Donkey Milk Farming: ಜೀವನದಲ್ಲಿ ಏನು ಒಂದು ಅಂದುಕೊಂಡಿರುತ್ತೀವಿ, ನಾವು ಉತ್ತಮ ಉದ್ಯೋಗ ಮಾಡಬೇಕು ಕೈ ತುಂಬಾ ಸಂಬಳ ಪಡೆಯಬೇಕು ಎಂಬುದಾಗಿ ಕನಸು ಕಾಣುತ್ತೇವೆ ಆದ್ರೆ. ಅವುಗಳು ನಮ್ಮ ಕನಸಾಗಿಯೇ ಉಳಿಯುತ್ತವೆ. ಯಶಸ್ಸು ಕಾಣಲು ಹಾಗೂ ಕೈ ತುಂಬಾ ಹಣ ಸಂಪಾದನೆ ಮಾಡಲು ತುಂಬಾನೇ ಕಷ್ಟಆಗಿದೆ, ಆದ್ರೆ ಮನುಷ್ಯ ಜೀವನದಲ್ಲಿ ಹಠ ಛಲ ಮಾಡಿದ್ರೆ ಖಂಡಿತ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ ಬೆಸ್ಟ್ ಉದಾಹರಣೆಯಾಗಿದ್ದಾರೆ.

ಭಾರತದಲ್ಲಿ ಕತ್ತೆಯನ್ನು ತುಂಬಾ ಸುಲಭವಾಗಿ ನೋಡುತ್ತಾರೆ ಅಂದ್ರೆ ಕತ್ತೆಯನ್ನು ಕೆಲಸಕ್ಕೆ ಬರದವನಂತೆ ಹೋಲಿಸುತ್ತಾರೆ, ಇನ್ನೂ ಯಾರೇ ತಪ್ಪವು ಮಾಡಿದಾಗ ಕತ್ತೆ ಅನ್ನುವ ಪದಬಳಕೆ ಮಾಡುತ್ತೆ ಅಂತ ಈ ಕತ್ತೆಯನ್ನು ಇಟ್ಟುಕೊಂಡು ಲಕ್ಷ ಲಕ್ಷ ಸಂಪಾದಿಸುವುದು ಹೇಗೆ ಅನ್ನೋದನ್ನ ಈ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ, ಅಷ್ಟಕ್ಕೂ ಆ ವ್ಯಕ್ತಿ ಯಾರು ಇವರ ಆದಾಯ ಹೇಗಿದೆ? ಈ ಕೆಲಸ ಮಾಡಲು ಅವರ ಅಭಿಪ್ರಾಯ ಏನಾಗಿತ್ತು ಅನ್ನೋದನ್ನ ಮುಂದೆ ತಿಳಿಸುತ್ತೇವೆ ಬನ್ನಿ.

ಈ ವ್ಯಕ್ತಿಯ ಹೆಸರು ಧೀರೇನ್ ಸೋಲಂಕಿ ಎಂಬುದಾಗಿ ಮೂಲತಃ ಗುಜರಾತ್ ನ ಒಂದು ಹಳ್ಳಿಯವರು, ಈತನ ಕನಸು ಟೀಚರ್ ಆಗಬೇಕು ಅನ್ನೋದು, ಆದ್ರೆ ಇವರು ಅಂದುಕೊಂಡಿದ್ದು ಹೀಗೆ, ನಾನು ಟೀಚರ್ ಆದ್ರೆ ತಿಂಗಳಿಗೆ 30 ಸಾವಿರ ಅಷ್ಟೇ ಹಣ ಸಂಪಾದಿಸಬಹುದು ಆದ್ರೆ, ಅದು ನನ್ನ ಕನಸನ್ನ ಹಿಡೇರಿಸಲು ಸಾಧ್ಯವಿಲ್ಲ, ಯಾಕೆಂದರೆ ಬರುವಂತ 30 ಸಾವಿರ EMI ಹಾಗು ಮನೆಯ ಕೆಲಸಕ್ಕೆ ಸರಿ ಹೋಗುತ್ತೆ ನಾನು ಅಂದ ಕೊಂಡ ರೀತಿಯಲ್ಲಿ ಬದುಕಲು ಸಾಧ್ಯವಿಲ್ಲ ಅಂದು ಕೊಂಡು. ಈ ಕತ್ತೆ ಸಾಕಾಣಿಕೆ ಮಾಡುವ ಪ್ರಯತ್ನ ಮಾಡುತ್ತಾರೆ.

ಪ್ರಾರಂಭದಲ್ಲಿ ಯಾವುದು ಕೂಡ ಸುಲಭ ಆಗಿರಲಿಲ್ಲ, ಕತ್ತೆ ಸಾಕಾಣಿಕೆ ಬಗ್ಗೆ ಧೀರನ್ ಹಾಗು ಅವರ ತಂದೆ ತುಂಬಾನೇ ಮಾಹಿತಿಯನ್ನು ಸಂಗ್ರಹಣೆ ಮಾಡುತ್ತಾರೆ, ಕರ್ನಾಟಕ ಹಾಗೂ ಕೇರಳದಲ್ಲಿ ಕತ್ತೆ ಸಾಕಾಣಿಕೆ ಮಾಡುವವರ ಬಳಿ ಮಾಹಿತಿ ಪಡೆಯುತ್ತಾರೆ. ಅಷ್ಟೇ ಅಲ್ಲದೆ ಇವರಿಗೆ ಅನಿಸಿದ ವಾಸ್ತವ ಸತ್ಯ ಏನ್ ಅಂದ್ರೆ, ಭಾರತದಲ್ಲಿ ಹಸು ಎಮ್ಮೆ ಹಾಲಿಗೆ 25 ರಿಂದ 50 ರೂಪಾಯಿಗಳವರೆಗೆ ಬೆಲೆ ಇದೆ, ಇದನ್ನೇ ಜನ ತಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ. ಆದ್ರೆ ಕತ್ತೆ ಹಾಲು ತುಂಬಾನೇ ದುಬಾರಿ 3500 ರೂಪಾಯಿ ಒಂದು ಲೀಟರ್ ಇದನ್ನು ಖರೀದಿಸುತ್ತಾರಾ? ಅನ್ನೋ ಪ್ರಶ್ನೆ ಮೂಡುತ್ತೆ.

ಆದ್ರೆ ಈ ಕತ್ತೆ ಹಾಲಗೆ ಭಾರತದಲ್ಲಿ ಬೆಲೆ ಇಲ್ಲದೆ ಇರಬಹುದು ಆದ್ರೆ ವಿದೇಶದಲ್ಲಿ ಇದರ ಬೆಲೆ ತುಂಬಾ ಇದೆ ಯಾಕೆಂದರೆ ಈ ಕತ್ತೆ ಹಾಲನ್ನು ಪೌಡರ್ ಮಾಡಿ ಹಲವು ಔಷಧಗಳಿಗೆ ಹಾಗೂ ಬೇಬಿ ಸೋಪು, ಕ್ರೀಮ್ ಗಳಿಗೆ ಬಳಸುತ್ತಾರೆ ಹಾಗಾಗಿ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ ಈ ಕತ್ತೆ ಹಾಲಿಗೆ.

2020 ರ ಸಂಶೋಧನೆ ಪ್ರಕಾರ
2020 ರ ಸಂಶೋಧನಾ ಪ್ರಬಂಧವು ಕತ್ತೆ ಹಾಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಜಠರಗರುಳಿನ ಸಸ್ಯವನ್ನು ನಿಯಂತ್ರಿಸುತ್ತದೆ ಮತ್ತು ಉರಿಯೂತದ ಕಾಯಿಲೆಗಳನ್ನು ತಡೆಯುತ್ತದೆ ಎಂದು ಹೇಳುತ್ತದೆ. ಹಸುವಿನ ಹಾಲಿನ ಪ್ರೋಟೀನ್ ಅಲರ್ಜಿ (CMPA) ಹೊಂದಿರುವ ಶಿಶುಗಳು ಮತ್ತು ರೋಗಿಗಳಿಗೆ ಪರ್ಯಾಯವಾಗಿ ಇದನ್ನು ದೀರ್ಘಕಾಲ ಬಳಸಲಾಗಿದೆ.

1kg ಪುಡಿಗೆ 17 ಲೀಟರ್ ಹಾಲು ಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 63,000 ರೂ.ಗೆ ಮಾರಾಟವಾಗುತ್ತಿದೆ ಎಂದು ಅವರು ಹೇಳುತ್ತಾರೆ. ಆರಂಭಿಕ ತೊಂದರೆಗಳ ನಂತರ, ಧೀರನ್ ವ್ಯವಹಾರವನ್ನು ವಿಸ್ತರಿಸಲು ಮತ್ತು ಕ್ರಮೇಣ ತನ್ನ ಫಾರ್ಮ್ ಅನ್ನು 50 ಕತ್ತೆಗಳಿಗೆ ವಿಸ್ತರಿಸಲು ಸಾಧ್ಯವಾಯಿತು. ಇವರ ಜಮೀನಿನಲ್ಲಿ ಪ್ರಸ್ತುತ ದಿನಕ್ಕೆ 15 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕತ್ತೆ ಸಾಕಾಣಿಕೆ ಮಾಡಿ ಅದರ ಹಾಲಿನ ಪೌಡರ್ ಮಾಡಿ ವಿದೇಶಕ್ಕೆ ಮಾರಾಟ ಮಾಡುವ ಮೂಲಕ ತಿಂಗಳಿ 3 ರಿಂದ 4 ಲಕ್ಷ ರೂಪಾಯಿಯನ್ನು ಈ ಯುವ ರೈತ ಸಂಪಾದಿಸುತ್ತಿದ್ದಾರೆ

By

Leave a Reply

Your email address will not be published. Required fields are marked *