಬೀವರ್ ಎನ್ನುವವರು ಒಂದು ಪಾರ್ಟಿಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಹಾರುವ ಪಕ್ಷಿ ಯಾವುದು ಎಂಬುದರ ಬಗ್ಗೆ ಚರ್ಚೆ ನಡೆಯಿತು
ವಾದ-ವಿವಾದ ನಡೆಯಿತು ಆದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲಿಲ್ಲ. ಆಗ ಸರ್ ವ್ಯೂ ಬೀವರ್ ಅವರಿಗೆ ಒಂದು ಐಡಯಾ ಹೊಳೆಯುತ್ತದೆ ಪ್ರಪಂಚದ ಎಲ್ಲಾ ವಿಭಾಗಗಳಲ್ಲೂ ಅತ್ಯಂತ ವೇಗವಾದ, ಎತ್ತರವಾದ, ಚಿಕ್ಕದಾದ, ವಿಭಿನ್ನವಾದ, ದೊಡ್ಡದಾದ ಇವುಗಳ ಬಗ್ಗೆ ಪುಸ್ತಕ ಬರೆಯಬೇಕೆಂದು.
1955 ರಲ್ಲಿ ಸರ್ ವ್ಯೂ ಬೀವರ್ ಅವರು ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ಗಿನ್ನಿಸ್ ಬುಕ್ ರಚನೆ ಮಾಡುತ್ತಾರೆ. ಇದುವರೆಗೂ 100 ದೇಶಗಳಲ್ಲಿ 23 ಭಾಷೆಗಳಲ್ಲಿ 53,000 ಗಿನ್ನಿಸ್ ಬುಕ್ ಅಫ್ ವರ್ಲ್ಡ್ ರೆಕಾರ್ಡ್ಸ್ ದಾಖಲಾಗಿದೆ. ಪ್ರಪಂಚದಲ್ಲಿ ಹೆಚ್ಚು ಕಳ್ಳತನವಾಗುತ್ತಿರುವ ಬುಕ್ ಕೂಡ ಇದೆ ಆಗಿದೆ. ನಮ್ಮ ದೇಶದಲ್ಲಿ ರೋಡ್ ನಲ್ಲಿ ಲೆಫ್ಟ್ ಸೈಡ್ ಡ್ರೈವ್ ಮಾಡುತ್ತೇವೆ, ಅಮೆರಿಕಾದಲ್ಲಿ ರೋಡ್ ನಲ್ಲಿ ರೈಟ್ ಸೈಡ್ ಡ್ರೈವ್ ಮಾಡುತ್ತಾರೆ.
ಸಾಮಾನ್ಯವಾಗಿ ರೋಡ್ ನಲ್ಲಿ ಎಡಭಾಗದಲ್ಲಿ ಡ್ರೈವ್ ಮಾಡುವ ಗಾಡಿಗಳಿಗೆ ಸ್ಟೇರಿಂಗ್ ಬಲ ಭಾಗದಲ್ಲಿರುತ್ತದೆ. 76 ದೇಶಗಳಲ್ಲಿ ರೋಡ್ ನಲ್ಲಿ ಎಡಭಾಗದಲ್ಲಿ ಡ್ರೈವ್ ಮಾಡುತ್ತಾರೆ. ರೋಡ್ ನ ಬಲಭಾಗಕ್ಕೆ ಡ್ರೈವ್ ಮಾಡುವ ಗಾಡಿಗಳಲ್ಲಿ ಸ್ಟೇರಿಂಗ್ ಎಡಗಡೆ ಇರುತ್ತದೆ. ಪ್ರಪಂಚದಲ್ಲಿ 161 ದೇಶಗಳಲ್ಲಿ ಬಲಭಾಗ ಡ್ರೈವ್ ಮಾಡುತ್ತಾರೆ. ರೋಡ್ ನಲ್ಲಿ ಎಡಭಾಗದಲ್ಲಿ ಡ್ರೈವ್ ಮಾಡಬೇಕು ಎಂಬ ರೂಲ್ಸ್ ತಂದಿದ್ದು ಬ್ರಿಟಿಷರು. ಬ್ರಿಟಿಷರು ಆಳಿದ ಎಲ್ಲಾ ದೇಶಗಳಲ್ಲಿ ಈ ರೂಲ್ಸ್ ತರುತ್ತಾರೆ, ಅದರಂತೆ ಎಲ್ಲ ದೇಶಗಳು ಇದೆ ರೂಲ್ಸ್ ಅನ್ನು ಅನುಸರಿಸುತ್ತಾರೆ ಅವುಗಳಲ್ಲಿ ನಮ್ಮ ದೇಶ ಕೂಡ ಒಂದು.
ಕೋಕಾಯಿನ್ ಮತ್ತು ಲವ್ ಇವೆರಡೂ ಬ್ರೇನ್ ನಲ್ಲಿ ಒಂದೆ ಲೆವೆಲ್ ನಲ್ಲಿ ಡೋಪಮೈನ್ ಅನ್ನು ರಿಲೀಸ್ ಮಾಡುತ್ತದೆ ಎಂದು ಒಂದು ಸಂಶೋಧನೆಯಿಂದ ತಿಳಿದಿದೆ. ಕೋಕಾಯಿನ್ ಸೇವಿಸಿದಾಗ ಬ್ರೇನ್ ಮೇಲೆ ಯಾವ ರೀತಿಯ ಪರಿಣಾಮ ಇರುತ್ತದೆಯೊ ಪ್ರೀತಿಸುವಾಗಲೂ ಅದೆ ಪರಿಣಾಮ ಇರುತ್ತದೆ ಆದ್ದರಿಂದ ಪ್ರೀತಿ ಮಾಡುವವರು ಏನು ಬೇಕಾದರೂ ಮಾಡುತ್ತೇವೆ ಎಂಬ ಮನಸ್ಥಿತಿಗೆ ಬರುತ್ತಾರೆ.
ರೋಡ್ ಮೇಲೆ ಚಲಾಯಿಸುವ ಎಲ್ಲಾ ವಾಹನಗಳಿಗೆ ಹಾರ್ನ್ ಇರುತ್ತದೆ ಹಾಗೆಯೆ ಆಕಾಶದಲ್ಲಿ ಹಾರುವ ವಿಮಾನಗಳಿಗೂ ಹಾರ್ನ್ ಇರುತ್ತದೆ. ವಿಮಾನ ನೆಲದ ಮೇಲೆ ಇದ್ದಾಗ ಮಾತ್ರ ಕ್ಯಾಬಿನ್ ಮೇಲೆ ಇರುವ ಪೈಲಟ್ ನೆಲದ ಮೇಲಿರುವ ಸಿಬ್ಬಂದಿಗಳಿಗೆ ಸಿಗ್ನಲ್ ಕೊಡಲು ಹಾರ್ನ್ ಅನ್ನು ಬಳಸುತ್ತಾರೆ. ಆಕಾಶದಲ್ಲಿ ಹಾರುವಾಗ ಈ ಹಾರ್ನ್ ಅನ್ನು ಬಳಸುವುದಿಲ್ಲ.
ಪ್ರಪಂಚದಲ್ಲಿ 95% ಜನ ತಮ್ಮ ಟಿವಿ ವ್ಯಾಲ್ಯೂಮ್ ಅನ್ನು ಬೆಸ ಸಂಖ್ಯೆಯಲ್ಲಿ ಇಡಲು ಇಷ್ಟಪಡುವುದಿಲ್ಲ ಏಕೆಂದರೆ ನಮ್ಮ ಮೆದುಳು ನಂಬರ್ ನೋಡಿದರೆ ಅದನ್ನು ಪ್ರೊಸೆಸ್ ಮಾಡಿ ಅದನ್ನು ಸಿಂಪ್ಲಿಫೈ ಮಾಡಲು ಟ್ರೈ ಮಾಡುತ್ತದೆ ಆದ್ದರಿಂದ ಸಂಖ್ಯೆ ಬೆಸ ಸಂಖ್ಯೆ ಆದರೆ ಈ ಪ್ರೊಸೆಸ್ ಕಷ್ಟವಾಗಿ ಗೊಂದಲ ಉಂಟಾಗುತ್ತದೆ.
ಸಮಸಂಖ್ಯೆ ಆದರೆ ಈ ಪ್ರೊಸೆಸ್ ನಮಗೆ ಕಂಪರ್ಟೇಬಲ್ ಆಗುತ್ತದೆ. ಸಮುದ್ರದಲ್ಲಿ ವಸ್ತುಗಳ ಸಾಗಾಣಿಕೆಯನ್ನು ನೂರಾರು ವರ್ಷಗಳಿಂದ ಮಾಡುತ್ತಿದ್ದಾರೆ. ಸಮುದ್ರದ ಆಳವನ್ನು ಸಂಶೋಧನೆ ಮಾಡುತ್ತಿದ್ದಾರೆ. ಸಮುದ್ರದಲ್ಲಿರುವ ಎಲ್ಲ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳಲು ಮಾನವನಿಂದ ಸಾಧ್ಯವಾಗಲಿಲ್ಲ. ಸಮುದ್ರದಲ್ಲಿ ಹೊಸ ಹೊಸ ಜೀವಿ ಪತ್ತೆಯಾಗುತ್ತಲೆ ಇದೆ.
ಇತ್ತೀಚೆಗೆ ಒಂದು ತಿಮಿಂಗಿಲವನ್ನು ಕಂಡುಹಿಡಿದಿದ್ದಾರೆ. ಸಾಮಾನ್ಯವಾಗಿ ತಿಮಿಂಗಿಲ 50 ಟನ್ ತೂಕ 98 ಅಡಿ ಉದ್ದದವರೆಗೆ ಬೆಳೆಯುತ್ತದೆ. ಈ ತಿಮಿಂಗಿಲ ಒಂದು ಬಾರಿ ಬಿಡುವ ಗಾಳಿಯಿಂದ ಸುಮಾರು 2,000 ಬಲೂನನ್ನು ತುಂಬಬಹುದು ಹಾಗಾದರೆ ಈ ತಿಮಿಂಗಿಲ ಎಷ್ಟು ದೊಡ್ಡದಾಗಿರಬೇಕು.