ನಟ ಪುನೀತ್ ರಾಜಕುಮಾರ್ ಅವರ ಸಾವನ್ನು ಅರಗಿಸಿಕೊಳ್ಳುವುದಕ್ಕೆ ಈ ಕ್ಷಣಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಇವತ್ತಲ್ಲ ಎಂದಿಗೂ ಕೂಡ ಆ ವಿಷಯವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಪುನೀತ್ ರಾಜಕುಮಾರ್ ಅವರು ಅವರ ವ್ಯಕ್ತಿತ್ವದ ಮೂಲಕ ಸಿನಿಮಾಗಳ ಮೂಲಕ ಸದಾ ಕಾಲ ಜೀವಂತವಾಗಿರುತ್ತಾರೆ ನಮ್ಮೆಲ್ಲರ ಹೃದಯದಲ್ಲಿ ಅಜರಾಮರವಾಗಿ ಉಳಿದುಕೊಳ್ಳುತ್ತಾರೆ.

ಇನ್ನು ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಬಹಳ ಚರ್ಚೆಗೆ ಬಂದ ವಿಷಯವೇನೆಂದರೆ ಅವರ ಸಾವಿನ ಅಂತಿಮ ಕ್ಷಣಗಳಿಗೆ ಸಂಬಂಧಪಟ್ಟ ಹಾಗೆ ಅದರಲ್ಲಿಯೂ ಅವರಿಗೆ ಚಿಕಿತ್ಸೆಯನ್ನು ನೀಡಿದಂತಹ ಡಾಕ್ಟರ್ ರಮಣ ರಾವ್ ಅವರ ವಿರುದ್ಧ ದೂರು ದಾಖಲಾಗುತ್ತದೆ. ಸಾಕಷ್ಟು ಅನುಮಾನಗಳು ಮೂಡುತ್ತದೆ ಬೇರೆಬೇರೆ ರೀತಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತದೆ ಸಿಸಿಟಿವಿ ಫುಟೇಜ್ ಅನ್ನ ರೀವಿಲ್ ಮಾಡಬೇಕು ಎಂದು ಒತ್ತಾಯ ಮಾಡಲಾಗಿತ್ತು.

ಈ ವಿಷಯದ ಕುರಿತಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾತನಾಡುತ್ತಾರೆ ಎಂದು ತಿಳಿದುಕೊಂಡಿದ್ದರು ಆದರೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ದುಖಿಃತರಾದ ಕಾರಣ ಅರ್ಧದಲ್ಲೆ ಕಾರ್ಯಕ್ರಮದಿಂದ ಹೊರನಡೆಯುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆನಂತರದಲ್ಲಿ ಹೆಚ್ಚು ಚರ್ಚೆಗಳು ನಡೆಯುವುದಿಲ್ಲ.ಆದರೆ ರಮಣರಾವ್ ಅವರ ಹಿನ್ನೆಲೆ ಬಗ್ಗೆ ಒಂದಷ್ಟು ಚರ್ಚೆಗಳು ಪ್ರಾರಂಭವಾಯಿತು ರಮಣರಾವ್ ಅವರು ಯಾರು ಏನು ಎತ್ತ ಎಂದು. ಡಾಕ್ಟರ್ ರಮಣ ರಾವ್ ಅವರು ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿರುವಂತಹ ವೈದ್ಯರು ಅವರು ಮೂಲತಹ ಕರ್ನಾಟಕದವರಲ್ಲ ಅವರು ಮೂಲತಃ ಹೈದರಾಬಾದಿನವರು. ಅವರ ತಂದೆ ಇಂಜಿನಿಯರ್ ಆಗಿದ್ದರೂ ಕೂಡ ಆರ್ಥಿಕವಾಗಿ ಒಂದು ಹಂತಕ್ಕೆ ಕುಟುಂಬದ ಸಬಲವಾಗಿದ್ದರೂ ಕೂಡ ರಮಣರಾವ್ ಅವರು ತುಂಬಾ ಕಷ್ಟಪಟ್ಟು ಬೆಳೆದಂತವರು.

ಆರಂಭದ ದಿನಗಳಲ್ಲಿ ಮನೆಯಲ್ಲಿ ಬೆಳೆದಂತಹ ತರಕಾರಿಗಳನ್ನು ಬೇರೆಬೇರೆ ಮಾರುಕಟ್ಟೆಗಳಿಗೆ ಹಾಕಿ ಅದರಿಂದ ಬಂದಂತಹ ಹಣದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಾ ಹೋಗುತ್ತಾರೆ ಈ ಕಾರಣದಿಂದಾಗಿಯೇ ಅವರಿಗೆ ಬಾಲ್ಯದಲ್ಲಿಯೇ ಬಡವರ ಸಂಕಷ್ಟ ಏನು ಜನಸಾಮಾನ್ಯರ ಕಷ್ಟಗಳು ಏನು ಎಂಬುದು ಅರ್ಥವಾಗುತ್ತಾ ಹೋಗುತ್ತದೆ.

ಆನಂತರದಲ್ಲಿ ಅವರು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ವೈದ್ಯರಾಗುತ್ತಾರೆ. ವೈದ್ಯರಾದ ನಂತರ ತಂದೆ ತಾಯಿಯ ಮಾತನ್ನು ಅನುಸರಿಸುವುದಕ್ಕೆ ಪ್ರಾರಂಭಿಸುತ್ತಾರೆ ಅವರ ತಂದೆ-ತಾಯಿ ಹೇಳಿದ್ದರಂತೆ ಶ್ರೀಮಂತರ ಬದುಕಿನ ಬಗ್ಗೆ ನೀನು ಹೆಚ್ಚಾಗಿ ಕುತೂಹಲವನ್ನು ಇಟ್ಟುಕೊಳ್ಳಬೇಡ ನೀನು ಬಡವರ ಕುರಿತಾಗಿ ಹೆಚ್ಚೆಚ್ಚು ಕಾಳಜಿಯನ್ನು ವಹಿಸು ಎನ್ನುವ ರೀತಿಯಲ್ಲಿ ಹೇಳಿರುತ್ತಾರೆ. ಅದೇ ಪ್ರಕಾರವಾಗಿ ರಮಣರಾವ್ ಅವರು ಬಡವರ ಕುರಿತಾಗಿ ಕಾಳಜಿಯನ್ನು ತೋರಿದ್ದಾರೆ.

ಹೆಚ್ಚು ಕಡಿಮೆ ಮೂವತ್ತಾರು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಅಲ್ಲಿ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡುತ್ತಿದ್ದಾರೆ. ತುಂಬಾ ಕಡೆಗಳಲ್ಲಿ ವಿಲೇಜ್ ಕ್ಲಿನಿಕ್ ಎನ್ನುವುದನ್ನು ತೆರೆದಿದ್ದಾರೆ. ಅಲ್ಲಿಗೆ ಬರುವವರಿಗೆ ಪ್ರತಿದಿನ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಹದಿನಾರರಿಂದ ಇಪ್ಪತ್ತು ಹಳ್ಳಿಗಳಿಗೆ ಉಚಿತವಾಗಿ ಟಾಯ್ಲೆಟ್ಟನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅವರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಿಕೊಟ್ಟಿದ್ದಾರೆ.

ಒಂದು ಕಡೆ ಬಡವರಿಗೆ ಉಚಿತ ಚಿಕಿತ್ಸೆ ಜೊತೆಗೆ ಅವರ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗದೇ ಇರುವ ಹಾಗೆ ಶೌಚಾಲಯ ವ್ಯವಸ್ಥೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ಎರಡು ಸಾವಿರದ ಹತ್ತರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇನ್ನು ರಾಜಕುಮಾರ್ ಅವರ ಕುಟುಂಬದ ವಿಷಯಕ್ಕೆ ಬಂದರೆ ರಾಜಕುಮಾರ್ ಅವರಿಂದ ಹಿಡಿದು ಇವತ್ತಿನವರೆಗೂ ಅವರ ಕುಟುಂಬದವರಿಗೆ ಇವರೇ ಚಿಕಿತ್ಸೆ ನೀಡುತ್ತಿದ್ದಾರೆ.

ರಾಜಕುಮಾರ್ ಅವರು ವಿಧಿವಶರಾಗುವ ಕೊನೆಯ ಕ್ಷಣದಲ್ಲಿ ಅವರಿಗೆ ಚಿಕಿತ್ಸೆಯನ್ನು ನೀಡಿದವರು ರಮಣರಾವ್ ಅವರೇ ಇನ್ನು ಪುನೀತ್ ರಾಜಕುಮಾರ್ ಅವರ ವಿಷಯದಲ್ಲಿ ಕೊನೆಯದಾಗಿ ಚಿಕಿತ್ಸೆಯನ್ನು ನೀಡಿದವರು ಇವರೇ. ರಾಜಕುಮಾರ್ ಪಾರ್ವತಮ್ಮ ಪುನೀತ್ ರಾಜಕುಮಾರ್ ಎಲ್ಲರೂ ಕೂಡ ಇವರ ಬಳಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಬೇರೆ ಕಡೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ.

ರಾಜಕುಮಾರ್ ಅವರು ಯಾವಾಗಲೂ ರಮಣರಾವ್ ಅವರ ಕುರಿತಾಗಿ ವಿಶೇಷವಾದ ಪ್ರೀತಿಯನ್ನು ತೋರುತ್ತಿದ್ದರಂತೆ. ಇದೇ ರೀತಿಯಾಗಿ ಚಿತ್ರರಂಗದ ಇನ್ನೂ ಕೆಲವು ಕಲಾವಿದರು ಇವರ ಬಳಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ದೊಡ್ಡ ದೊಡ್ಡ ರಾಜಕಾರಣಿಗಳು ಕೂಡ ಇವರ ಬಳಿಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ.

ಈ ಮೂಲಕವಾಗಿ ರಮಣರಾವ್ ಅವರು ಎಷ್ಟೋ ವರ್ಷಗಳಿಂದ ಉತ್ತಮವಾದಂತಹ ಚಿಕಿತ್ಸೆಯನ್ನು ಕೊಡುವುದರ ಜೊತೆಗೆ ಎಲ್ಲರ ವಿಶ್ವಾಸವನ್ನು ಗಳಿಸಿದ್ದಾರೆ. ಆದರೆ ಅವರ ದುರಾದೃಷ್ಟವೋ ಏನು ಪುನೀತ್ ರಾಜಕುಮಾರ್ ಅವರ ಮರಣದ ನಂತರ ಅವರು ಒಂದಷ್ಟು ವಿವಾದಗಳಿಗೆ ಒಳಗಾಗಬೇಕಾಯಿತು ಅವರ ವಿರುದ್ಧ ದೂರುಗಳು ದಾಖಲಾಗುವ ಪರಿಸ್ಥಿತಿ ಎದುರಾಯಿತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!