ನಮ್ಮ ಹಿರಿಯರು ಊಟದ ತುದಿಯಲ್ಲಿ ಮಜ್ಜಿಗೆಯನ್ನು ಸೇವನೆ ಮಾಡಬೇಕು ಎಂದು ಹೇಳುತ್ತಾರೆ. ಏಕೆಂದರೆ ಮಜ್ಜಿಗೆಯು ದೇಹವನ್ನು ತಂಪಾಗಿಡುತ್ತದೆ. ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ತುಂಬಾ ಒಳ್ಳೆಯದು. ಹಾಗಾಗಿ ನಾವು ಇಲ್ಲಿ ಮಜ್ಜಿಗೆಯ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಂದು ಸಂಸ್ಕೃತದ ನಾಣ್ಣುಡಿ ಇದೆ. ಅದೇನೆಂದರೆ
ನ ತಕ್ರ ಸೇವಂ ವ್ಯಥತಾ ಕದಾಚಿತ್
ನ ತಕ್ರ ದಗ್ಧಾಃ ಪ್ರಭವಂತಿ ರೋಗಾಃ
ಯಥಾ ಸುರಾಣಾಮ್ ಅಮೃತಂ ಹಿತಾಯ
ತಥಾ ನರಾಣಾಂ ಭುವಿ ತಕ್ರಮಾಹುಃ
ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಹೇಗೆ ದೇವತೆಗಳಿಗೆ ಅಮೃತ ಹಿತವನ್ನು ಕೊಡುತ್ತದೆಯೋ ಹಾಗೆ ಭೂಮಿಯ ಮೇಲಿನ ಮನುಷ್ಯರಿಗೆ ಮಜ್ಜಿಗೆಯು ಹಿತವನ್ನು ಕಾಪಾಡುತ್ತದೆ.
ಆಹಾರ ಪದ್ಧತಿಯಲ್ಲಿ ಏನೇ ಬದಲಾವಣೆ ಮಾಡಿಕೊಂಡರೂ ಮಜ್ಜಿಗೆ ಕುಡಿಯುವುದನ್ನು ಮಾತ್ರ ತಪ್ಪಿಸಬಾರದು ಎಂದು ತಜ್ಞರು ಹೇಳುತ್ತಾರೆ. ಮಜ್ಜಿಗೆ ದಿನವೂ ಸೇವನೆ ಮಾಡಿದರೆ ಹಿರಿಯ ನಾಗರಿಕರಲ್ಲಿ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಹೇಳಬಹುದು. ಹೇಗೆಂದರೆ ಹಿರಿಯ ನಾಗರಿಕರಲ್ಲಿ ಎಲುಬು ಸವೆತ ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಮಧ್ಯ ವಯಸ್ಸು ದಾಟಿದವರಲ್ಲಿ ಮೂಳೆ ಸವೆತ ಆಗುತ್ತಾ ಹೋಗುತ್ತದೆ. ಹಾಗಾಗಿ ಕ್ಯಾಲ್ಶಿಯಂ ತುಂಬಿರುವ ಆಹಾರವನ್ನು ಸೇವಿಸಬೇಕು. ಮಜ್ಜಿಗೆಯಲ್ಲಿ ಯಥೇಚ್ಛವಾಗಿ ಕ್ಯಾಲ್ಶಿಯಂ ಇರುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡಬೇಕು.
ವಿದೇಶಿ ಸಂಶೋಧನೆಗಳು ಮಹಿಳೆಯರಿಗೆ ಮತ್ತು ಪುರುಷರಿಗೆ ಮಜ್ಜಿಗೆಯನ್ನು ನೀಡಿ ಸಂಶೋಧನೆ ನಡೆಸಿ ಈ ಸತ್ಯವನ್ನು ಕಂಡುಕೊಂಡಿದೆ. ಆದ್ದರಿಂದ ಯುವಕರು ಮತ್ತು ಯುವತಿಯರು ಸಹ ದಿನವೂ ಮಜ್ಜಿಗೆಯನ್ನು ಸೇವಿಸಬೇಕು. ಯುವಕ ಯುವತಿಯರು ಕೆಲಸ ಮಾಡಿ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಇವರಿಗೂ ಸಹ ಕ್ಯಾಲ್ಶಿಯಂ ಅವಶ್ಯಕವಾಗಿದೆ. ಹೆಚ್ಚಾಗಿ ಹೋಟೆಲ್ ಗಳಲ್ಲಿ ಹೋದಾಗ ಊಟದ ತುದಿಯಲ್ಲಿ ಎಲ್ಲರೂ ಮಜ್ಜಿಗೆ ಅಥವಾ ಮೊಸರನ್ನು ಸೇವನೆ ಮಾಡುತ್ತಾರೆ. ಇದು ಬಹಳ ಒಳ್ಳೆಯ ಬೆಳವಣಿಗೆ ಆಗಿದೆ.