ಗಾಜನೂರು ಎಂಬ ಚಿಕ್ಕ ಹಳ್ಳಿಯಿಂದ ನಕ್ಷತ್ರವೊಂದು ಹುಟ್ಟಿಬಂದು ಆರು ಕೋಟಿ ಕನ್ನಡಿಗರ ಹೃದಯದಲ್ಲಿ ಮಿನುಗುತ್ತದೆ ಎನ್ನುವುದನ್ನು ಯಾರೊಬ್ಬರೂ ಕೂಡಾ ಊಹಿಸಲು ಸಾಧ್ಯ ಇರಲಿಲ್ಲ. ಚಿಕ್ಕವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ನಟನೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ನಾಟಕಗಳ ಮೂಲಕ ಬಾಂಧವ್ಯ ಬೆಳೆಸಿಕೊಂಡು ನಂತರ ಕನ್ನಡದ ಸೂಪರ್ ಸ್ಟಾರ್ ಆಗಿ ಬೆಳೆದ ಡಾಕ್ಟರ್ ರಾಜಕುಮಾರ್ ಕನ್ನಡ ಸಿನಿ ರಸಿಕರ ಮಹಾರಾಜ ಎಂದರೆ ತಪ್ಪಾಗಲಾರದು. ಡಾಕ್ಟರ್ ರಾಜಕುಮಾರ್ ಅವರ ಗಾಜನುರಿನ ಅವರ ಕನಸಿನ ಮನೆ ಹೇಗಿತ್ತು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ತಮ್ಮದೇ ಆದ ಆಸೆ ಕನಸು ಅಂತಾ ಇರುತ್ತದೆ. ರಾಜಕುಮಾರ್ ಅವರಿಗೂ ಅದೇ ರೀತಿ ಒಂದು ಕನಸು ಇತ್ತು. ತನ್ನನ್ನು ಇಡೀ ಜಗತ್ತಿಗೆ ಪರಿಚಯಿಸಿದ ಗಾಜನೂರು ಅಲ್ಲಿ ಒಂದು ಸುಂದರ ಮನೇ ಕಟ್ಟಬೇಕು ಎನ್ನುವುದು. ನಾವು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ , ಎಲ್ಲೇ ಇದ್ದರೂ ನಮ್ಮ ಮನಸ್ಸು ಮಾತ್ರ ನಮ್ಮ ಹುಟ್ಟೂರಿನ ಕಡೆಗೆ ಇರುತ್ತದೆ ಅಲ್ಲಿನ ನೆನಪುಗಳು ನಮ್ಮನ್ನು ಕಾಡುತ್ತವೆ. ಅದೇ ರೀತಿ ರಾಜಕುಮಾರ್ ಅವರಿಗೂ ತಮ್ಮ ಹುಟ್ಟೂರಿನಲ್ಲಿ ಒಂದು ಮನೆ ಕಟ್ಟಬೇಕು ಎನ್ನುವ ಆಶಯ ಇದ್ದಿತ್ತು. ಕೊನೆಗೂ ತಮ್ಮ ಕನಸಿನಂತೆ ತಮಗೆ ಅನುಕೂಲ ಆಗುವಂತೆ ಗಾಜನುರಿನ ಫಾರ್ಮ್ ಹೌಸ್ ನಲ್ಲಿ ಒಂದು ಕನಸಿನ ಮನೆಯನ್ನು ಕಟ್ಟಿಸಿದರು ಡಾಕ್ಟರ್ ರಾಜಕುಮಾರ್. ಸುಂದರ ವಾತಾವರಣ ಪರಿಸರದ ನಡುವೆ ಮನೆಯನ್ನು ಕಟ್ಟಿಸಿ ಸಮಯ ಸಿಕ್ಕಾಗಲೆಲ್ಲಾ ಅಲ್ಲಿಗೆ ಬಂದು ಜನರ ಜೊತೆ ಖುಷಿಯಾಗಿ ಸಾಮಾನ್ಯರಂತೆ ಕಾಲ ಕಳೆಯುತ್ತಿದ್ದರು.

ರಾಜಕುಮಾರ್ ಅವರಿಗೆ ತನ್ನ ಮುಂದಿನ ದಿನಗಳನ್ನು ಗಾಜನುರಿನಲ್ಲಿ ಕಳೆಯಬೇಕು ಎನ್ನುವ ಆಸೆ ಇತ್ತಂತೆ ಆದರೆ ಅವರ ಆಸೆಗೆ ನೀರು ಎರಚಿದವನು ಕಾಡುಗಳ್ಳ ವೀರಪ್ಪನ್. ರಾಜಕುಮಾರ್ ಗಾಜನೂರಿನ ಮನೆಯಲ್ಲಿ ಇದ್ದಾಗಲೇ ಅವರನ್ನು ಅಪಹರಣ ಮಾಡಲಾಗಿತ್ತು. ಆದರೆ ಇಂದಿಗೂ ಕೂಡಾ ಅವರ ಮನೆಯನ್ನು ಕಾಪಾಡಿಕೊಂಡು ಬರಲಾಗಿದೆ. ರಾಜಕುಮಾರ್ ಅವರ ಮಗ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಅಷ್ಟೇ ಗಾಜನೂರಿನ ತಮ್ಮ ತಂದೆಯ ಹಳೆಯ ಮನೆಗೆ ಭೇಟಿ ನೀಡಿ ತಂದೆಯ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ರಾಜಕುಮಾರ್ ಅವರ ಗಾಜನುರಿನ ಮನೆಯನ್ನು ನೀವಿಲ್ಲಿ ಕಾಣಬಹುದು.

Leave a Reply

Your email address will not be published. Required fields are marked *