Ultimate magazine theme for WordPress.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಉಚಿತ ಬೋರವೆಲ್ ಹಾಕಿಸಲು ಇಲ್ಲಿದೆ ಮಾಹಿತಿ

0 1

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಡೆಯಿಂದ ವಿವಿಧ ಯೋಜನೆಗಳಿಗೆ ಆನ್ಲೈನ್ ನಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ ಇವತ್ತು ನಾವು ಇದರಲ್ಲಿ ಗಂಗಾಕಲ್ಯಾಣ ಯೋಜನೆಗೆ ಯಾರೆಲ್ಲ ಇದಕ್ಕೆ ಅರ್ಜಿ ಸಲ್ಲಿಸಬಹುದು ಯಾವಾಗ ಸಲ್ಲಿಸಬೇಕು ಮತ್ತು ಅದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿಯಲ್ಲಿ ಗಂಗಾಕಲ್ಯಾಣ ಯೋಜನೆಗೆ ಆರ್ಜಿಸಲ್ಲಿಸಲು ದಿನಾಂಕವನ್ನು ಇಲ್ಲಿ ಕೊಡಲಾಗಿದೆ ಅರ್ಜಿ ಪ್ರಾರಂಭ ದಿನಾಂಕ ಎರಡು ಆಗಸ್ಟ್ ಎರಡುಸಾವಿರದಇಪ್ಪತ್ತೊಂದು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎರಡು ಸೆಪ್ಟೆಂಬರ್ ಎರಡುಸಾವಿರದಇಪ್ಪತ್ತೊಂದು.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಡೆಯಿಂದ ಪರಿಶಿಷ್ಟ ಜಾತಿಯವರು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಒಂದೂವರೆ ಎಕರೆಯಿಂದ ಐದು ಎಕರೆ ಜಮೀನನ್ನು ಖಡ್ಡಾಯವಾಗಿ ಹೊಂದಿರಬೇಕು. ಅಷ್ಟು ಜಮೀನನ್ನು ಹೊಂದಿದ್ದಾರೆ ಇವರ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಪಂಪ ಸೆಟ್ ಹಾಕಿಸಿ ವಿದ್ಯುದ್ದಿಕರಣ ಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.

ಮಲೆನಾಡು ಪ್ರದೇಶಗಳಾದ ಕೊಡಗು ಉಡುಪಿ ದಕ್ಷಿಣ ಕನ್ನಡ ಕಾರವಾರ ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಿಂದ ನೀವು ಅರ್ಜಿ ಸಲ್ಲಿಸಿದರೆ ಈ ಜಿಲ್ಲೆಗಳಲ್ಲಿ ಒಂದು ಎಕರೆ ಹೊಂದಿರುವವರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ.

ಇಲ್ಲಿ ಸಾಲ ಸೌಲಭ್ಯ ಎಷ್ಟು ಕೊಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ. ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರುಗ್ರಾಮಾಂತರ ಬೆಂಗಳೂರುನಗರ ತುಮಕೂರು ಮತ್ತು ರಾಮನಗರ ಈ ಜಿಲ್ಲೆಗಳಲ್ಲಿ ಅಂತರ್ಜಲ ಕಡಿಮೆ ಇರುವುದರಿಂದ ಇಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಪಂಪ ಸೆಟ್ ಅಳವಡಿಸಲು ನಾಲ್ಕೂವರೆ ಲಕ್ಷ ರೂಪಾಯಿ ಸಾಲವನ್ನು ಕೊಡಲಾಗುತ್ತದೆ ಇದರಲ್ಲಿ ನಾಲ್ಕು ಲಕ್ಷ ರೂಪಾಯಿ ಸಬ್ಸಿಡಿ ಇರುತ್ತದೆ ಅಂದರೆ ಸಹಾಯಧನ ನೀವು ನಾಲ್ಕು ಲಕ್ಷ ರೂಪಾಯಿಯನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ

ಆದರೆ ಉಳಿದ ಐವತ್ತು ಸಾವಿರ ರೂಪಾಯಿ ಹಣವನ್ನು ನೀವು ಮರುಪಾವತಿ ಮಾಡಬೇಕಾಗುತ್ತದೆ. ಉಳಿದ ಜಿಲ್ಲೆಯವರಿಗೆ ಮೂರೂವರೆ ಲಕ್ಷ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ಕೊಡಲಾಗುತ್ತದೆ. ಅದರಲ್ಲಿ ಮೂರುಲಕ್ಷ ರೂಪಾಯಿಯನ್ನು ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ ಇನ್ನುಳಿದ ಐವತ್ತು ಸಾವಿರ ರೂಪಾಯಿಗಳನ್ನು ಮರುಪಾವತಿ ಮಾಡಬೇಕು.

ಗಂಗಾಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರಿಗೆ ಇರಬೇಕಾದ ಅರ್ಹತೆಗಳನ್ನು ನೋಡುವುದಾದರೆ ಪರಿಶಿಷ್ಟ ಜಾತಿಯವರು ಈ ಗಂಗಾಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಬೇರೆ ಕೆಟಗೆರೆಯವರು ಅರ್ಜಿ ಸಲ್ಲಿಸಲು ಬರುವುದಿಲ್ಲ. ಅರ್ಜಿ ಸಲ್ಲಿಸುವವರು ಕಳೆದ ಹದಿನೈದು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು.

ಈ ಯೋಜನೆಗೆ ಅರ್ಜಿಸಲ್ಲಿಸುವವರು ಹದಿನೆಂಟು ವರ್ಷಕ್ಕಿಂತ ಮೆಲ್ಪಟ್ಟವರಾಗಿರಬೇಕು ಮತ್ತು ಅರವತ್ತು ವರ್ಷ ಒಳಗಿನವರಾಗಿರಬೇಕು. ಇನ್ನು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿದ್ದರೆ ಅಂತವರು ಅರ್ಜಿ ಸಲ್ಲಿಸಲು ಬರುವುದಿಲ್ಲ. ಅರ್ಜಿಸಲ್ಲಿಸುವ ವ್ಯಕ್ತಿ ಅಥವಾ ಕುಟುಂಬದವರು ಈ ಒಂದು ನಿಗಮದ ಕಡೆಯಿಂದ ಇದಕ್ಕಿಂತ ಮುಂಚೆ ಯಾವುದೇ ರೀತಿಯ ಸಾಲ ಸೌಲಭ್ಯಗಳನ್ನು ಪಡೆದಿರಬಾರದು.

ಅರ್ಜಿ ಸಲ್ಲಿಸುವವರ ಕುಟುಂಬದ ವಾರ್ಷಿಕ ವರಮಾನ ಎಷ್ಟಿರಬೇಕು ಎಂಬುದನ್ನು ನೋಡುವುದಾದರೆ ಗ್ರಾಮೀಣ ಪ್ರದೇಶದಲ್ಲಿರುವ ಕುಟುಂಬದವರ ವಾರ್ಷಿಕ ವರಮಾನ ಎಂಬತ್ತೊಂದು ಸಾವಿರಕ್ಕಿಂತ ಒಳಗಿರಬೇಕು. ನಗರ ಪ್ರದೇಶದವರಾಗಿದ್ದರೆ ಅವರ ವಾರ್ಷಿಕ ವರಮಾನ ಒಂದು ಲಕ್ಷದ ಮೂರುಸಾವಿರ ಒಳಗಿರಬೇಕೂ. ಇನ್ನು ಅರ್ಜಿ ಸಲ್ಲಿಸುವ ವ್ಯಕ್ತಿ ಅಂಗವಿಕಲನಾಗಿದ್ದರೆ ಅಂಗವಿಕಲತೆ ಹೊಂದಿರುವ ದೃಢೀಕರಣ ಬೇಕಾಗುತ್ತದೆ

ಒಂದು ವೇಳೆ ಅಂಗವಿಕಲತೆ ಹೊಂದಿದ ವ್ಯಕ್ತಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದರೆ ನೇರವಾಗಿ ಆತ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂತವರು ಮಾತ್ರ ಅರ್ಜಿಯನ್ನ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸುವವರ ಜಮೀನಿನ ಪಕ್ಕದಲ್ಲಿ ವಿದ್ಯುತ್ ಲೈನ್ ಗಳು ಹೊಲದ ಪಕ್ಕದಲ್ಲಿದ್ದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇಷ್ಟು ಅರ್ಹತೆಯನ್ನು ಹೊಂದಿದ್ದಾರೆ ಪರಿಶಿಷ್ಟ ಜಾತಿಯವರು ಗಂಗಾಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು

ಇನ್ನು ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ ಅರ್ಜಿ ಸಲ್ಲಿಸುವವರ ಪಾಸ್ ಪೋರ್ಟ್ ಅಳತೆಯ ಫೋಟೊ ಜಾತಿ ಪ್ರಮಾಣಪತ್ರ ಕುಟುಂಬದ ವಾರ್ಷಿಕ ವರಮಾನ ಪಡಿತರಚೀಟಿ ಮತದಾರರ ಗುರುತಿನ ಚೀಟಿ ಆಧಾರ ಕಾರ್ಡ್ ಮತ್ತು ಯೋಜನಾ ವರದಿ ಕೂಡ ಬೇಕಾಗುತ್ತದೆ. ಈ ಎಲ್ಲ ದಾಖಲಾತಿಗಳು ಪಿಡಿಎಫ್ ರೂಪದಲ್ಲಿ ಇರಬೇಕು ನೂರು ಕೆಬಿ ಒಳಗಡೆ ಇದನ್ನು ನೀವು ಮೊದಲು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳ ಬೇಕು.

ಪರಿಶಿಷ್ಟ ಜಾತಿಯವರು ಗಂಗಾಕಲ್ಯಾಣ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ. ಗಂಗಾಕಲ್ಯಾಣ ಯೋಜನೆಯ ಲಿಂಕನ್ನು ತೆರೆದು ಅಲ್ಲಿ ಗಂಗಾಕಲ್ಯಾಣ ಯೋಜನೆ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಿದಾಗ ಒಂದು ಅರ್ಜಿ ಬರುತ್ತದೆ ಅಲ್ಲಿಕೆಳುವ ಮಾಹಿತಿಗಳನ್ನು ನೀಡಿ ಅರ್ಜಿಯನ್ನ ಸಲ್ಲಿಸಬೇಕು.

ಪರಿಶಿಷ್ಟ ಜಾತಿಯವರಿಗೆ ಹೊಲಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಈ ರೀತಿಯಾಗಿ ಗಂಗಾಕಲ್ಯಾಣ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಅದರ ಸದುಪಯೋಗವನ್ನು ಪಡೆದುಕೊಂಡು ಉತ್ತಮವಾದ ನೀರಾವರಿ ವ್ಯಸ್ಥೆಯನ್ನು ನಿಮ್ಮದಾಗಿಸಿಕೊಳ್ಳಿ.

Leave A Reply

Your email address will not be published.