2021 ಅಕ್ಟೋಬರ್ 29 ರಂದು ಬೆಳಿಗ್ಗೆ ಜಿಮ್ ಮಾಡುವಾಗ ಲಘು ಹೃದಯಾಘಾತದಿಂದ ಕುಸಿದು ಬಿದ್ದ ಪುನೀತ್ ಹತ್ತಿರದ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು ನಂತರ ತುರ್ತು ಚಿಕಿತ್ಸೆ ಸಲುವಾಗಿ ಪುನೀತ್ ರನ್ನು ವಿಕ್ರಂ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ 11,45 ಘಂಟೆಯ ಸುಮಾರಿಗೆ ನಿಧನರಾದರು. ಕನ್ನಡದ ಟಾಪ್ ನಟನೊಬ್ಬ ತಮ್ಮ ಜೀವನ ಮತ್ತು ಸಿನಿ ಜೀವನದ ಉತ್ತುಂಗದ ಕಾಲದಲ್ಲಿಯೇ ನಿಧಾನವಾಗಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದುರ್ದೈವವೇ ಸರಿ.
ಡಾ ರಾಜಕುಮಾರ್ ಹುಟ್ಟಿ ಬೆಳೆದ ಊರು ಗಾಜಾನೂರು ಮನೆ ಎಂದರೆ ಇಡೀ ಕನ್ನಡಿಗರಿಗೆ ದೇವಾಲಯವಿದ್ದಂತೆ, ಅಣ್ಣಾವ್ರು ಇಷ್ಟು ಚಿಕ್ಕ ಮನೆಯಲ್ಲಿದ್ದರೆ ಪಟ್ಟರೂ ಅವರ ಸರಳತೆಗೆ ಸಾಟಿಯಾರಿಲ್ಲಾ ಎಂದು ಮಾತನಾಡಿಕೊಳ್ಳುತ್ತಾರೆ ಪುನೀತ್ ರಾಜ್ಕುಮಾರ್ ಕುಟುಂಬವು ಎರಡು ಮೂರು ತಿಂಗಳಿಗೊಮ್ಮೆ ಆದರೂ ಗಾಜಾನೂರಿಗೆ ಭೇಟಿ ನೀಡುತ್ತಿದ್ದರು, ಅಲ್ಲಿನ ಆಲದಮರದ ಕೆಳಗೆ ಕುಳಿತುಕೊಂಡು ಊರಿನಲ್ಲಿರುವವರನ್ನೂ ಮಾತನಾಡಿಸಿಕೊಂಡು ಬರುತ್ತಿದ್ದರು.
ಅಪ್ಪು ನಿಧನ ಹೊಂದುವ ಮೂರು ತಿಂಗಳ ಹಿಂದೆ ಶಿವಣ್ಣ ಕುಟುಂಬದ ಜೊತೆ ಗಾಜಾನೂರಿಗೆ ಭೇಟಿ ನೀಡಿದ್ದರು, ಪುನೀತ್ ನಿಧನರಾದ ದಿನವು ಸಹ ಗಾಜಾನೂರಿಗೆ ಕೊಂಡೊಯ್ಯುವ ಯೋಜನೆ ಇತ್ತು ಆದರೆ ಬೆಂಗಳೂರಿಗೆ ಅಭಿಮಾನಿಗಳು ಆಗಮಿಸುತ್ತಿದ್ದ ರೀತಿ ಅವರನ್ನು ನಿಯಂತ್ರಣ ಮಾಡಲು ವಿಫಲವಾದರೆ ಮತ್ತೊಂದು ಜೀವಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು.
ಅಪ್ಪುಗೆ ಗಾಜಾನೂರಿನ ಮನೆ ಎಂದರೆ ತುಂಬಾ ಇಷ್ಟ ಅಲ್ಲಿಗೆ ಹೋಗಿ ಕೆಲ ಸಮಯಗಳ ಕಾಲ ಕುಳಿತು ಅಲ್ಲಿರುವ ಅಪ್ಪಾಜಿ ಫೋಟೋ ನೋಡಿಕೊಂಡು ಕಾಫಿ, ಟೀ ಕುಡಿದು ಬರುತ್ತಿದ್ದರಂತೆ. ಅದಕ್ಕೆ ಡಾ ರಾಜಕುಮಾರ್ ಮತ್ತೆ ಪುನೀತ್ ರಾಜ್ಕುಮಾರ್ ನೆನಪು ಶಾಶ್ವತವಾಗಿ ಉಳಿಯಲೆಂದು ಕುಟುಂಬಸ್ಥರು ಚಿಂತಿಸಿ ಗಾಜಾನೂರಿನ ಮನೆಯನ್ನು ಮರು ಅಭಿವೃದ್ಧಿ ಪಡಿಸಿ ಅಲ್ಲಿ ಮ್ಯೂಸಿಯಂ ಮಾಡಲು ಚಿಂತನೆ ನಡೆಸಿದ್ದಾರೆ
ಗಾಜಾನೂರು ಮನೆಯ ದುರಸ್ತಿ ಕಾರ್ಯ ಶೀಘ್ರದಲ್ಲೇ ನಡೆಯಲಿದ್ದು ತದನಂತರ ಅಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್ಕುಮಾರ್ ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಮ್ಯೂಸಿಯಂ ರೀತಿ ಮಾಡಲಾಗುತ್ತದೆ.